Viral : ಛೇ ಇದೆಂಥಾ ಅಸಹ್ಯ : ಲಿಫ್ಟ್​​ನೊಳಗೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 12, 2025 | 6:13 PM

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋಗಳನ್ನು ನೋಡಿದಾಗ ಇಂತಹ ಜನರು ಇರ್ತಾರಾ ಎಂದೆನಿಸುತ್ತದೆ. ಕೆಲವರಂತೂ ಸಾರ್ವಜನಿಕ ಸ್ಥಳಗಳಲ್ಲಿ ಅಸಹ್ಯ ಎನಿಸುವ ಹಾಗೆ ವರ್ತಿಸುತ್ತಾರೆ. ಈ ರೀತಿಯ ಸಾಕಷ್ಟು ವಿಡಿಯೋಗಳು ವೈರಲ್ ಆಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಲಿಫ್ಟ್ ನೊಳಗೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Viral : ಛೇ ಇದೆಂಥಾ ಅಸಹ್ಯ : ಲಿಫ್ಟ್​​ನೊಳಗೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ
ವೈರಲ್​​ ವಿಡಿಯೋ
Follow us on

ಈಗಿನ ಕಾಲದಲ್ಲಿ ವಿದ್ಯಾವಂತ (educated) ರಾಗಿದ್ದರೂ ಕೂಡ ಕೆಲವರಿಗೆ ಹೇಗೆ ವರ್ತಿಸಬೇಕೇಂಬುದು ತಿಳಿದಿರುವುದಿಲ್ಲ. ಹೀಗಾಗಿ ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಅಸಹ್ಯ ಹುಟ್ಟಿಸುವಂತೆ ವರ್ತಿಸುತ್ತಾರೆ. ಅಷ್ಟೇ ಕೆಲವರ ವರ್ತನೆ ಇತರರಿಗೂ ಮುಜುಗರವನ್ನುಂಟು ಮಾಡುತ್ತದೆ. ಇಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (viral) ಆಗುವುದನ್ನು ಕಾಣುತ್ತೇವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಲಿಫ್ಟ್ (lift) ಯೊಳಗೆ ಮೂತ್ರ ವಿಸರ್ಜನೆ ಮಾಡಿ ಅದನ್ನು ತನ್ನ ಕಾಲಿನಿಂದ ಲಿಫ್ಟ್ ಸಂಧಿಯೊಳಗೆ ಮಾಡಲು ಪ್ರಯತ್ನಿಸಿದ್ದಾನೆ. ಅಸಹ್ಯ ಹುಟ್ಟುವಂತೆ ಮಾಡಿದ್ದಾನೆ. ಈತನ ಈ ವರ್ತನೆಗೆ ಸೋಶಿಯಲ್ ಮೀಡಿಯಾ (social media) ದಲ್ಲಿ ನೆಟ್ಟಿಗರು ಖಾರವಾಗಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

Ghar Ke Kalesh ಹೆಸರಿನ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದ ಪ್ರಾರಂಭದಲ್ಲಿ ಒಂದು ಮಹಡಿಯಲ್ಲಿ ವ್ಯಕ್ತಿಯೊಬ್ಬನು ನೀರಿನ ಕ್ಯಾನ್‌ಗಳನ್ನು ಇಳಿಸುತ್ತಿದ್ದಾನೆ. ಲಿಫ್ಟ್‌ ಕ್ಲೋಸ್‌ ಆಗುತ್ತಿದ್ದಂತೆಯೇ ಹೊರಗಿದ್ದ ವ್ಯಕ್ತಿಯೂ ಲಿಫ್ಟ್‌ನೊಳಗೆ ಸೇರಿಕೊಳ್ಳುತ್ತಾನೆ. ಲಿಫ್ಟ್ ಯೊಳಗೆ ಒಬ್ಬನೇ ವ್ಯಕ್ತಿಯಿರುವ ಕಾರಣ ಮೂತ್ರ ವಿಸರ್ಜನೆ ಮಾಡುತ್ತಾನೆ. ಲಿಫ್ಟ್ ನಿಂತ ತಕ್ಷಣವೇ ಲಿಫ್ಟ್‌ ಸಂದಿಯೊಳಗೆ ಮೂತ್ರವನ್ನು ತನ್ನ ಕಾಲಿನಿಂದ ಇಳಿಸುತ್ತಿದ್ದಾನೆ.

ಇದನ್ನೂ ಓದಿ : ತಿರುಮಲ ಪಾವಿತ್ರ್ಯಕ್ಕೆ ಧಕ್ಕೆ : ಚಪ್ಪಲಿ ಧರಿಸಿ ಶ್ರೀವಾರಿ ದೇವಾಲಯದ ಮುಖ್ಯದ್ವಾರ ಪ್ರವೇಶಿಸಿದ ಮೂವರು ಭಕ್ತರು

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ :

ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಎರಡು ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ದಯವಿಟ್ಟು ಈ ವಿಡಿಯೋ ಬಗ್ಗೆ ತಿಳಿಸಿ, ಈ ವಿಡಿಯೋ ಯಾವ ರಾಷ್ಟ್ರಕ್ಕೆ ಸೇರಿದ್ದು ತಿಳಿಸಿ ಎಂದಿದ್ದಾರೆ. ಇನ್ನೊರ್ವ ಬಳಕೆದಾರರು ನಾನು ನಮ್ಮ ದೇಶದ ಪ್ರಧಾನಿ ಪ್ರಶ್ನಿಸುತ್ತಿದ್ದೇನೆ, ಯುರೋಪ್ ನಂತೆ ಅಲ್ಲ, ನಮ್ಮ ದೇಶ ಯಾಕೆ ಇನ್ನು ಕೂಡ ಹಿಂದಿದೆ ಎಂದಿದೆ? ಎಂದು ಹೇಳಿದ್ದಾರೆ. ಇನ್ನೊಬ್ಬರು, ‘ಈ ವ್ಯಕ್ತಿಗೆ ಯಾವ ರೀತಿ ಶಿಕ್ಷೆ ನೀಡಬೇಕು’ ಎಂದು ಪ್ರಶ್ನಿಸಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