Food and Drink: ಬದುಕಿನಲ್ಲಿ ಎಲ್ಲವನ್ನೂ ಸಮತೋಲನದಿಂದ ನಿಭಾಯಿಸುವ ಛಾತಿ ಹೊಂದಿದವ ಉತ್ತಮ ನಾಗರಿಕನಾಗಬಲ್ಲ. ಅದಕ್ಕಾಗಿ ಒಂದಿಷ್ಟು ಆದರ್ಶಗಳನ್ನು ರೂಢಿಸಿಕೊಂಡಿರಬೇಕು. ಮನೆಯ ಒಳಗೂ ಹೊರಗೂ ಸಮದೂಗಿಸಿಕೊಂಡು ಹೋಗುವ ಶಕ್ತಿ ಪಡೆದುಕೊಂಡಿರಬೇಕು. ನಾಲ್ಕು ಜನರ ಮಧ್ಯೆ ಎದ್ದು ಕಾಣುವಂತಿರಬೇಕು. ಏನೇ ಬಂದರೂ ಸಾವರಿಸಿಕೊಂಡು ಹೋಗುವ ಆತ್ಮಬಲ ಇರಬೇಕು. ಅಂದಾಗಲೇ ಪರಿಪೂರ್ಣ ವ್ಯಕ್ತಿ ಎನ್ನಿಸಿಕೊಳ್ಳುವುದು. ಅದಕ್ಕಾಗಿ ಅನ್ನಾಹಾರನಿದ್ರಾದಿಗಳ ವಿಷಯವಾಗಿ ಕಟ್ಟುನಿಟ್ಟಾಗಿರಬೇಕು. ಏಕೆಂದರೆ ಕಾಯವೇ ಕಾಯವನ್ನು ಕಾಯುವುದು. ಹಾಗಾಗಿ ಬ್ಯಾಲೆನ್ಸ್ ಡಯೆಟ್ ಅನ್ನೋದು ಬಹಳ ಮುಖ್ಯ. ಬಗೆಬಗೆಯ ಡಯೆಟ್ಗಳ ಪೈಕಿ ಇದೂ ಒಂದು ಟ್ರೆಂಡಿಂಗ್ನಲ್ಲಿದೆ, ನೋಡಿ ವಿಡಿಯೋ.
Now that’s called a balanced diet! ??pic.twitter.com/fRcXeZOCYd
ಇದನ್ನೂ ಓದಿ— Figen (@TheFigen_) May 25, 2023
ವೀಕೆಂಡ್ ಮೂಡ್ನಲ್ಲಿರುವ ನಿಮಗೆ ಈ ವಿಡಿಯೋ ಅತ್ಯಂತ ಸೂಕ್ತ ಎಂಬ ನಮ್ಮ ಅನಿಸಿಕೆ. ಈ ವ್ಯಕ್ತಿ ಹೀಗೆ ಹ್ಯಾಂಡ್ಮೇಡ್ ತಕ್ಕಡಿಯೊಂದನ್ನು ತಯಾರಿಸಿಕೊಂಡು ಒಂದು ಬದಿ ಆಹಾರ ಇನ್ನೊಂದು ಬದಿ ಪಾನೀಯವನ್ನಿಟ್ಟುಕೊಂಡು ಕುಳಿತಿದ್ದಾನೆ. ಇಷ್ಟೆಲ್ಲ ಬಗೆಯ ಡಯೆಟ್ಗಳ ಮಧ್ಯೆ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲಕ್ಕೆ ಬಿದ್ದು ತನ್ನ ಡಯೆಟ್ ಅನ್ನು ತಾನೇ ಸಂಶೋಧಿಸಿಕೊಂಡಿದ್ದಾನೋ ಏನೋ. ನೆಟ್ಟಿಗರಂತೂ ಉರುಳಾಡಿ ನಗುತ್ತಿದ್ದಾರೆ.
ಇದನ್ನೂ ಓದಿ : Viral Video: ಜಗಳವಾಡೋದನ್ನು ಮಾತ್ರ ಇಲ್ಲಿ ಉಚಿತವಾಗಿ ಕಲಿಸಿಕೊಡಲಾಗುವುದು
ಅಯ್ಯೋ ಈ ಮನುಷ್ಯ 2035ನ್ನುಈಗಲೇ ಬದುಕುತ್ತಿದ್ದಾನೆ. ಚಿಂತೆ ಮಾಡಬೇಡ ನಿನ್ನ ಲಿವರ್ನ ಕಾಳಜಿಯನ್ನು ನಾನು ತೆಗೆದುಕೊಳ್ಳುತ್ತೇನೆ, ಮಜಾಮಾಡು. ಈ ಐಡಿಯಾ ಕೊಟ್ಟಿದ್ದಕ್ಕೆ ಧನ್ಯವಾದ, ನಾನಿನ್ನು ಡಯೆಟೀಷಿಯನ್ ಅಪಾಯಿಂಟ್ಮೆಂಟ್ ತೆಗೆದುಕೊಳ್ಳುವುದೇ ಇಲ್ಲ. ಹೀಗೆ ನೆಟ್ಟಿಗರನೇಕರು ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ : Viral:ಹಿಟ್ಲರನಿಗೆ ಜಯವಾಗಲಿ!; ಎಂದು ಕೆಲಸಗೇಡಿ ಕೆಲಸ ಕಳೆದುಕೊಂಡ ಕತೆ
ಈ ಬಾಟಲ್ ಹೀಗೆ ಅಡ್ಡಡ್ಡ ನಿಲ್ಲಲು ಹೇಗೆ ಸಾಧ್ಯ? ಪಕ್ಕದಲ್ಲಿ ಯಾರೋ ಇದನ್ನ ಹಿಡಿದುಕೊಂಡಿರಬೇಕು. ಇದು ಅತ್ಯಂತ ಬುದ್ಧಿವಂತಿಕೆಯಿಂದ ಕೂಡಿದ ಐಡಿಯಾ, ನಿಮಗೆಂದಾದರೂ ಹೊಳೆದಿತ್ತಾ? ಹೀಗೆ ಇನ್ನೂ ಕೆಲವರು ಹೇಳುತ್ತಿದ್ದಾರೆ. ಈಗ ಹೇಳಿ ಈ ತೂಕದ ಡಯೆಟ್ ಬಗ್ಗೆ ನೀವೇನು ಹೇಳುತ್ತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:39 am, Sat, 27 May 23