Video: ಬಾಯಿ ಚಪ್ಪರಿಸಿಕೊಂಡು ಐಸ್ ಕ್ರೀಮ್ ಸವಿದ ಅಜ್ಜಿ, ವೈರಲ್ ಆಯ್ತು ದೃಶ್ಯ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತವೆ. ಅಜ್ಜಿಯೊಬ್ಬರು ಬಾಯಿ ಚಪ್ಪರಿಸಿಕೊಂಡು ಐಸ್ ಕ್ರೀಮ್ ಸವಿದಿದ್ದಾಳೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಅಜ್ಜಿಯ ಕ್ಯೂಟ್‌ನೆಸ್‌ಗೆ ಫುಲ್‌ ಫಿದಾ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಬಾಯಿ ಚಪ್ಪರಿಸಿಕೊಂಡು ಐಸ್ ಕ್ರೀಮ್ ಸವಿದ ಅಜ್ಜಿ, ವೈರಲ್ ಆಯ್ತು ದೃಶ್ಯ
ವೈರಲ್‌ ವಿಡಿಯೋ
Image Credit source: Instagram

Updated on: Sep 16, 2026 | 6:22 PM

ಐಸ್ ಕ್ರೀಮ್ ಅಂದ್ರೆ ಎಲ್ಲರಿಗೂ ಇಷ್ಟನೇ. ಹೌದು, ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಇದೀಗ ಫ್ಯಾಮಿಲಿ ಜತೆಗೆ ಔಟಿಂಗ್‌ಗೆ ಹೋದ ಅಜ್ಜಿಯೊಬ್ಬರು (grandmother) ಐಸ್ ಕ್ರೀಮ್ ಸವಿಯುವ ವಿಡಿಯೋ ವೈರಲ್ ಆಗಿದೆ. ಅಜ್ಜಿಯ ಈ ಕ್ಯೂಟ್ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.

ಐಸ್ ಕ್ರೀಮ್ ಸವಿದ ಅಜ್ಜಿ

ಸಾಕ್ಷಿ ವಿನಯ್ (sakshivinay_ tripathi144) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಫ್ಯಾಮಿಲಿ ಜತೆಗೆ ಅಜ್ಜಿಯೊಬ್ಬರು ಬೀಚ್‌ಗೆ ಹೋಗಿದ್ದಾರೆ. ಇದೇ ವೇಳೆ ಬಾಯಿ ಚಪ್ಪರಿಸಿಕೊಂಡು ಐಸ್ ಕ್ರೀಮ್ ಸವಿದಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮೊಮ್ಮಗಳ ಮಾರ್ಗದರ್ಶನದಲ್ಲಿ ಯೂಟ್ಯೂಬ್ ಆಪರೇಟ್ ಮಾಡುವುದನ್ನು ಕಲಿತ ಅಜ್ಜಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕ್ಯೂಟ್ ದಾದಿಜಿ ಎಂದಿದ್ದಾರೆ. ಇನ್ನೊಬ್ಬರು, ಅವಳ ನಗುವೇ ಎಲ್ಲವನ್ನು ಹೇಳುತ್ತೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕ್ಯೂಟ್ ನೆಸ್ ಜಾಸ್ತಿನೇ ಇದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us