AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ತನಗೆ ಕೆಲಸ ಹುಡುಕಿಕೊಟ್ಟವರಿಗೆ 30,000 ರೂ ಬಹುಮಾನ ಘೋಷಿಸಿದ ಐಟಿ ಪದವೀಧರ

ಓದು ಮುಗಿಯುತ್ತಿದ್ದಂತೆ ಕೆಲಸ ಸಿಕ್ಕರೆ ಅದಕ್ಕಿಂತ ಅದೃಷ್ಟ ಮತ್ತೊಂದಿಲ್ಲ. ಈಗಿನ ಕಾಂಪಿಟೇಷನ್ ಯುಗದಲ್ಲಿ ಒಳ್ಳೆಯ ಸಂಬಳದ ಕೆಲಸ ಸಿಗೋದು ಕಷ್ಟ. ಆದರೆ ಐಟಿ ಪದವೀಧರನೊಬ್ಬ ಒಂದೊಳ್ಳೆ ಉಪಾಯ ಮಾಡಿದ್ದಾನೆ. ತನಗೆ ಕೆಲಸ ಹುಡುಕಿಕೊಟ್ಟವರಿಗೆ 30,000 ರೂ ಕೊಡುವುದಾಗಿ ಪೋಸ್ಟ್‌ನಲ್ಲಿ ತಿಳಿಸಿದ್ದಾನೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಉದ್ಯೋಗ ಹುಡುಕಲು ಒಂದೊಳ್ಳೆ ಐಡಿಯಾ ಎಂದು ಕಾಮೆಂಟ್ ಮಾಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ತನಗೆ ಕೆಲಸ ಹುಡುಕಿಕೊಟ್ಟವರಿಗೆ 30,000 ರೂ ಬಹುಮಾನ ಘೋಷಿಸಿದ ಐಟಿ ಪದವೀಧರ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Oct 12, 2026 | 11:32 AM

Share

ಎಷ್ಟೇ ಓದಿರಲಿ, ಉದ್ಯೋಗ ಸಿಗೋದು ಕಷ್ಟ. ಹೀಗಿರುವಾಗ ಯುವಕಯೊಬ್ಬನಿಗೆ ಕೆಲಸ ಹುಡುಕಿ ಸುಸ್ತಾಗಿ ಹೋಗಿದೆ. ಈ ಐಟಿ ಪದವೀಧರನೊಬ್ಬ (IT graduate) ಎಲ್ಲಾ ಕಂಪನಿಗಳಿಗೆ ಅರ್ಜಿ ಸಲ್ಲಿಕೆ ಮಾಡಿದ್ರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ತನಗೆ ಕೆಲಸ ಹುಡುಕಿ ಕೊಟ್ಟವರಿಗೆ 30,000 ರೂ ಬಹುಮಾನ ನೀಡುವುದಾಗಿ ಘೋಷಿಸಿದ್ದಾನೆ. ಈ ರೆಡ್ಡಿಟ್ ಪೋಸ್ಟ್ ಸದ್ಯ ವೈರಲ್ ಆಗಿದೆ.

ಕೆಲಸ ಹುಡುಕಿಕೊಟ್ಟವರಿಗೆ 30,000 ರೂ ಬಹುಮಾನ ಘೋಷಣೆ

ಫ್ರೆಶರ್ ಜಾಬ್ ಟೆಕ್ ಇಂಡಿಯಾ (r/FresherJobTechIndia) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದ್ದು, ನನಗೆ ಉದ್ಯೋಗ ಪಡೆಯಲು ಸಹಾಯ ಮಾಡುವವರಿಗೆ ನಾನು 30,000 ರೂ ನಗದು ಬಹುಮಾನ ನೀಡುತ್ತೇನೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

I Will pay ₹30,000 cash to anyone who helps me land a job (ECE/IT Fresher, India) by u/Automatic_Library119 in FresherTechJobsIndia

