ಫ್ಯಾನ್ ರಿಪೇರಿ ಮಾಡಲು ಬಂದ ವ್ಯಕ್ತಿಯನ್ನು ಪ್ರೀತಿಸಿ, ಮದುವೆಯಾದ ಯುವತಿ

ಪ್ರೀತಿ ಮಾಡಿದ ಮೇಲೆ ಅಲ್ಲಿ ಆಸ್ತಿ - ಅಂತಸ್ತು ಎಂಬ ಭೇದವಿಲ್ಲ. ಪ್ರೀತಿಯ ಮುಂದೆ ಎಲ್ಲವೂ ಶೂನ್ಯ, ಇಲ್ಲೊಂದು ಯುವತಿ ಫ್ಯಾನ್ ರಿಪೇರಿ ಮಾಡುವ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​​ ಆಗಿದೆ. ಇವರ ಪ್ರೀತಿಯ ಕಥೆಗೆ ಅನೇಕು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಪ್ರೀತಿ ಹಿಂದೆ ಒಂದು ಕಥೆ ಇದೆ. ಇದನ್ನು ಸಿನಿಮಾ ಕೂಡ ಮಾಡಬಹುದು ಎಂದು ಅನೇಕರು ಕಮೆಂಟ್​​ ಮಾಡಿದ್ದಾರೆ.

ಫ್ಯಾನ್ ರಿಪೇರಿ ಮಾಡಲು ಬಂದ ವ್ಯಕ್ತಿಯನ್ನು ಪ್ರೀತಿಸಿ, ಮದುವೆಯಾದ ಯುವತಿ
ವೈರಲ್​​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Apr 11, 2025 | 12:04 PM

ಪ್ರೀತಿಯೊಂದು (Love) ಒಬ್ಬ ವ್ಯಕ್ತಿಯನ್ನು ಹೇಗಲ್ಲ ಬದಲಾವಣೆ ಮಾಡುತ್ತದೆ ಅಲ್ವಾ? ಪ್ರೀತಿಗೆ ಜಾತಿ, ಧರ್ಮ, ವೃತ್ತಿ ಎನ್ನುವುದು ಇಲ್ಲ ಎಂಬುದು ಹಳೆಯ ಮಾತು, ಈಗ ಕೈತುಂಬಾ ಸಂಬಳ, ಕಾರು, ಆಸ್ತಿ ಇದ್ರೆ ಮಾತ್ರ ಲವ್​​. ಆದರೆ ಕೆಲವೊಂದು ಈಗಲ್ಲೂ ಪ್ರೀತಿಗೆ ಹಣ-ಅಂತಸ್ತು ನೋಡದೇ ಮದುವೆಯಾಗುತ್ತದೆ. ಅದಕ್ಕೆ ಒಳ್ಳೆಯ ಉದಾಹರಣೆ ಈ ಘಟನೆ ನೋಡಿ. ಇದು ಒಂದು ರೀತಿ ಸಿನಿಮಾ ರೀತಿಯಲ್ಲೇ ನಡೆದಿದೆ. ಮನೆಗೆ ಫ್ಯಾನ್ ರಿಪೇರಿಗೆ ಬಂದವನ ಪ್ರೀತಿಗೆ ಬಿದ್ದು ಮದುವೆಯಾಗಿದ್ದಾಳೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಮುಗ್ದ ಪ್ರೀತಿಗೆ ಅನೇಕರು ಮೆಚ್ಚಿಕೊಂಡಿದ್ದಾರೆ. ಈ ಇಬ್ಬರು ಅವರ ಪ್ರೀತಿಗೆ ಬೆಲೆ ಕೊಟ್ಟದ್ದರೆ. ಬಿಹಾರದ ಯುವತಿಯೊಬ್ಬಳು ಸೀಲಿಂಗ್ ಫ್ಯಾನ್ ರಿಪೇರಿ ಮಾಡಲು ತನ್ನ ಮನೆಗೆ ಬಂದ ವ್ಯಕ್ತಿಯನ್ನು ಪ್ರೀತಿಸಿದ್ದಾಳೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಫ್ಯಾನ್​​ನಿಂದ ನಮ್ಮ ನಡುವೆ ಪ್ರೀತಿ ಹುಟ್ಟಿದೆ. ತನ್ನ ಮನೆಯಲ್ಲಿ ಫ್ಯಾನ್ ಕೆಲಸ ಮಾಡುತ್ತಿಲ್ಲ ಎಂದು ಯುವತಿ ಕರೆ ಮಾಡಿ ಆತನಿಗೆ ತಿಳಿಸಿದ್ದಾಳೆ. ಆತ ಬಂದು ರಿಪೇರಿ ಮಾಡಿಕೊಟ್ಟಿದ್ದಾನೆ. ಆ ನಂತರ ಆಕೆ ಅವನ ಬಳಿ ನಂಬರ್​​​ ಕೇಳಿದ್ದಾಳೆ. ಒಂದು ವೇಳೆ ಮತ್ತೆ ಫ್ಯಾನ್​​ ರಿಪೇರಿಗೆ ಬಂದರೆ ಕರೆ ಮಾಡಿ ಹೇಳಬಹುದಲ್ಲ ಎಂದು ಹೇಳಿ ನಂಬರ್​​ ಕೇಳಿದ್ದಾಳೆ.

