Viral Video: ನೋ ಟೆನ್ಶನ್, ಫುಲ್​​​ ಹ್ಯಾಪಿ, ನದಿಯಲ್ಲಿ ಮರಿ ಆನೆಯ ಸಖತ್ ಎಂಜಾಯ್ಮೆಂಟ್

ಮರಿ ಆನೆಗಳ ಆಟ ತುಂಟಾಟಗಳನ್ನು ನೋಡುವುದೇ  ಕಣ್ಣಿಗೊಂದು ಹಬ್ಬ. ಇದೀಗ ಅದೇ ರೀತಿ ಮರಿಯಾನೆಯೊಂದು ನದಿ ನೀರಿನಲ್ಲಿ ಆಟವಾಡುತ್ತಾ, ಎಂಜಾಯ್ ಮಾಡುತ್ತಿರುವ ವಿಡಿಯೋವೊಂದನ್ನು  ಭಾರತೀಯ ಅರಣ್ಯಧಿಕಾರಿ ಪರ್ವೀನ್ ಕಸ್ವಾನ್ ಅವರು ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ನದಿ ನೀರಿನಲ್ಲಿ ಮರಿಯಾನೆಯ ಖುಷಿಯ ಆಟ ಎಲ್ಲರ ಹೃದಯ ಗೆದ್ದಿದೆ. 

Viral Video: ನೋ ಟೆನ್ಶನ್, ಫುಲ್​​​ ಹ್ಯಾಪಿ, ನದಿಯಲ್ಲಿ ಮರಿ ಆನೆಯ ಸಖತ್ ಎಂಜಾಯ್ಮೆಂಟ್
Edited By:

Updated on: May 08, 2024 | 3:20 PM

ಆನೆಗಳಿಗೆ ನೀರಿನಲ್ಲಿ ಆಟವಾಡುವುದೆಂದರೆ ಬಲು ಇಷ್ಟ.  ಅವುಗಳು ನೀರಿಗಿಳಿದು ಆಟವಾಡಲು ಶುರು ಮಾಡಿದರೆ ಮೇಲೆ ಬರುವುದೇ ಇಲ್ಲ.  ಹೌದು ನೀರಿನಲ್ಲಿ ಆನಂದದಿಂದ ಕಳೆಯಲು ಆನೆಗಳು ಬಹಳ ಇಷ್ಟಪಡುತ್ತವೆ. ಅದರಲ್ಲೂ ಮರಿಯಾನೆಗಳು ನೀರಿನಲ್ಲಿ ಸ್ವಲ್ಪ ಹೆಚ್ಚೇ ಖುಷಿಯಿಂದ ಆಟವಾಡುತ್ತವೆ.   ಮುದ್ದು ಮುದ್ದಾಗಿರುವ ಮರಿ ಆನೆಗಳ ಆಟ, ತುಂಟಾವನ್ನು ನೋಡುವುದೇ ಕಣ್ಣಿಗೊಂದು ಹಬ್ಬ.  ಸದ್ಯ ಅಂತಹದ್ದೇ ಆನಂದದಾಯಕ ವಿಡಿಯೋವೊಂದು ವೈರಲ್ ಆಗಿದ್ದು, ನದಿ ನೀರಿನಲ್ಲಿ ಮರಿಯಾನೆಯ ಖುಷಿಯ ಆಟ ಎಲ್ಲರ ಹೃದಯ ಗೆದ್ದಿದೆ.

ಈ ಮುದ್ದಾದ ವಿಡಿಯೋವನ್ನು ಭಾರತೀಯ ಅರಣ್ಯಧಿಕಾರಿ ಪರ್ವೀನ್ ಕಸ್ವಾನ್ (@ParveenKaswam) ತಮ್ಮ ಅಧೀಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಡ್ಯೂಟಿಯ ವೇಳೆ ಈ ಮುದ್ದಾದ ಮರಿ ಆನೆ ನದಿ ನೀರಿನಲ್ಲಿ ಆನಂದಿಸುತ್ತಿರುವ ದೃಶ್ಯ ಕಣ್ಣಿಗೆ ಬಿದ್ದಿತು” ಎಂಬ ಶೀರ್ಷಿಕೆಯನ್ನು ಬರೆದಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:


10 ಸೆಕೆಂಡುಗಳ ವಿಡಿಯೋದಲ್ಲಿ ಪುಟಾಣಿ ಆನೆಯೊಂದು ನದಿ ನೀರಿಗಿಳಿದು, ಒಬ್ಬಂಟಿಯಾಗಿ ಆಟವಾಡುತ್ತಾ, ಎಂಜಾಯ್ ಮಾಡುತ್ತಿರುವ ಮುದ್ದಾದ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಬಾಲ್ಯದಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಆಟೋ ಡ್ರೈವರ್​​ಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಯುವತಿ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 39 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನದಿ ನೀರಿನಲ್ಲಿ ಮರಿಯಾನೆಯ ಖುಷಿಯ ಆಟವಂತೂ ತುಂಬಾನೇ ಮುದ್ದಾಗಿದೆ ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us