ಅರ್ಜಿ ಸಲ್ಲಿಸಿದ್ರೂ ಸಿಗ್ತಾ ಇಲ್ಲ ಜಾಬ್

ನಾನು ಐಟಿ ಕ್ಷೇತ್ರದಲ್ಲಿ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ಒಬ್ಬ ‘ಫ್ರೆಶರ್’. ಪ್ರಸ್ತುತ ಉದ್ಯೋಗ ಪಡೆಯುವಲ್ಲಿ ‘ಇಂಟರ್ನಲ್ ರೆಫರಲ್’ ಎಷ್ಟು ಮಹತ್ವದ್ದಾಗಿದೆ ಎಂಬುದು ನನಗೆ ತಿಳಿದಿದೆ; ಹಾಗಾಗಿ, ನನಗೆ ಉದ್ಯೋಗ ಸಿಗುವಂತೆ ಸಹಾಯ ಮಾಡುವವರಿಗೆ ನಾನು 30,000 ರೂ ಬಹುಮಾನವನ್ನು ನೀಡುತ್ತಿದ್ದೇನೆ. ನಾನು 2025ರಲ್ಲಿ ಪದವಿ ಪೂರೈಸಿದ್ದೇನೆ. ಪದೇ ಪದೇ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗದಿರುವುದರಿಂದ ನಾನು ಹತಾಶನಾಗಿದ್ದೇನೆ ಎಂದು ಬೇಸರ ಹೊರಹಾಕಿದ್ದಾನೆ.

ಇದನ್ನೂ ಓದಿ: ತಡರಾತ್ರಿವರೆಗೂ ಕೆಲ್ಸ ಮಾಡ್ಬೇಡಿ, ಕುಟುಂಬವು ಮುಖ್ಯ; ಯುವಕರಿಗೆ ಸಲಹೆ ನೀಡಿದ ಕೆಲಸ ಕಳೆದುಕೊಂಡ ಉದ್ಯೋಗಿ

ಈ ರೆಡ್ಡಿಟ್ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಸಿಗೋದು ಕಷ್ಟ ಎಂದಿದ್ದಾರೆ. ಇನ್ನೊಬ್ಬರು, ಎಷ್ಟು ಅಪ್ಡೇಟ್ ಆಗಿದ್ದೇವೆ ಅಂದ್ರೆ ಕೆಲಸ ಇಲ್ಲದಿದ್ದರೆ ಬಹುಮಾನ ಘೋಷಿಸುವುದು ಅಂದ್ರೆ ಸುಲಭದ ಮಾತಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕೆಲಸ ಹುಡುಕುವಾಗ ಇರುವ ಟೆನ್ಶನ್ ಓದುವಾಗ ಇರಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಪ್ರಜ್ವಲ್ ರೇವಣ್ಣ ಜೈಲು ಸ್ಥಳಾಂತರ ರದ್ದಾಗಲು ಪ್ರಭಾವಿ ವ್ಯಕ್ತಿ ಕರೆಯೇ ಕಾರಣ
ಪ್ರಜ್ವಲ್ ರೇವಣ್ಣ ಜೈಲು ಸ್ಥಳಾಂತರ ರದ್ದಾಗಲು ಪ್ರಭಾವಿ ವ್ಯಕ್ತಿ ಕರೆಯೇ ಕಾರಣ
ಇಂಡಿ ಮೈತ್ರಿಕೂಟದಿಂದ ಸುಪ್ರೀಂ ಚಲೋ ಮೆರವಣಿಗೆ
ಇಂಡಿ ಮೈತ್ರಿಕೂಟದಿಂದ ಸುಪ್ರೀಂ ಚಲೋ ಮೆರವಣಿಗೆ
ಅಜ್ಜಿಯ ಅಂತ್ಯಕ್ರಿಯೆಗೂ ಬಿಡಲಿಲ್ಲ ಎಂದ ಸಿಜೆಪಿ ನಾಯಕರಿಗೆ ವಿಡಿಯೋ ತಿರುಗೇಟು
ಅಜ್ಜಿಯ ಅಂತ್ಯಕ್ರಿಯೆಗೂ ಬಿಡಲಿಲ್ಲ ಎಂದ ಸಿಜೆಪಿ ನಾಯಕರಿಗೆ ವಿಡಿಯೋ ತಿರುಗೇಟು
ನಾಡಹಬ್ಬ ಮೈಸೂರು ದಸರಾದಲ್ಲಿ ಪ್ಲಾಸ್ಟಿಕ್, ಫ್ಲೆಕ್ಸ್​ಗೆ ಸಂಪೂರ್ಣ ಕಡಿವಾಣ
ನಾಡಹಬ್ಬ ಮೈಸೂರು ದಸರಾದಲ್ಲಿ ಪ್ಲಾಸ್ಟಿಕ್, ಫ್ಲೆಕ್ಸ್​ಗೆ ಸಂಪೂರ್ಣ ಕಡಿವಾಣ
ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಪೋಟ
ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಪೋಟ
ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ದೊಡ್ಮನೆಯಲ್ಲಿ ಅದ್ದೂರಿ ಸ್ವಾಗತ
ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ದೊಡ್ಮನೆಯಲ್ಲಿ ಅದ್ದೂರಿ ಸ್ವಾಗತ
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್