Viral: ಒತ್ತಡವಿದ್ರೂ ಜಾಬ್ ರಿಸೈನ್ ಮಾಡದ ಉದ್ಯೋಗಿ, ಕಾರಣ ತಿಳಿದ್ರೆ ನೀವು ಶಾಕ್ ಆಗ್ತೀರಾ

ಕೆಲಸ ಮಾಡೋದು ಅನಿವಾರ್ಯ. ಆದರೆ ಕೆಲವರು ಈ ವರ್ಕ್ ಲೈಫ್ ಹಾಗೂ ಪರ್ಸನಲ್ ಲೈಫ್ ಬ್ಯಾಲೆನ್ಸ್ ಮಾಡಲಾಗದೇ ಜಾಬ್ ರಿಸೈನ್ ಮಾಡ್ತಾರೆ. ಆದರೆ ಉದ್ಯೋಗಿಯೊಬ್ಬರು ಸ್ಟ್ರೆಸ್ ಇದ್ರು ಮಾತ್ರ ತಾನು ಜಾಬ್ ರಿಸೈನ್ ಮಾಡಲು ರೆಡಿ ಇಲ್ಲ. ಕಂಪನಿಯೇ ತಮ್ಮನ್ನು ವಜಾ ಮಾಡಬೇಕು ಎಂದು ಕಾಯುತ್ತಿದ್ದಾರೆ. ಈ ಉದ್ಯೋಗಿ ಮಾಡಿದ ಪೋಸ್ಟ್ ಸದ್ಯ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಒತ್ತಡವಿದ್ರೂ ಜಾಬ್ ರಿಸೈನ್ ಮಾಡದ ಉದ್ಯೋಗಿ, ಕಾರಣ ತಿಳಿದ್ರೆ ನೀವು ಶಾಕ್ ಆಗ್ತೀರಾ
ಸಾಂದರ್ಭಿಕ ಚಿತ್ರ
Image Credit source: RealPeopleGroup/E+/Getty Images

Updated on: Oct 12, 2026 | 7:33 PM

ಕೆಲಸದ ಸ್ಥಳಗಳಲ್ಲಿ ಕೆಲ ಉದ್ಯೋಗಿಗಳು (employees) ಅನುಭವಿಸುವ ಒತ್ತಡ ಹೇಳಲಾಗದು. ಮಾಡುವ ಕೆಲಸಕ್ಕೂ ಟೈಮಿಂಗ್ಸ್ ಇರಲ್ಲ, ಸ್ಟ್ರೆಸ್, ಡೆಡ್ ಲೈನ್ ಹೀಗೆ ಒಂದೆರಡಲ್ಲ ತಲೆ ನೋವು. ಈ ರೀತಿ ವಾತಾವರಣವಿದ್ದಾಗ ಜಾಬ್ ರಿಸೈನ್ ಮಾಡಿ ಬೇರೊಂದು ಕೆಲಸ ಹುಡುಕ್ತಾರೆ. ಆದರೆ ಇಲ್ಲೊಬ್ಬರು ಉದ್ಯೋಗಿಯದ್ದು ಕಥೆನೇ ಬೇರೆ. ಎಷ್ಟೇ ಒತ್ತಡವಿದ್ರೂ ತಾನು ಮಾತ್ರ ಕೆಲಸ ಬಿಡಲ್ಲ, ಕಂಪನಿಯೇ ತೆಗೆದು ಹಾಕಲಿ ಎನ್ನುವ ವಾದ ಉದ್ಯೋಗಿಯದ್ದು. ಈ ರೀತಿ ಹೇಳಲು ಕಾರಣವು ಇದೆ. ಈ ವ್ಯಕ್ತಿ ಮಾಡಿದ ರೆಡ್ಡಿಟ್ ಪೋಸ್ಟ್ ಸದ್ಯಕ್ಕೆ ಚರ್ಚೆ ಹುಟ್ಟುಹಾಕಿದೆ.

ಹೊಸ ಜವಾಬ್ದಾರಿ ಒತ್ತಡ ಹೆಚ್ಚು

ಕ್ವಿಟ್ ಕಾರ್ಪೊರೇಟ್ (r/QuitCorporate) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಉದ್ಯೋಗಿಯೊಬ್ಬರು ತನ್ನ ವೃತ್ತಿ ಬದುಕಿನ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ತಾನು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ತಾನು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ನೆಮ್ಮದಿಯೇ ಇಲ್ಲ. ಇತ್ತೀಚೆಗೆ ಹೊಸ ಜವಾಬ್ದಾರಿ ಹೊತ್ತುಕೊಂಡ ನಾನು ಬಾಸ್ ನಿರೀಕ್ಷಿಸಿದ ಫಲಿತಾಂಶ ನೀಡುವುದು ಕಷ್ಟಕರವಾಗಿತ್ತು. ಕೆಲಸದ ಒತ್ತಡ ಕೂಡ ಅಷ್ಟೇ ಇತ್ತು. ಹೀಗಾಗಿ ಜವಾಬ್ದಾರಿ ನಿಭಾಯಿಸಲು ಒದ್ದಾಡುತ್ತಿದೆ ಎಂದಿದ್ದಾರೆ.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

