ನಿರಾಶ್ರಿತನ ನಾಯಿಯನ್ನು ಕದ್ದೊಯ್ಯುತ್ತಿರುವ ಪ್ರಾಣಿ ಹಕ್ಕುಗಳ ಚಳವಳಿಕಾರರ ವಿಡಿಯೋ ವೈರಲ್

|

Updated on: Jul 05, 2023 | 3:16 PM

Animal Rights Activists : ಇವರು ಪ್ರಾಣಿ ರಕ್ಷಕರಲ್ಲ ಭಕ್ಷಕರು! ಆ ನಾಯಿ ಮರಳಿ ಆ ಮನುಷ್ಯನ ಮಡಿಲು ಸೇರಿದರೂ ನಮ್ಮಗಳ ಎದೆಬಡಿತ ಮಾತ್ರ ಇನ್ನೂ ನಿಂತಿಲ್ಲ, ಇದು ತೀವ್ರ ಸಂಕಟವನ್ನುಂಟು ಮಾಡುತ್ತಿದೆ ಎಂದು ನೆಟ್ಟಿಗರು ಒದ್ದಾಡುತ್ತಿದ್ದಾರೆ. 

ನಿರಾಶ್ರಿತನ ನಾಯಿಯನ್ನು ಕದ್ದೊಯ್ಯುತ್ತಿರುವ ಪ್ರಾಣಿ ಹಕ್ಕುಗಳ ಚಳವಳಿಕಾರರ ವಿಡಿಯೋ ವೈರಲ್
ತನ್ನ ನಾಯಿಯನ್ನು ವಾಪಾಸು ಪಡೆಯಲು ಹೆಣಗಾಡುತ್ತಿರುವ ನಿರಾಶ್ರಿತ.
Follow us on

Animal Rights : ಪ್ರಾಣಿ ಹಕ್ಕುಗಳ ಕಾರ್ಯಕರ್ತರುಗಳು ಇದ್ದಕ್ಕಿದ್ದ ಹಾಗೆ ಈ ನಿರಾಶ್ರಿತನಿದ್ದಲ್ಲಿ (Homeless) ಬಂದು ಇವನ ನಾಯಿಮರಿಯನ್ನು ಎತ್ತಿಕೊಂಡು ಹೋಗುತ್ತಿದ್ದಾರೆ. ಒಬ್ಬ ನಿರಾಶ್ರಿತನನ್ನು ಗಟ್ಟಿಯಾಗಿ ಹಿಡಿಯಲು ಪ್ರಯತ್ನಿಸುತ್ತಿದ್ದಾನೆ. ಇನ್ನೊಬ್ಬಾಕೆ ನಾಯಿಮರಿಯನ್ನು (Puppy) ಎತ್ತಿಕೊಂಡು ಓಡಲು ನೋಡುತ್ತಿದ್ದಾಳೆ. ಇವರಿಬ್ಬರಿಂದ ತನ್ನ ನಾಯಿಮರಿಯನ್ನು ಬಿಡಿಸಿಕೊಳ್ಳಲು ವಯಸ್ಸಾದ ಈ ನಿರಾಶ್ರಿತ ಹೆಣಗಾಡುತ್ತಿದ್ದಾನೆ. ಈ ದೃಶ್ಯವನ್ನು ನೋಡಿದ ಜಾಲತಾಣಿಗರು, ಇದೆಂಥ ಅಮಾನವೀಯ ಎಂದು ಬೇಸರ ಪಟ್ಟುಕೊಳ್ಳುತ್ತಿದ್ದಾರೆ, ಜೊತೆಗೆ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಂದೇನಾಯಿತು ಎಂದು ತಿಳಿದುಕೊಳ್ಳುವ ಮೊದಲು ಈ ಕೆಳಗಿನ ವಿಡಿಯೋ ನೋಡಿ.

