
ಓದು ಮುಗಿಯುತ್ತಿದ್ದಂತೆ ಉದ್ಯೋಗಕ್ಕಾಗಿ ಹೆಚ್ಚಿನವರು ವಿದೇಶಕ್ಕೆ (foreign) ತೆರಳುತ್ತಾರೆ. ವಿದೇಶದಲ್ಲಿ ಜಾಬ್ ಸಿಕ್ಕರೆ ಲೈಫ್ ಸೆಟ್ಲ್ ಆದಂತೆ ಅಂದುಕೊಳ್ತಾರೆ. ಹೀಗೆ ವರ್ಷಾನುಗಟ್ಟಲೇ ವಿದೇಶದಲ್ಲಿ ನೆಲೆಸಿದವರಿಗೆ ಮತ್ತೆ ಹುಟ್ಟೂರಿಗೆ ಮರಳಬೇಕಾದ ಪರಿಸ್ಥಿತಿ ಬಂದಾಗ ಆ ಸ್ಥಿತಿ ಹೇಳಲಾಗದು. ಆದರೆ ಇಲ್ಲೊಬ್ಬ ವ್ಯಕ್ತಿಯು ಒಂದಲ್ಲ ಎರಡಲ್ಲ ಸರಿಸುಮಾರು 23 ವರ್ಷಗಳ ಕಾಲ ಅಮೆರಿಕದಲ್ಲಿ ನೆಲೆಸಿದ್ದು, ಇದೀಗ ವಿದೇಶದಿಂದ ಭಾರತಕ್ಕೆ ಮರಳಿದ್ದಾರೆ. ಈ ಕಠಿಣ ನಿರ್ಧಾರದ ಹಿಂದಿನ ಕಾರಣ ತಿಳಿಸಿದ್ದಾರೆ. ತನ್ನ ಬದುಕಿನಲ್ಲಿ ನಡೆದ ಘಟನೆಗಳು ಈ ವ್ಯಕ್ತಿಯನ್ನು ಭಾವುಕರನ್ನಾಗಿಸಿದೆ. ಈ ಕುರಿತಾದ ರೆಡ್ಡಿಟ್ ಪೋಸ್ಟ್ ಸದ್ಯ ವೈರಲ್ ಆಗಿದೆ.
ಆರ್ ರಿಟರ್ನ್ ಟು ಇಂಡಿಯಾ (r/returnToIndia) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇಲ್ಲಿ ಅಮೆರಿಕದಿಂದ ಭಾರತಕ್ಕೆ ಮರಳಿದ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ. 15ನೇ ವಯಸ್ಸಿಗೆ ಅಮೆರಿಕಕ್ಕೆ ತೆರಳಿ, ನ್ಯೂಯಾರ್ಕ್ ನಗರದ ಕಾಲೇಜಿನಲ್ಲಿ ಬಯೋಮೆಡಿಕಲ್ ಇಂಜಿನಿಯರಿಂಗ್ ಮುಗಿಸಿದೆ. ಅಲ್ಲಿಯೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣ ಪೂರ್ಣಗೊಳಿಸಿದೆ ಎಂದಿದ್ದಾರೆ.
I returned to India after 23 yrs.
by
u/metauniverse in
returnToIndia
ಓದು ಮುಗಿಯುತ್ತಿದ್ದಂತೆ ಅಲ್ಲಿಯೇ ಉದ್ಯೋಗವು ಸಿಕ್ಕಿತು. ಹೌದು, ಔಷಧೀಯ ಉದ್ಯಮವೊಂದರಲ್ಲಿ ಕೆಲಸಕ್ಕೆ ಸೇರಿದೆ. ಪೆನ್ಸಿಲ್ವೇನಿಯಾದಲ್ಲಿ ಸ್ವಂತ ಮನೆ ಖರೀದಿಸಿದೆ. ಎಲ್ಲವೂ ಸರಿಯಾಯ್ತು ಎನ್ನುವಷ್ಟರಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಂದೆ 70ನೇ ವಯಸ್ಸಿನಲ್ಲಿಯೇ ಅಗಲಿದರು. ಅದಾದ ಬಳಿಕ ಜೀವನದ ಹಾದಿಯೇ ಬದಲಾಯಿತು. ಕ್ಯಾನ್ಸರ್ ಪೀಡಿತ ತಾಯಿ ಭಾರತದಲ್ಲಿ ಒಂಟಿಯಾಗಿ ಬಿಟ್ಟರು. ಹೀಗಾಗಿ ಭಾರತಕ್ಕೆ ಮರಳುವುದು ಅನಿರ್ವಾಯವಾಯ್ತು ಎಂದು ಹೇಳಿದ್ದಾರೆ.
ಭಾರತಕ್ಕೆ 2022ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, 2023ರ ವೇಳೆ ಪೆನ್ಸಿಲ್ವೇನಿದಲ್ಲಿದ್ದ ತಮ್ಮ ದುಡಿಮೆಯಿಂದಲೇ ಖರೀದಿಸಿದ ಮನೆಯನ್ನು ಮಾರಾಟ ಮಾಡಿ ಮುಂಬೈಗೆ ಬಂದೆ. ಇದೀಗ ಭಾರತದಲ್ಲಿ ತಂತ್ರಜ್ಞಾನ ಸಮಾಲೋಚಕರಾಗಿ ಕೆಲಸ ಮಾಡುತ್ತಿದ್ದೇನೆ. ವಿದೇಶಕ್ಕಿಂತ ಹುಟ್ಟೂರಿನಲ್ಲಿ ಕುಟುಂಬದ ಜತೆಗೆ ಸಮಯ ಕಳೆಯುವುದು ಮುಖ್ಯ. ಲಕ್ಷುರಿ ಜೀವನಕ್ಕಿಂತ ಅಮ್ಮನ ಕೈರುಚಿ ತಿನ್ನುವುದರಲ್ಲಿರುವ ಖುಷಿಯೇ ಬೇರೆ. ತಂದೆ ತಾಯಿ, ಕುಟುಂಬದ ಸದಸ್ಯರು ನೀಡುವ ಪ್ರೀತಿ , ಕಾಳಜಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ದುಬೈ ಜೀವನಶೈಲಿಗೆ ಹೊಂದಿಕೊಳ್ಳೋದು ಕಷ್ಟ; ಕಹಿ ಅನುಭವ ಬಿಚ್ಚಿಟ್ಟ ಕೋಲ್ಕತ್ತಾ ಶೆಫ್
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಹೆತ್ತವರಿಗಿಂತ ಯಾವುದು ಮುಖ್ಯ ಅಲ್ಲ ಎಂದಿದ್ದಾರೆ. ಇನ್ನೊಬ್ಬರು, ಏಳು ಬೀಳು ಸಾಮಾನ್ಯ, ಏನೇ ಆದ್ರೂ ಮುಂದೆ ಸಾಗಿರಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಎಲ್ಲವನ್ನೂ ಪಾಸಿಟಿವ್ ಆಗಿ ಸ್ವೀಕರಿಸಿ ಎಂದು ಧೈರ್ಯ ತುಂಬಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