Viral: ತಡರಾತ್ರಿವರೆಗೂ ಕೆಲ್ಸ ಮಾಡ್ಬೇಡಿ, ಕುಟುಂಬವು ಮುಖ್ಯ; ಯುವಕರಿಗೆ ಸಲಹೆ ನೀಡಿದ ಕೆಲಸ ಕಳೆದುಕೊಂಡ ಉದ್ಯೋಗಿ
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ರೆಸ್ಟ್ ಅನ್ನೋದೇ ಇರಲ್ಲ. ತಡರಾತ್ರಿಯವರೆಗೆ ಕೆಲಸ ಮಾಡ್ತಾರೆ. ಅಂತಹವರಿಗೆ ಉದ್ಯೋಗಿಯೊಬ್ಬರು ಸಲಹೆ ನೀಡಿ, ಕೆಲಸವೇ ಜೀವನ ಅಲ್ಲ, ನಿಮ್ಮ ಕುಟುಂಬಕ್ಕೆ ಸಮಯ ನೀಡಿ ಎಂದು ಕಿವಿ ಮಾತು ಹೇಳಿದ್ದಾರೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಚರ್ಚೆಗೆ ಕಾರಣವಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ರಾತ್ರಿ ಹಗಲೆನ್ನದೇ ದುಡಿಯುವ ಕೆಲವರು ಈ ವರ್ಕ್ ಲೈಫ್ (work life) ಹಾಗೂ ಪರ್ಸನಲ್ ಲೈಫ್ ಬ್ಯಾಲೆನ್ಸ್ ಮಾಡಲು ಹೆಣಗಾಡುತ್ತಾರೆ. ಕೆಲವರಂತೂ ಆಫೀಸಿನಿಂದ ಬರುವುದೇ ತಡವಾಗಿ, ವಾರಾಂತ್ಯ ಆಫೀಸ್ ಕೆಲಸ ಅಂತ ಬ್ಯುಸಿ ಇರ್ತಾರೆ. ಹೀಗಾಗಿ ಪರ್ಸನಲ್ ಲೈಫ್ ಗೆ ಟೈಮ್ ಅನ್ನೋದೇ ಇರಲ್ಲ. ಇದೀಗ ಕೆಲಸದಿಂದ ವಜಾಗೊಂಡ ಉದ್ಯೋಗಿಗೆ ಕೆಲವು ಕಹಿ ಸತ್ಯ ಅರಿವಾಗಿದೆ. ಕೆಲಸ ಎಂಬುದು ಜೀವನ ನಡೆಸಲು ಬೇಕಾದ ಆದಾಯದ ಮೂಲವಷ್ಟೇ ಹೊರತು, ಅದೇ ನಿಮ್ಮ ಜೀವನವಲ್ಲ ಎಂದಿದ್ದಾರೆ. ಹೀಗಾಗಿ ಮುರೊತ್ತು ಕೆಲಸ ಎನ್ನುತ್ತಾ ತಮ್ಮ ಸಮಯವನ್ನು ಕಂಪನಿಯ ಉದ್ಧಾರಕ್ಕೆ ಮೀಸಲಿಡುವವರಿಗೆ ಸಲಹೆ ನೀಡಿದ್ದಾರೆ. ಸದ್ಯಕ್ಕೆ ಉದ್ಯೋಗಿಯ ಪೋಸ್ಟ್ ಉದ್ಯೋಗ ಭದ್ರತೆಯ ಬಗ್ಗೆ ಪ್ರಶ್ನೆ ಹುಟ್ಟು ಹಾಕಿದೆ.
ಕೆಲಸದ ಜತೆಗೆ ಕುಟುಂಬಕ್ಕೆ ಸಮಯ ಕೊಡಿ
ಅನೈಶಿ (Anaishi) ಎಂಬ ಮಹಿಳೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಾವು ಇಷ್ಟ ಪಟ್ಟು ಮಾಡುತ್ತಿದ್ದ ಕೆಲಸದಿಂದ ವಜಾಗೊಂಡ ಬಳಿಕ ಕಹಿ ಸತ್ಯವು ಈ ಉದ್ಯೋಗಿಗೆ ತಿಳಿದಿದೆ. ಈ ಪೋಸ್ಟ್ ನಲ್ಲಿ ನನಗೆ ತುಂಬಾ ಇಷ್ಟಪಟ್ಟು ಮಾಡುತ್ತಿದ್ದ ಕೆಲಸದಿಂದ ನನ್ನನ್ನು ತೆಗೆದುಹಾಕಲಾಯಿತು. ‘ನಿಮ್ಮನ್ನು ತೆಗೆದುಹಾಕಬೇಕು’ ಎಂದು ಅವರು ನಿರ್ಧರಿಸಿದ ಕ್ಷಣವೇ ನಿಮ್ಮ ಅಸ್ತಿತ್ವಕ್ಕೆ ಅಲ್ಲಿ ಬೆಲೆ ಇರುವುದಿಲ್ಲ ಎಂಬುದಕ್ಕೆ ಇದೊಂದು ಘಟನೆಯೇ ಸಾಕ್ಷಿ. ನೀವು ತಡರಾತ್ರಿಯವರೆಗೂ ಕೆಲಸ ಮಾಡುವುದನ್ನು ನಿಲ್ಲಿಸಿ. ಕೆಲಸದ ಸಮಯದ ನಂತರವೂ ಇಮೇಲ್‌ಗಳನ್ನು ಚೆಕ್ ಮಾಡುವುದು, ವಾರಾಂತ್ಯದಲ್ಲೂ ಕೆಲಸ ಮಾಡಬೇಡಿ. ಕೆಲಸ ಎಂಬುದು ಜೀವನ ನಡೆಸಲು ಬೇಕಾದ ಆದಾಯದ ಮೂಲವಷ್ಟೇ ಹೊರತು, ಅದೇ ನಿಮ್ಮ ಜೀವನವಲ್ಲ. ಕುಟುಂಬಕ್ಕಾಗಿ ಸಮಯ ಮೀಸಲಿಡಿ ಎಂದು ಬರೆದುಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ
I got laid off today from a job I really liked, for people I really liked. Just a reminder that you’re disposable as soon as they decide you are. Stop working late. Stop reading emails after hours. Stop working on weekends. A job is income to live your life, not your life.
— Anaishi (@Anaishiihere) October 9, 2026
ಇದನ್ನೂ ಓದಿ: ಕೆಲಸ ಬಿಟ್ಟು ಎಂಟು ತಿಂಗಳು ಮನೆಯಲ್ಲೇ ರೆಸ್ಟ್; ಜಾಬ್ ರಿಸೈನ್ ಮಾಡುವ ಯುವಕರಿಗೆ ಸಲಹೆ ನೀಡಿದ ವ್ಯಕ್ತಿ
ಅಕ್ಟೋಬರ್ 9 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಇದುವರೆಗೆ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕೆಲಸವೇ ಜೀವನ ವಲ್ಲ, ವೈಯುಕ್ತಿಕ ಬದುಕಿಗೂ ಸಮಯ ಕೊಡಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಕಂಪನಿಯ ಉದ್ಧಾರಕ್ಕಾಗಿ ನಿಮ್ಮ ವೈಯಕ್ತಿಕ ಸಂತೋಷವನ್ನು ಹಾಳು ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




