Video: ನಡುರಸ್ತೆಯಲ್ಲೇ ಕೋಪಿಸಿಕೊಂಡ ಮಗಳನ್ನು ರಮಿಸಿ ಸಮಾಧಾನ ಪಡಿಸಿದ ತಂದೆ

ಪುಟಾಣಿಗಳು ಏನು ಮಾಡಿದ್ರೂ ಮುದ್ದಾಗಿ ಕಾಣಿಸ್ತಾರೆ. ಕೋಪಿಸಿಕೊಂಡರಂತೂ ಇನ್ನು ಮುದ್ದಾಗಿ ಕಾಣುವ ಈ ಪುಟ್ಟ ಮಕ್ಕಳನ್ನು ಅಪ್ಪಿ ಮುದ್ದಾಡಬೇಕೆನಿಸುತ್ತದೆ. ಈ ಪುಟಾಣಿಗಳಕೋಪ, ಮುನಿಸು ಹೀಗೆ ಆಟ ತುಂಟಾಟದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಪುಟಾಣಿಯೊಂದು ನಡುರಸ್ತೆಯಲ್ಲಿ ತನ್ನ ತಂದೆಯ ಮೇಲೆ ಕೋಪಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ನಡುರಸ್ತೆಯಲ್ಲೇ ಕೋಪಿಸಿಕೊಂಡ ಮಗಳನ್ನು ರಮಿಸಿ ಸಮಾಧಾನ ಪಡಿಸಿದ ತಂದೆ
ವೈರಲ್‌ ವಿಡಿಯೋ
Image Credit source: Facebook

Updated on: Apr 02, 2026 | 11:16 AM

ತಂದೆ ಮಗಳ ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಗಳ ಪಾಲಿಗೆ ಅಪ್ಪ (father) ಎಲ್ಲವೂ ಆಗಿರುತ್ತಾನೆ. ಇತ್ತ ಕಷ್ಟಪಟ್ಟು ದುಡಿದು ಮಗಳ ಇಷ್ಟಗಳನ್ನು ಈಡೇರಿಸುವ ಅಪ್ಪನಿಗೆ ಆಕೆಗಿಂತ ದೊಡ್ಡ ಪ್ರಪಂಚ ಬೇರೆ ಇಲ್ಲ. ಮಗಳ ಖುಷಿಯಲ್ಲೇ ತನ್ನ ಖುಷಿ ಕಾಣುವ ತಂದೆಯ ಹೃದಯ ಸ್ಪರ್ಶಿ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಆದರೆ  ಪುಟಾಣಿಯೊಂದು ನಡುರಸ್ತೆಯಲ್ಲೇ ತಂದೆಯ ಮೇಲೆ ಕೋಪಿಸಿಕೊಂಡಿದೆ. ತಂದೆ ಎಷ್ಟೇ ರಮಿಸಿದ್ರೂ ಈ ಪುಟಾಣಿಯ ಕೋಪ ಮಾತ್ರ ಕಡಿಮೆಯಾಗಿಲ್ಲ. ಈ ಮುದ್ದಾದ ವಿಡಿಯೋ ನೆಟ್ಟಿಗರ ಮೊಗದಲ್ಲಿ ನಗುತರಿಸಿದೆ.

republicmag.pk ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತಂದೆ ಮಗಳ ಬಾಂಧವ್ಯ ಕಾಣಬಹುದು. ಪುಟಾಣಿಯೊಂದು ನಡುರಸ್ತೆಯಲ್ಲೇ ಕೋಪಿಸಿಕೊಂಡಿದೆ. ಇತ್ತ ತಂದೆಯೂ ತನ್ನ ಮಗಳನ್ನು ರಮಿಸಿ ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದಾನೆ. ಆದರೆ ಈ ಪುಟ್ಟ ಮಗಳು ಮಾತ್ರ ತಂದೆ ಮಾತನ್ನು ಕೇಳುತ್ತಲೇ ಇಲ್ಲ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಎಷ್ಟು ಚಂದ ಈ ಬಾಂಧವ್ಯ; ಅಪ್ಪನಿಗೆ ತನ್ನ ಪುಟ್ಟ ಕೈಗಳಿಂದ ಕೈ ತುತ್ತು ನೀಡಿದ ಪುಟಾಣಿ

ಈ ವಿಡಿಯೋ ಮೂವತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮುದ್ದಾಗಿದೆ ಈ ದೃಶ್ಯ ಎಂದರೆ, ಮತ್ತೊಬ್ಬರು, ಮಗಳನ್ನು ಸಮಾಧಾನ ಪಡಿಸಲು ತಂದೆಗೆ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.. ಇನ್ನೊಬ್ಬರು, ಈ ಚೋಟುದ್ದ ಪುಟಾಣಿ ಕೋಪ ಎಷ್ಟಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us