ಈ ಸಂದರ್ಶನದಲ್ಲಿ ಅವಳ ಸ್ಪಷ್ಟವಾದ ಭಾವನೆಯನ್ನು ವ್ಯಕ್ತಪಡಿಸಿದ್ದಾಳೆ, ನನಗೆ ಆತನ ಮೇಲೆ ಮೊದಲಿನಿಂದಲ್ಲೂ ಪ್ರೀತಿ ಇತ್ತು. ಅದನ್ನು ಎಲ್ಲಿಯೂ ತೋರಿಸಲಿಲ್ಲ. ಅವನಿಲ್ಲದೆ ನನಗೆ ಯಾವುದರ ಮೇಲೂ ಗಮನ ಹರಿಸಲು ಆಗುತ್ತಿರಲಿಲ್ಲ. ಅಷ್ಟೊಂದು ಆತನನ್ನು ಪ್ರೀತಿಸುತ್ತಿದ್ದೇ. ಮೊದಲ ಮೊದಲಿಗೆ ಅವನು ತನ್ನ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಹೇಗಾದರೂ ಅವನನ್ನು ಮನೆ ಕರೆಸಿಕೊಳ್ಳಬೇಕು. ಏನಾದರೂ ಮಾಡಿ ಮಾತನಾಡಬೇಕು ಎಂದು ಅವಕಾಶಕ್ಕಾಗಿ ಕಾಯುತ್ತಿದ್ದೆ. ಫ್ಯಾನ್, ಲೈಟ್ ಅಥವಾ ಡಿಶ್ ಟೆಲಿವಿಷನ್ ರಿಪೇರಿ ಎಂದು ಆತನನ್ನು ಆಗಾಗ ಆತನ್ನು ಭೇಟಿ ಮಾಡುವ ಸಲುವಾಗಿ ಫೋನ್ ಮಾಡಿ ಮನೆಗೆ ಕೆರಸಿಕೊಳ್ಳುತ್ತಿದೆ.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಇದನ್ನೂ ಓದಿ: ಶ್ವಾನದ ಮುಖವಾಡ ಧರಿಸಿ ಎಣ್ಣೆ ಖರೀದಿಸಲು ಮದ್ಯದ ಅಂಗಡಿಗೆ ಬಂದ ವ್ಯಕ್ತಿ, ವಿಡಿಯೋ ವೈರಲ್

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಹೀಗೆ ಮಾಡಿ ಆತನ ಜತೆಗೆ ಮಾತನಾಡಲು ಶುರು ಮಾಡಿದ್ದೇವು, ನಂತರ ಇಬ್ಬರ ನಡುವೆ ಸ್ವಲ್ಪ ಆತ್ಮೀಯತೆ ಬೆಳೆಯಿತು. ಹೀಗೆ ಅವರ ನಡುವಿನ ಪ್ರೀತಿ ಪುರಾಣದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಇವರ ಈ ಪ್ರೀತಿ ಕಥೆಗೆ ಅನೇಕರು ತಮಾಷೆಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ತುಂಬಾ ಮುದ್ದಾ ಜೋಡಿ ಎಂದು ಕಮೆಂಟ್​ ಮಾಡಿದ್ದಾರೆ. ಒಂದು ಹೃದಯಸ್ಪರ್ಶಿ ಪ್ರೇಮಕಥೆ. ಕೆಲವರು ಇದನ್ನು ಆಧರಿಸಿ ಭೋಜ್‌ಪುರಿಯಲ್ಲಿ ಸಿನಿಮಾ ಮಾಡಬಹುದು ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