ಬಲೂಚಿಸ್ತಾನದ ಸಹಾಯಕ ಆಯುಕ್ತರಾಗಿ ಹಿಂದೂ ಮಹಿಳೆ ನೇಮಕ, ಯಾರು ಈ ಕಾಶಿಶ್ ಚೌಧರಿ? ಇಲ್ಲಿದೆ ಮಾಹಿತಿ

25 ವರ್ಷದ ಹಿಂದೂ ಮಹಿಳೆ ಕಾಶಿಶ್ ಚೌಧರಿ, ಬಲೂಚಿಸ್ತಾನದ ಪ್ರಾಂತ್ಯದ ಸಹಾಯಕ ಆಯುಕ್ತರಾಗಿ ನೇಮಕಗೊಳ್ಳುವ ಮೂಲಕ ಎಲ್ಲರನ್ನು ಕೂಡ ಹುಬ್ಬೇರಿಸುವಂತೆ ಮಾಡಿದ್ದಾರೆ. ಅಭಿವೃದ್ಧಿ ಹೊಂದದ ಪ್ರದೇಶದಿಂದ ಬಂದ ಕಾಶಿಶ್ ಚೌಧರಿ ಅವರ ಸಾಧನೆಯ ಹಾದಿ ಹೇಗಿತ್ತು? ಈ ಬಗ್ಗೆ ಅವರು ಹೇಳೋದೇನು? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಲೂಚಿಸ್ತಾನದ ಸಹಾಯಕ ಆಯುಕ್ತರಾಗಿ ಹಿಂದೂ ಮಹಿಳೆ ನೇಮಕ, ಯಾರು ಈ ಕಾಶಿಶ್ ಚೌಧರಿ? ಇಲ್ಲಿದೆ ಮಾಹಿತಿ
ಬಲೂಚಿಸ್ತಾನದ ಸಹಾಯಕ ಆಯುಕ್ತರಾಗಿ ಕಾಶಿಶ್ ಚೌಧರಿ ಆಯ್ಕೆ
Updated By: ಅಕ್ಷಯ್​ ಪಲ್ಲಮಜಲು​​

Updated on: May 15, 2025 | 10:26 AM

ಬಲೂಚಿಸ್ತಾನ, ಮೇ 15 : ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ನಮ್ಮ ಸುತ್ತಮುತ್ತಲಿನ ಅನೇಕರು ಉದಾಹರಣೆಯಾಗಿ ನಿಲ್ಲುತ್ತಾರೆ. ಅಂತಹವರ ಸಾಲಿಗೆ ಕಾಶಿಶ್ ಚೌಧರಿ (kashish chaudhary) ಕೂಡ ಸೇರಿಕೊಳ್ಳುತ್ತಾರೆ. ಇವರು, ಬಲೂಚಿಸ್ತಾನ (balochistan) ದ ಮೊದಲ ಹಿಂದೂ ಮಹಿಳಾ ಸಹಾಯಕ ಆಯುಕ್ತ (assistant commissioner) ರಾಗಿ ನೇಮಕಗೊಂಡಿದ್ದಾರೆ. ಇನ್ನು, ತನ್ನ ಸಾಧನೆಯ ಗುಟ್ಟಿನ ಬಗ್ಗೆ ಹಾಗೂ ತನ್ನ ಮುಂದಿನ ಗುರಿಯೇನು ಎನ್ನುವ ಬಗ್ಗೆ ಸಮಾ ಸುದ್ದಿ ವಾಹಿನಿ (Samaa News) ಜೊತೆಗೆ ಮಾತನಾಡಿ ಈ ಬಗ್ಗೆ ಬಹಿರಂಗ ಪಡಿಸಿದ್ದಾರೆ.

ಕಾಶಿಶ್ ಚೌಧರಿ ಚಾಗೈ ಜಿಲ್ಲೆಯ ನೊಶ್ಕಿಯವಾರಾಗಿದ್ದು, ಅಷ್ಟೇನು ಅಭಿವೃದ್ಧಿ ಕಾಣದ ಊರು ಇವರದ್ದು. ಸೀಮಿತ ಸಂಪನ್ಮೂಲ, ಎಲ್ಲಾ ಸವಾಲುಗಳ ಹೊರತಾಗಿಯೂ ಬಲೂಚಿಸ್ತಾನ್ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಹಾಯಕ ಆಯುಕ್ತ ಹುದ್ದೆಯನ್ನು ತನ್ನದಾಗಿಸಿಕೊಂಡಿದ್ದು, ಮೊದಲ ಹಿಂದೂ ಮಹಿಳಾ ಸಹಾಯಕ ಆಯುಕ್ತರು ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಕ್ವೆಟ್ಟಾದಲ್ಲಿ ಬಲೂಚಿಸ್ತಾನ್ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿಯವರನ್ನು ಭೇಟಿಯಾಗಿದ್ದು, ಈ ವೇಳೆಯಲ್ಲಿ ತಾವು ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಸಬಲೀಕರಣಕ್ಕಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.

