Video: ಹಾಯಾಗಿ ಮಲಗಿರುವ ಶ್ವಾನಕ್ಕೆ ಬೀಸಣಿಗೆಯಲ್ಲಿ ಗಾಳಿ ಬೀಸುತ್ತಿರುವ ವೃದ್ಧ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಹೃದಯಕ್ಕೆ ತುಂಬಾನೇ ಹತ್ತಿರವಾಗುತ್ತದೆ. ಇದೀಗ ಇಂತಹದ್ದೇ ದೃಶ್ಯ ಇದಾಗಿದೆ. ಬೀದಿ ಬದಿಯಲ್ಲಿ ಹಾಯಾಗಿ ಮಲಗಿರುವ ಶ್ವಾನಕ್ಕೆ ಬೀಸಣಿಗೆಯಲ್ಲಿ ಗಾಳಿ ಬೀಸುತ್ತಾ ವೃದ್ಧನೊಬ್ಬ ಕುಳಿತುಕೊಂಡಿದ್ದಾನೆ. ಈ ಹೃದಯ ಸ್ಪರ್ಶಿ ಕ್ಲಿಪ್‌ ನೆಟ್ಟಿಗರ ಮನಸ್ಸು ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಹಾಯಾಗಿ ಮಲಗಿರುವ ಶ್ವಾನಕ್ಕೆ ಬೀಸಣಿಗೆಯಲ್ಲಿ ಗಾಳಿ ಬೀಸುತ್ತಿರುವ ವೃದ್ಧ
ವೈರಲ್‌ ವಿಡಿಯೋ
Image Credit source: Twitter

Updated on: Jul 15, 2026 | 3:01 PM

ನಿಷ್ಠೆ, ನಿಯತ್ತು, ನಿಷ್ಕಲ್ಮಶ ಪ್ರೀತಿ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಈ ಶ್ವಾನ (dog). ಹೀಗಾಗಿ ನಾಯಿ ಎಂದರೆ ಎಲ್ಲರಿಗೂ ಕೂಡ ಇಷ್ಟನೇ. ಕೆಲವರು ತಮ್ಮ ಮಕ್ಕಳಂತೆ ಈ ಶ್ವಾನವನ್ನು ನೋಡಿಕೊಳ್ಳುವುದನ್ನು ನೀವು ನೋಡಿರುತ್ತೀರಿ. ಇದೀಗ ಬೀದಿ ಬದಿಯಲ್ಲಿ ಮಲಗಿರುವ ಶ್ವಾನಕ್ಕೆ ಬೀಸಣಿಗೆಯಲ್ಲಿ ಗಾಳಿ ಬೀಸುವುದರಲ್ಲಿ ವೃದ್ಧ ವ್ಯಕ್ತಿ ಬ್ಯುಸಿಯಾಗಿದ್ದಾನೆ. ನೆಟ್ಟಿಗರು ಶ್ವಾನದ ಮೇಲೆ ಈ ವೃದ್ಧ ವ್ಯಕ್ತಿಗಿರುವ ಕಾಳಜಿಯನ್ನು ಮೆಚ್ಚಿಕೊಂಡಿದ್ದಾರೆ.

ಪ್ರಯಾಗ್ (Prayag) ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವೃದ್ಧ ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ಚೇರ್ ಹಾಕಿ ಕುಳಿತುಕೊಂಡಿರುವುದನ್ನು ಕಾಣಬಹುದು. ಆತನ ಪಕ್ಕದಲ್ಲಿ ಶ್ವಾನವೊಂದು ಹಾಯಾಗಿ ಮಲಗಿಕೊಂಡಿದೆ. ವೃದ್ಧ ವ್ಯಕ್ತಿ ಕೈಯಲ್ಲಿ ಹಿಡಿದಿರುವ ಬೀಸಣಿಗೆಯಲ್ಲಿ ಶ್ವಾನಕ್ಕೆ ಗಾಳಿ ಬೀಸುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತಂದೆಯ ಅಗಲುವಿಕೆಯ ನೋವಿನಲ್ಲಿದ್ದ ಯುವಕನಿಗೆ ಸಾಂತ್ವನ ನೀಡಿದ ಶ್ವಾನ

ಜುಲೈ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಒಂದು ಲಕ್ಷ ಎಪ್ಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಶ್ವಾನ ಮಲಗಿಲ್ಲ. ಕಣ್ಣು ಬಿಟ್ಟು ಸುತ್ತಲಿನ ಎಲ್ಲವನ್ನೂ ಗಮನಿಸುತ್ತಿದೆ ಎಂದಿದ್ದಾರೆ. ಇನ್ನೊಬ್ಬರು, ಇಂತಹ ವಿಡಿಯೋಗಳನ್ನು ನೋಡುವುದಕ್ಕೆ ನಾನು ಟ್ವಿಟ್ಟರ್ ಗೆ ಬಂದದ್ದು ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ದೃಶ್ಯ ನೋಡಿ ನಾನು ಎಮೋಷನಲ್ ಆಗಿ ಬಿಟ್ಟೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us