ಇಂದು ಒಂದು ಲೋಟ ಕಾಫಿಗೆ 20 ರೂ. 1970ರಲ್ಲಿ 50 ಪೈಸೆ, ಬೆಲೆ ಏರಿಕೆ ಪರಿಣಾಮ ಹೇಗಿದೆ ನೋಡಿ
ಕರ್ನಾಟಕದಲ್ಲಿ ನಂದಿನಿ ಹಾಲಿನ ಬೆಲೆ ಲೀಟರ್‌ಗೆ ನಾಲ್ಕು ರೂಪಾಯಿ ಏರಿಕೆಯಾಗಿದೆ. ಇದರಿಂದಾಗಿ ಬೆಂಗಳೂರಿನ ಹಲವು ಹೋಟೆಲ್‌ಗಳಲ್ಲಿ ಚಹಾ ಮತ್ತು ಕಾಫಿಯ ಬೆಲೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ 50 ವರ್ಷಗಳಿಗಿಂತಲೂ ಹಿಂದಿನ ಹೋಟೆಲ್ ಒಂದರ ಕಾಫಿಯ ಬಿಲ್ ಒಂದು ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ. ಸದ್ಯ 1971 ರ ಈ ಹೋಟೆಲ್ ಬಿಲ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.

ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 4 ರೂ. ಏರಿಕೆ ಮಾಡಿದ ಬೆನ್ನಲ್ಲೇ ಇದೀಗಾ ಬೆಂಗಳೂರಿನ ಅನೇಕ ಹೋಟೆಲ್‌ಗಳಲ್ಲಿ ಚಹಾ, ಕಾಫಿ ಬೆಲೆ ಹೆಚ್ಚಳವಾಗಿದೆ. ಹಲವೆಡೆ ಈ ಹಿಂದೆ 15 ರೂ.ಗಳಿದ್ದ ಟೀ, ಕಾಫಿಗೆ ಇದೀಗ 5ರೂ. ಹೆಚ್ಚಾಗಿದ್ದು, ಇನ್ಮುಂದೆ ಒಂದು ಲೋಟ ಕಾಫಿಗೆ 20ರೂ. ಪಾವತಿಸಬೇಕಿದೆ. ಇದು ಕಾಫಿ, ಟೀ ಪ್ರಿಯರಿಗೆ ಶಾಕ್ ನೀಡಿದೆ. ಇದರ ಬೆನ್ನಲ್ಲೇ 1970ರ ಹೋಟೆಲ್ ಬಿಲ್ ಒಂದು ಎಲ್ಲೆಡೆ ಭಾರೀ ವೈರಲ್( Viral) ಆಗುತ್ತಿದೆ. 50 ವರ್ಷಗಳಿಗಿಂತಲೂ ಹಿಂದಿನ ಕಾಫಿಯ ಬಿಲ್ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ವೈರಲ್ ಆದ ಫೋಟೋದಲ್ಲಿ ದೆಹಲಿಯ ಮೋತಿ ಮಹಲ್ ರೆಸ್ಟೋರೆಂಟ್‌ನ ಹೆಸರು ಇರುವುದನ್ನು ಕಾಣಬಹುದು. 28.06.1971ರಲ್ಲಿ ವ್ಯಕ್ತಿಯೊಬ್ಬರು ಮೋತಿ ಮಹಲ್ ರೆಸ್ಟೋರೆಂಟ್‌ನಲ್ಲಿ 2 ಮಸಾಲೆ ದೋಸೆ ಮತ್ತು 2 ಕಾಫಿಗೆ ಕೇವಲ ಎರಡು ರೂಪಾಯಿ ಬಿಲ್ ಪಾವತಿಸಿರುವುದು ತಿಳಿದುಬಂದಿದೆ. ಸದ್ಯ ಈ ಬಿಲ್ ಇದೀಗಾ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ. ಒಂದು ಲೋಟ ಕಾಫಿಗೆ 50 ಪೈಸೆಯಿಂದ 20 ರೂ. ಏರಿಕೆಯಾಗಿದ್ದು, 1970ರಿಂದ 2025ಕ್ಕೆ ಬೆಲೆ ಏರಿಕೆ ಹೇಗಾಗಿದೆ ಎಂಬುದನ್ನು ಇಲ್ಲಿ ಗಮನಿಸಬಹುದು.
ವೈರಲ್ ಫೋಟೋ ಇಲ್ಲಿದೆ ನೋಡಿ:
ಇದನ್ನೂ ಓದಿ: ನನ್ ಹೆಂಡ್ತಿಯಿಂದ ನನ್ನನ್ನು ರಕ್ಷಿಸಿ ಸರ್; ಪತ್ನಿಯ ಹಲ್ಲೆ, ಕಿರುಕುಳದಿಂದ ಬೇಸತ್ತು ಕಂಪ್ಲೇಂಟ್ ಕೊಟ್ಟ ಗಂಡ
ಇಂದು ಯಾವುದೇ ಉತ್ತಮ ಸೌಲಭ್ಯವುಳ್ಳ ರೆಸ್ಟೋರೆಂಟ್‌ನಲ್ಲಿ ಮಸಾಲೆ ದೋಸೆ ಮತ್ತು ಕಾಫಿಯನ್ನು ಆರ್ಡರ್ ಮಾಡಿದರೆ ಕನಿಷ್ಠ 500 ರಿಂದ 800 ರೂಪಾಯಿ ಬಿಲ್ ಆಗುತ್ತದೆ. ಆದರೆ 70 ರ ದಶಕದಲ್ಲಿ ಕೇವಲ 2ರಿಂದ 4 ರೂ.ಗೆ ಹೊಟ್ಟೆ ತುಂಬಾ ಊಟವೇ ಸಿಗುತ್ತಿತ್ತು. ಇದೀಗ ಬಿಲ್ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರಲ್ಲಿ ಭಾರೀ ಚರ್ಚೆ ಶುರುವಾಗಿದೆ. ಸದ್ಯ 1971 ರ ಈ ಹೋಟೆಲ್ ಬಿಲ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