ಕಠಿಣ ಪರಿಶ್ರಮ ಹಾಗೂ ಶಿಸ್ತು : ಯಶಸ್ಸಿನ ಗುಟ್ಟು

ಸಮಾ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಕಾಶಿಶ್, ಮೂರು ವರ್ಷಗಳ ನಿರಂತರ ಅಧ್ಯಯನದೊಂದಿಗೆ ಶುರುವಾದ ಈ ಪ್ರಯಾಣವು ಇಂದು ಈ ಹಂತಕ್ಕೆ ಬಂದು ತಲುಪಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಪ್ರತಿನಿತ್ಯ ಸರಿಸುಮಾರು ಎಂಟು ಗಂಟೆಗಳ ಕಾಲ ತಯಾರಿ ನಡೆಸಿದ್ದೇನೆ. ಶಿಸ್ತು,ಕಠಿಣ ಪರಿಶ್ರಮವೇ ನನ್ನ ಸಾಧನೆಯ ಗುಟ್ಟು. ಸಮಾಜಕ್ಕೆ ಏನನ್ನಾದರೂ ನನ್ನಿಂದ ಸಾಧ್ಯವಾದಷ್ಟು ಕೊಡುಗೆ ನೀಡಬೇಕೆನ್ನುವುದೇ ನನ್ನನ್ನು ಈ ಹಂತಕ್ಕೆ ಬಂದು ತಲುಪುವಂತೆ ಮಾಡಿದೆ ಎಂದಿದ್ದಾರೆ.

ಇದನ್ನೂ ಓದಿ
ಸ್ನೇಹಿತನಿಗಾಗಿ ಚಿರತೆ ಜತೆ ಯುದ್ಧಕ್ಕೆ ನಿಂತ ಶ್ವಾನಗಳು
ಫ್ಯಾಮಿಲಿ ರೆಸ್ಟೋರೆಂಟ್​​​ನಲ್ಲಿ ಬಿಗ್ ಫೈಟ್, ಕಾರಣ ಏನು ಗೊತ್ತಾ?
ಸಂಗೀತ ಕಾರ್ಯಕ್ರಮದಲ್ಲಿ ಅವಾಂತರ ಸೃಷ್ಟಿಸಿದ ಗೂಳಿ
ಕಾರಿನ ಮೇಲೆ ನವಜೋಡಿಗಳ ಅಪಾಯಕಾರಿ ಸ್ಟಂಟ್, ವಿಡಿಯೋ ವೈರಲ್

ಇದನ್ನೂ ಓದಿ : ಸ್ನೇಹಿತನಿಗಾಗಿ ಚಿರತೆ ಜತೆ ಯುದ್ಧಕ್ಕೆ ನಿಂತ ಶ್ವಾನಗಳು

ಮಗಳ ಸಾಧನೆಗೆ ಕಂಡು ಸಂತಸ ವ್ಯಕ್ತಪಡಿಸಿದ ತಂದೆ

ಬಲೂಚಿಸ್ತಾನದ ಮೊದಲ ಹಿಂದೂ ಮಹಿಳಾ ಸಹಾಯಕ ಆಯುಕ್ತರಾಗಿ ಕಾಶಿಶ್ ಚೌಧರಿ ನೇಮಕಗೊಂಡಿದ್ದು, ಈ ಬಗ್ಗೆ ಅವರ ತಂದೆ ಗಿರ್ಧಾರಿ ಲಾಲ್ ಖುಷಿ ವ್ಯಕ್ತಪಡಿಸಿದ್ದಾರೆ. ನನ್ನ ಮಗಳ ನಿಜಕ್ಕೂ ಖುಷಿ ತಂದು ಕೊಟ್ಟಿದೆ. ಮಗಳು ಈ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ. ಈ ಹಂತಕ್ಕೆ ಬೆಳೆಯಲು ಆಕೆಯ ನಿರಂತರ ಶ್ರಮವೇ ಕಾರಣ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 9:54 am, Thu, 15 May 25