ಇವರಿಬ್ಬರೂ ಮನುಷ್ಯರೇ? ನಾಯಿಗಳಿಗಿಂತ ಕಡೆಯಾಗಿ ವರ್ತಿಸುತ್ತಿದ್ದಾರಲ್ಲ. ನಾಯಿ ಮತ್ತು ಆ ಮನುಷ್ಯನನ್ನು ಇಷ್ಟೊಂದು ಗೋಳಾಡಿಸಿ, ಭಯಪಡಿಸಿ ಇವರು ಸಾಧಿಸುವುದಾದರೂ ಏನು? ಇಂಥ ಕೆಟ್ಟ ವಿಡಿಯೋ ಅನ್ನು ಈತನಕ ನಾನು ನೋಡಿರಲೇ ಇಲ್ಲ, ಎಂಥಾ ದುಃಖವನ್ನು ತರುತ್ತಿದೆ ಈ ವಿಡಿಯೋ. ನಾಯಿಪ್ರೇಮಿಯಾದ ನನಗೆ ಇದು ಅತೀವ ಸಂಕಟವನ್ನುಂಟು ಮಾಡುತ್ತಿದೆ… ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ ಜನ. ಆದರೆ ಇದೇ ಟ್ವೀಟಿನ ಥ್ರೆಡ್​ನಲ್ಲಿ, ಆ ನಿರಾಶ್ರಿತ ತನ್ನ ನಾಯಿಯನ್ನು ಮರಳಿ ಪಡೆದ ವಿವರ ಮತ್ತು ಫೋಟೋ ಲಗತ್ತಿಸಲಾಗಿದೆ.

ಸದ್ಯ! ದೇವರು ದಯಾಮಯಿ, ನಿರಾಶ್ರಿತನನ್ನು ಮತ್ತು ನಾಯಿಮರಿಯನ್ನು ಒಂದುಮಾಡಿದ್ದಾನೆ. ಎರಡೂ ಮುಗ್ಧ ಜೀವಗಳು, ಹೀಗೆಲ್ಲ ಹಿಂಸಿಸಬಾರದಿತ್ತು. ಇಂಥ ಕೃತ್ಯದಲ್ಲಿ ಭಾಗಿಯಾದ ಆ ಇಬ್ಬರಿಗೂ ಜೈಲುಶಿಕ್ಷೆಯಾಗಬೇಕು. ನಿರಾಶ್ರಿತನಿಗೆ ಮತ್ತು ನಾಯಿಮರಿಗೆ ಊಟ ವಸತಿಯ ಸೌಲಭ್ಯ ದಕ್ಕುವಂತಾಗಬೇಕು. ನಾಚಿಕೆಯಾಗಬೇಕು ಇಷ್ಟೊಂದು ಹೃದಯಹೀನರಾಗಿ ನಡೆದುಕೊಳ್ಳಲು. ಅವರೇನು ರಕ್ಷಕರೋ ಭಕ್ಷಕರೋ… ಅಂತೆಲ್ಲ ಪ್ರತಿಕ್ರಿಯಿಸಿದೆ ನೆಟ್​ಮಂದಿ.

ಇದನ್ನೂ ಓದಿ : Viral Video: ಆಧುನಿಕ ಶ್ರವಣಕುಮಾರ; ತಾಯಿ ಮತ್ತು ಗಂಗಾಜಲ ಹೊತ್ತೊಯ್ದ ಯುವಕ

ಒಟ್ಟಾರೆಯಾಗಿ ಈ ವಿಡಿಯೋ ಕಣ್ಣಿನಿಂದ ಮನಸ್ಸಿನಿಂದ ಅಷ್ಟೊಂದು ಸುಲಭವಾಗಿ ಸರಿಯದು ಎನ್ನಿಸುವಂತಿದೆ. ವಯಸ್ಸಾದ ಆತ ಬೀದಿನಾಯಿಯೊಂದಿಗೆ ಕಷ್ಟವೋ ಸುಖವೋ ಎಂದು ಬದುಕುತ್ತಿರುವಾಗ ‘ಮಾನವೀಯತೆ ಮತ್ತು ಹಕ್ಕುಗಳು’ ಎಂಬ ಕಾರಣ ಕೊಟ್ಟು ಹೀಗೆಲ್ಲ ವರ್ತಿಸುವುದು ಎಷ್ಟು ಸರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 3:12 pm, Wed, 5 July 23