Video: ಅಪ್ಪ ನೀನು ಸುಮ್ನೆ ಇರ್ತಿಯಾ; ತನ್ನದೇ ಭಾಷೆಯಲ್ಲಿ ತಂದೆಗೆ ಬೈಯುತ್ತಿರುವ ಪುಟಾಣಿ

ಮುದ್ದು ಮಕ್ಕಳು ಏನು ಮಾಡಿದ್ರೂ ನೋಡೋಕೆ ಚಂದ. ಕೋಪಿಸಿಕೊಂಡ್ರೆ ಇನ್ನು ಸುಂದರವಾಗಿ ಕಾಣಿಸುತ್ತಾರೆ.ಈ ಪುಟಾಣಿಯೊಂದು ತನ್ನದೇ ಭಾಷೆಯಲ್ಲಿ ತನ್ನ ತಂದೆಗೆ ಬೈಯಲು ಶುರು ಮಾಡಿದೆ. ಈ ಪುಟ್ಟ ಹುಡುಗಿಯ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ.

Video: ಅಪ್ಪ ನೀನು ಸುಮ್ನೆ ಇರ್ತಿಯಾ; ತನ್ನದೇ ಭಾಷೆಯಲ್ಲಿ ತಂದೆಗೆ ಬೈಯುತ್ತಿರುವ ಪುಟಾಣಿ
ವೈರಲ್‌ ವಿಡಿಯೋ
Image Credit source: Instagram

Updated on: May 20, 2026 | 5:27 PM

ಅಪ್ಪ ಅಂದ್ರೆ ಹೆಣ್ಣು ಮಕ್ಕಳಿಗೆ (daughter) ತುಂಬಾನೇ ಇಷ್ಟ. ಮನೆಯಲ್ಲಿ ಹೆಣ್ಣು ಮಗುವಿದ್ದರೆ ತಾಯಿಗಿಂತ ತಂದೆಯನ್ನೇ ಹೆಚ್ಚು ಹಚ್ಚಿಕೊಂಡು ಬಿಡುವುದಿದೆ. ಇದೀಗ ಪುಟ್ಟ ಮಗುವೊಂದು ಹೆತ್ತವರ ಮೇಲೆ ಕೋಪಗೊಂಡಂತಿದೆ. ಹೀಗಾಗಿ ಅಪ್ಪನ ಮುಂದೆ ನಿಂತು ತನ್ನದೇ ಭಾಷೆಯಲ್ಲಿ ಬೈಯುತ್ತಿದ್ದು, ಈ ಮುದ್ದಾದ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಪುಟಾಣಿಯ ಕ್ಯೂಟ್ ನೆಸ್‌ಗೆ ಫುಲ್ ಫಿದಾ ಆಗಿದ್ದಾರೆ.

Alpha Culture ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿಯ ಮುದ್ದಾದ ಬೈಗುಳದ ದೃಶ್ಯ ಇದಾಗಿದೆ. ಈ ಪುಟ್ಟ ಹುಡುಗಿ ಯಾವುದೋ ವಿಷಯದ ಬಗ್ಗೆ ತನ್ನ ಹೆತ್ತವರ ಮೇಲೆ ಕೋಪಗೊಂಡಿದ್ದಾಳೆ. ಹೀಗಾಗಿ ತನ್ನ ಎದುರಿಗಿರುವ ತಂದೆಯ ಮೇಲೆ ಕೋಪಗೊಂಡು ತನ್ನದೇ ಭಾಷೆಯಲ್ಲಿ ಕೂಗಾಡುತ್ತಿದ್ದಾಳೆ. ಮಗಳು ಬೈಯುವುದನ್ನು ಕಂಡು ತಂದೆಯೂ ಕೀಟಲೆ ಮಾಡುತ್ತಿರುವುದನ್ನು ನೋಡಬಹುದು. ಇದು ಪುಟಾಣಿಯ ಪಿತ್ತನೆತ್ತಿಗೇರುವಂತೆ ಮಾಡಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮುಗ್ಧ ಮನಸ್ಸುಗಳ ಶುದ್ಧ ಸ್ನೇಹ: ಬೀದಿ ನಾಯಿ ಜತೆಗೆ ಆಟವಾಡಿದ ಪುಟಾಣಿಗಳು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಾನು ಈ ಪುಟಾಣಿಗೆ ಸಪೋರ್ಟ್ ಮಾಡ್ತೇನೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ತುಂಬಾ ಗಂಭೀರ ವಿಷ್ಯ ಎಂದು ಕಾಣಿಸುತ್ತದೆ ಎಂದಿದ್ದಾರೆ. ಮತ್ತೊಬ್ಬರು, ಈಗ್ಲೇ ಹೀಗೆ, ಮುಂದೆ ಈ ಪುಟಾಣಿಯನ್ನು ಸಂಭಾಳಿಸೋದು ತುಂಬಾನೇ ಕಷ್ಟ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us