How do I tell my boss I want to be laid off?
by
u/CoreopsisTinctoria in
QuitCorporate

ಸ್ಯಾಲರಿ ಕಡಿಮೆಯಿದ್ರೂ ನೆಮ್ಮದಿ ಬೇಕು

ಜಾಬ್ ರಿಸೈನ್ ಮಾಡುವ ಅಂದ್ರೆ ಬೇರೆ ಕೆಲಸ ಕೂಡ ಇಲ್ಲ. ಒಂದು ವೇಳೆ ಕೆಲಸ ಬಿಟ್ಟರೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜಾಬ್ ಸಿಗದೇ ಹೋದರೆ ಅನ್ನೋ ಭಯವಿದೆ. ನಿವೃತ್ತಿ ಸಿಗುವ ಏಳು ವರ್ಷಕ್ಕೂ ಮೊದಲೇ ಜಾಬ್ ರಿಸೈನ್ ಮಾಡಬೇಕು ಎಂದುಕೊಂಡಿದ್ದೇನೆ. ಹೀಗಾಗಿ ಸ್ಯಾಲರಿ ಕಡಿಮೆಯಿದ್ರೂ ತೊಂದ್ರೆ ಇಲ್ಲ, ಕಡಿಮೆ ಒತ್ತಡ ಹೆಚ್ಚು ನೆಮ್ಮದಿ ಇರೋ ಕೆಲಸ ಸಿಕ್ಕರೆ ಸಾಕು. ನಾನಂದುಕೊಂಡ ಜಾಬ್ ಸಿಕ್ಕರೆ ನೆಮ್ಮದಿಯಿಂದ ಮಾಡಿಕೊಂಡು ಹೋಗ್ತೇನೆ ಎಂದು ಇಲ್ಲಿ ಉಲ್ಲೇಖಿಸಿದ್ದಾರೆ.

ಕಂಪನಿಯೇ ನನ್ನ ಕೆಲ್ಸದಿಂದ ತೆಗೆದು ಹಾಕಲಿ

ಜಾಬ್ ಗೆ ನಾನಾಗಿ ರಿಸೈನ್ ಮಾಡಲ್ಲ. ಆದರೆ, ಕಂಪನಿಯೇ ತನ್ನನ್ನು ಕೆಲಸದಿಂದ ತೆಗೆದು ಹಾಕಲಿ ಎಂದು ಕಾಯುತ್ತಿದ್ದೇನೆ. ಕಂಪನಿ ಕೆಲಸದಿಂದ ತೆಗೆದು ಹಾಕಿದ್ರೆ ಸೆವರೆನ್ಸ್ ಪ್ಯಾಕೇಜ್ ದೊರೆಯುತ್ತದೆ. ಈ ರೀತಿ ಆದ್ರೆ ಮಾನಸಿಕ ಒತ್ತಡ ಕಡಿಮೆಇರುತ್ತದೆ. ಬಾಸ್ ಬಳಿ ಲೇ ಆಫ್ ಮಾಡುವಂತೆ ಕೇಳಿದೆ. ಆದರೆ ಲೇ ಆಫ್ ಪ್ರಕ್ರಿಯೆ ಮುಗಿದಿದೆ ಎಂದು ಹೇಳಿದ್ದಾರೆ. ಇನ್ನೇನಿದ್ರೂ ಒಂದು ವರ್ಷ ಕಾಯ್ಬೇಕು. ಮೀಟಿಂಗ್ ಅಂದ್ರೆ ಭಯ. ಟಾರ್ಗೆಟ್ ಹಾಗೂ ಡೆಡ್ ಲೈನ್ ನೀಡಿದ್ರೆ ನಾನು ಹೇಗೆ ನಿಭಾಯಿಸುತ್ತೇನೋ ಗೊತ್ತಿಲ್ಲ. ನನ್ನ ಕೆರಿಯರ್ ಗೆ ಇದ್ರಿಂದ ತೊಂದ್ರೆ ಆಗುತ್ತೇನೋ ಅನ್ನೋ ಭಯವಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ತನಗೆ ಕೆಲಸ ಹುಡುಕಿಕೊಟ್ಟವರಿಗೆ 30,000 ರೂ ಬಹುಮಾನ ಘೋಷಿಸಿದ ಐಟಿ ಪದವೀಧರ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಕಾಮೆಂಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ, ನಿಮ್ಮನ್ನು ಅವರೇ ಕೆಲಸದಿಂದ ತೆಗೆದು ಹಾಕಲಿ ಎಂಬ ನಿಲುವು ಸರಿಯಲ್ಲ ಎಂದಿದ್ದಾರೆ. ಇನ್ನೊಬ್ಬರು, ಕೆಲಸವು ಸಿಗಬೇಕು, ನೆಮ್ಮದಿ ಬೇಕು ಅಂದ್ರೆ ಕಷ್ಟ, ಎಲ್ಲಾ ಪರಿಸ್ಥಿತಿಗೂ ಹೊಂದಿಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ಒತ್ತಡವಿದ್ದಾಗ ನೀವೇ ರಾಜೀನಾಮೆ ನೀಡುವುದು ಬೆಸ್ಟ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us