ಇದೊಂದು ಹೃದಯಸ್ಪರ್ಶಿ ವಿಡಿಯೋ : ಹಕ್ಕಿಗೆ ಆಹಾರ ನೀಡಿ ಹಸಿವು ನೀಗಿಸುತ್ತಿರುವ ಪುಟಾಣಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 15, 2025 | 11:40 AM

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಅದರಲ್ಲಿಯೂ ಈ ಪುಟಾಣಿಗಳ ವಿಡಿಯೋವನ್ನು ನೋಡುವ ಖುಷಿಯೇ ಬೇರೆ. ಮುಗ್ಧತೆ, ತರಲೆ, ತುಂಟಾಟಗಳು ಸಹಜವಾಗಿ ನೋಡುಗರ ಮನಸ್ಸನ್ನು ಗೆಲ್ಲುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟಾಣಿಯೊಂದು ಪುಟ್ಟ ಪಕ್ಷಿಗೆ ಆಹಾರವನ್ನು ನೀಡುತ್ತಿದೆ. ಈ ಪುಟಾಣಿಯ ಹೃದಯವಂತಿಕೆಯೂ ನೆಟ್ಟಿಗರ ಮನಸ್ಸನ್ನು ಗೆದ್ದುಕೊಂಡಿದ್ದು ಮೆಚ್ಚುಗೆಯ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಇದೊಂದು ಹೃದಯಸ್ಪರ್ಶಿ ವಿಡಿಯೋ : ಹಕ್ಕಿಗೆ ಆಹಾರ ನೀಡಿ ಹಸಿವು ನೀಗಿಸುತ್ತಿರುವ ಪುಟಾಣಿ
ವೈರಲ್​​ ವಿಡಿಯೋ
Image Credit source: Twitter
Follow us on

ಮುಗ್ಧತೆ (innocence) ಎಂದಾಗ ಮೊದಲು ನೆನಪಾಗುವುದೇ ಪುಟಾಣಿ ಮಕ್ಕಳು (children). ಜಗದ ಪರಿವೆ ಇಲ್ಲದೇ ತಮಗೆ ತೋಚಿದ್ದನ್ನು ಮಾಡುವ, ಹೇಳುವ, ತುಂಟಾಟ ಮಾಡುವ ಮಕ್ಕಳನ್ನು ಕಂಡಾಗ ಖುಷಿಯೆನಿಸುತ್ತದೆ. ಹೌದು, ಕೆಲವೊಮ್ಮೆ ಕೆಲವು ಮಕ್ಕಳು ಮಾಡುವ ಕೆಲಸಗಳು ಕೂಡ ದೊಡ್ಡವರು ಬಾಯಿಯ ಮೇಲೆ ಬೆರೆಳು ಇಡುವಂತೆ ಮಾಡುತ್ತದೆ. ಈಗಿನ ಕಾಲದ ಮಕ್ಕಳಿಗೆ ಬುದ್ಧಿವಂತ (intelligence) ರಾಗಿದ್ದು, ಬಹಳನೇ ಯೋಚಿಸಿ ತಮಗೆ ಅನಿಸದ್ದನ್ನು ಮಾಡುತ್ತಾರೆ. ಇದೀಗ ವೈರಲ್ (viral) ಆಗಿರುವ ವಿಡಿಯೋದಲ್ಲಿ ಪುಟಾಣಿಯೊಂದು ಪುಟ್ಟದೊಂದು ಹಕ್ಕಿ (birds) ಗೆ ಆಹಾರ ನೀಡುತ್ತಾ, ಅದರ ಹಸಿವನ್ನು ನೀಗಿಸುವ ಪ್ರಯತ್ನ ಮಾಡಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ (social media) ಬಳಕೆದಾರರು ಪುಟಾಣಿ ಮಾಡಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋವನ್ನು Buitengebieden ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ‘ಜಗತ್ತಿನಲ್ಲಿ ನೀವು ಏನು ಬೇಕಾದರೂ ಆಗಬಹುದು ಆದರೆ ದಯೆಯಿಂದಿರಿ’ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿ ಮಗುವೊಂದು ಹಕ್ಕಿಗೆ ಆಹಾರವನ್ನು ನೀಡುತ್ತಿದೆ. ಪುಟಾಣಿಯೊಂದು ಕೈಯಲ್ಲಿ ಲೋಟವನ್ನು ಹಿಡಿದುಕೊಂಡಿದ್ದು, ಅದರಲ್ಲಿ ದ್ರವ ರೂಪದ ಆಹಾರವಿದೆ. ಈ ಪುಟಾಣಿಯೂ ಚಮಚದಿಂದ ಪಕ್ಷಿಗೆ ಆಹಾರವನ್ನು ತಿನ್ನಿಸುವುದನ್ನು ನೋಡಬಹುದು.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಇದನ್ನೂ ಓದಿ : ತರಗತಿ ಕೊಠಡಿ ತಂಪಾಗಿಸಲು ಸಾಂಪ್ರಾದಾಯಿಕ ವಿಧಾನದ ಮೊರೆ ಹೋದ ಪ್ರಾಂಶುಪಾಲೆ, ಇಲ್ಲಿದೆ ವಿಡಿಯೋ

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಒಂದು ಲಕ್ಷ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಬಳಕೆದಾರರು ತರಹೇವಾರಿ ಕಾಮೆಂಟ್ ಮಾಡುವ ಮೂಲಕ ಈ ಪುಟಾಣಿಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ಇಂತಹ ಸೌಮ್ಯ ಹಾಗೂ ದಯಾಳು ವ್ಯಕ್ತಿತ್ವ. ಈ ದೃಶ್ಯವನ್ನು ಮತ್ತೆ ಮತ್ತೆ ನೋಡಬೇಕೇನಿಸುತ್ತದೆ’ ಎಂದಿದ್ದಾರೆ. ಮತ್ತೊಬ್ಬರು, ‘ಕರುಣೆ ನಿಜಕ್ಕೂ ಸುಂದರವಾದದ್ದು’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊರ್ವ ಬಳಕೆದಾರರು, ‘ಮಕ್ಕಳಿಗೆ ಪ್ರಾಣಿಗಳ ಮೇಲೆ ದಯೆ ಹಾಗೂ ಗೌರವ ತೋರಿಸಲು ಕಲಿಸುವುದು ಉತ್ತಮ ವ್ಯಕ್ತಿಯಾಗಲು ಸಹಾಯ ಮಾಡುತ್ತದೆ’ ಎಂದಿದ್ದಾರೆ. ಕೆಲವರು ಈ ಪುಟಾಣಿಯ ಹೃದಯವಂತಿಕೆ ಮೆಚ್ಚಿಕೊಂಡಿದ್ದು ಹಾರ್ಟ್ ಸಿಂಬಲ್ ಕಳುಹಿಸಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