Video: 79ನೇ ಸ್ವಾತಂತ್ರ್ಯೋತ್ಸವಕ್ಕೆ ಅದ್ಭುತ ಅರ್ಥ ನೀಡುವ ದೃಶ್ಯ; ಹುಲಿ-ನವಿಲು ಮುಖಾಮುಖಿ
ಭಾರತ 79ನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ದಿನಕ್ಕೆ ಅರ್ಥ ನೀಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಲವು ಎಕ್ಸ್ ಬಳಕೆದಾರರೂ ಹಂಚಿಕೊಂಡಿದ್ದಾರೆ. ಹುಲಿ ಮತ್ತು ನವಿಲು ಮುಖಾಮುಖಿಯಾಗಿರುವ ಒಂದು ಅದ್ಭುತ ದೃಶ್ಯ ಇದಾಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

ಭಾರತವು 79ನೇ ವರ್ಷದ ಸ್ವಾತಂತ್ರ್ಯ ದಿನವನ್ನು (Independence Day) ಆಚರಿಸಿಕೊಳ್ಳುತ್ತಿದೆ. ದೇಶದಲ್ಲಿ ಸಂಭ್ರಮಾಚರಣೆ ಹೆಚ್ಚಿದ್ದು, ಅದ್ಧೂರಿಯಾಗಿ ಹಬ್ಬದಂತೆ ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಭಾರತದ ರಾಷ್ಟ್ರೀಯ ಪ್ರಾಣಿ ಮತ್ತು ಪಕ್ಷಿ ಒಂದೇ ಫ್ರೇಮ್‌ನಲ್ಲಿ ಸೆರೆಯಾಗಿದೆ. ಹುಲಿ ಮತ್ತು ನವಿಲು (Peacock and Tiger) ಒಟ್ಟಿಗೆ ಸೆರೆಯಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಂತಹ ದೃಶ್ಯ ತುಂಬಾ ಅಪರೂಪವಾಗಿದ್ದು, ಎಲ್ಲರಿಗೂ ತುಂಬಾ ಖುಷಿಯನ್ನು ನೀಡಿದೆ.
ಭಾರತವು 79ನೇ ಸ್ವಾತಂತ್ರ್ಯದ ಸಂಭ್ರಮದಲ್ಲಿರುವ ಸಮಯದಲ್ಲಿ ಈ ವೀಡಿಯೊ ವಿಶೇಷ ಅರ್ಥವನ್ನು ಪಡೆದುಕೊಂಡಿದೆ. ಹುಲಿ ಶಕ್ತಿ ಮತ್ತು ಧೈರ್ಯವನ್ನು ಪ್ರತಿನಿಧಿಸಿದರೆ, ನವಿಲು ಭಾರತದ ಚೈತನ್ಯವನ್ನು ಸೆರೆಹಿಡಿಯುವ ಗುಣಗಳಾದ ಕೃಪೆ ಮತ್ತು ಚೈತನ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ. ಈ ವಿಡಿಯೋವನ್ನು ರಾಕೇಶ್ ಭಟ್ ಸೆರೆಹಿಡಿದಿದ್ದಾರೆ. ಇದನ್ನು ಅರಣ್ಯ ಸಂರಕ್ಷಣಾಧಿಕಾರಿ (IFS) ಡಾ. ಪಿ.ಎಂ. ಧಾಕಟೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ರಾಷ್ಟ್ರೀಯ ಪ್ರಾಣಿ ಮತ್ತು ಪಕ್ಷಿ, ಒಂದೇ ಚೌಕಟ್ಟಿನಲ್ಲಿ ಒಟ್ಟಿಗೆ ಇರುವ ಅದ್ಭುತ ವಿಡಿಯೋ! ಭಾರತದ ರೋಮಾಂಚಕ ಚೈತನ್ಯದ ಪರಿಪೂರ್ಣ ಸಂಕೇತ ಎಂದು ಈ ವಿಡಿಯೋ ಶೀರ್ಷಿಕೆಯನ್ನು ನೀಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
An amazing video, our national animal and bird, together in one frame! A perfect symbol of India’s vibrant spirit. Wishing everyone a Happy Independence Day. आप सभी को स्वतंत्रता दिवस की हार्दिक बधाई एवं शुभकामनाएं, जय हिंद। 🇮🇳 VC: Rakesh Bhatt#IndependenceDay #JaiHind… pic.twitter.com/25UEfF7xxa
— Dr. PM Dhakate (@paragenetics) August 15, 2025
ಇದನ್ನೂ ಓದಿ: 1947 Calendar Viral: 78 ವರ್ಷಗಳ ಬಳಿಕ ಶುಕ್ರವಾರವೇ ಬಂದ ಸ್ವಾತಂತ್ರ್ಯ ದಿನ; 1947 ರ ಕ್ಯಾಲೆಂಡರ್ ವೈರಲ್
ಹುಲಿಯು ನವಿಲಿನ ಹಿಂದೆ ಸದ್ದಿಲ್ಲದೆ ಬರುತ್ತಿರುವುದನ್ನು ಈ ದೃಶ್ಯದಲ್ಲಿ ನೋಡಬಹುದು. ಈ ವಿಡಿಯೋ ನೋಡಿದ ಬಳಕೆದಾರರಲ್ಲಿ ಒಬ್ಬರು ಎಂತಹ ಅಪರೂಪದ ಮತ್ತು ಸುಂದರವಾದ ದೃಶ್ಯ, ಹುಲಿಯ ಶಕ್ತಿ ಮತ್ತು ನವಿಲಿನ ಕೃಪೆ ಸಾಮರಸ್ಯದಿಂದ ಕೂಡಿದೆ. ಈ ಸ್ವಾತಂತ್ರ್ಯ ದಿನದಂದು ಭಾರತದ ಶ್ರೀಮಂತ ನೈಸರ್ಗಿಕ ಪರಂಪರೆಗೆ ಸೂಕ್ತವಾದ ಗೌರವ ಎಂದು ಕಾಮೆಂಟ್ ಮಾಡಿದ್ದಾರೆ. ಈ ದೃಶ್ಯ ಎಷ್ಟು ಸುಂದರ ಮತ್ತು ಶಾಂತಿಯುತವಾಗಿದೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಈ ಅಪರೂಪದ ದೃಶ್ಯಾವಳಿ ಇಂದಿನ ದಿನಕ್ಕೆ ತುಂಬಾ ಪರಿಪೂರ್ಣವಾದ ಅರ್ಥವನ್ನು ನೀಡುತ್ತದೆ ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:43 pm, Fri, 15 August 25








