
ಬೆಂಗಳೂರು, ಜೂನ್ 08: ಈಗಿನ ಕಾಲದಲ್ಲಿ ಸಂಪಾದನೆ ಎಷ್ಟಿದ್ರು ಕಡಿಮೆಯೇ. ಹೌದು, ಬೆಂಗಳೂರು (Bengaluru) ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಕೆಲಸಕ್ಕೆಂದು ಬಂದವರಲ್ಲಿ ಅನೇಕರು ಕೈಯಲ್ಲಿ ಒಂದು ಉದ್ಯೋಗವಿದ್ರೂ ಪಾರ್ಟ್ ಟೈಮ್ ಆಗಿ ಇನ್ನೊಂದು ಕೆಲಸ ಮಾಡ್ತಾರೆ. ಇದೀಗ ಎಂಎನ್ಸಿ ಕಂಪೆನಿಯಲ್ಲಿ ಕೈ ತುಂಬಾ ಸಂಬಳ ಪಡೆಯುವ ವ್ಯಕ್ತಿಯದ್ದು ಅದೇ ಕಥೆ. ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ವಾರಾಂತ್ಯದಲ್ಲಿ ರ್ಯಾಪಿಡೋ ಬೈಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಈ ಪೋಸ್ಟ್ ಸದ್ಯ ವೈರಲ್ ಆಗಿದ್ದು, ಆರ್ಥಿಕ ಅಭದ್ರತೆಯ ಕುರಿತು ಚರ್ಚೆಯನ್ನು ಹುಟ್ಟು ಹಾಕಿದೆ.
ಶಬಾಜ್ (Shabaz) ಎಂಬ ಬಳಕೆದಾರರು ತಮ್ಮ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ನಾನು ನಗರದ ಬನ್ನೇರುಘಟ್ಟಕ್ಕೆ ಪ್ರಯಾಣಿಸಲು ರ್ಯಾಪಿಡೋ ಬೈಕ್ ಬುಕ್ ಮಾಡಿದೆ. ಪ್ರಯಾಣದ ವೇಳೆ ರ್ಯಾಪಿಡೋ ಬೈಕ್ ಚಾಲಕನನ್ನು ಮಾತನಾಡಿಸಿದೆ. ಮೊದಲು ನಾನು ಕನ್ನಡದಲ್ಲಿ ಮಾತನಾಡಿ, ನಂತರ ನನಗೆ ಕನ್ನಡ ಸರಿಯಾಗಿ ಬಾರದಿರುವುದನ್ನು ಅವರು ಗಮನಿಸಿದ್ರು. ತಕ್ಷಣವೇ ನನ್ನ ಜತೆಗೆ ಇಂಗ್ಲಿಷ್ ನಲ್ಲಿ ಮಾತನಾಡಲು ಶುರು ಮಾಡಿದ್ದಾರೆ. ಹೀಗೆ ಮಾತನಾಡುತ್ತಿದ್ದ ವೇಳೆ ನಾನು ಸಾಫ್ಟ್ವೇರ್ ಇಂಜಿನಿಯರ್ ಎಂದು ಹೇಳಿದೆ. ಆದರೆ ರ್ಯಾಪಿಡೋ ಚಾಲಕ ಎಂಎನ್ಸಿ ಕಂಪನಿಯಲ್ಲಿ ಹಿರಿಯ ಸಾಫ್ಟ್ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ತಿಂಗಳಿಗೆ ಲಕ್ಷಕ್ಕೂ ಅಧಿಕ ಸಂಬಳವಿದೆ ಕೇಳಿ ನನಗೆ ಆಶ್ಚರ್ಯ ಆಯ್ತು. ಈ ಕೆಲಸ ಯಾಕಾಗಿ ಎಂದು ಕೇಳಿದ್ದಕ್ಕೆ ತಮಗೆ ಮದುವೆಯಾಗಿದ್ದು, ಒಂದು ಸಣ್ಣ ಮಗುವಿದೆ. ಹೆಚ್ಚುವರಿ ಆದಾಯವನ್ನು ಬಯಸುವುದರಿಂದ ಬೈಕ್ ಓಡಿಸುತ್ತೇನೆ ಎಂದರು. ಈ ಮಾತು ನಿಜವಾಗಿಯೂ ನನ್ನನ್ನು ಯೋಚಿಸುವಂತೆ ಮಾಡಿತು. ಉತ್ತಮ ತಾಂತ್ರಿಕ ಕೆಲಸ ಮತ್ತು ಆರು ಅಂಕಿಗಳ ಸಂಬಳ ಹೊಂದಿರುವ ಯಾರಾದರೂ ಇನ್ನೂ ವಾರಾಂತ್ಯದ ಟೈಮ್ ಸೈಡ್ ಹಸ್ಸಲ್ ಅಗತ್ಯವನ್ನು ಅನುಭವಿಸಿದರೆ, ಬೆಂಗಳೂರು ಮತ್ತು ಇತರ ಟೈಯರ್-1 ನಗರಗಳಲ್ಲಿ ಜೀವನ ಎಷ್ಟು ದುಬಾರಿಯಾಗಿದೆ? ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 9 ಟು 5 ಲೈಫ್ ಬೇಡಪ್ಪಾ: ಬೆಂಗಳೂರಲ್ಲಿ 60 ಸಾವಿರ ಸಂಬಳದ ಕೆಲಸಕ್ಕೆ 22ರ ಯುವತಿ ದಿಢೀರ್ ರಿಸೈನ್!
ಈ ಪೋಸ್ಟ್ ಎಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ದುಡಿಮೆಯಿದ್ರೂ ಜವಾಬ್ದಾರಿಗಳು ಎಲ್ಲವನ್ನು ಮಾಡಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಮ್ಮ ಮನೆಯಲ್ಲಿ ನೀವೇ ಏಕೈಕ ಜೀವನಾಧಾರವಾಗಿದ್ದಾಗ ಒತ್ತಡದಿಂದ ಕೂಡಿರುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಜೊತೆಗೆ, ಇಎಂಐ, ಮಕ್ಕಳ ಶಿಕ್ಷಣ ಮತ್ತು ಪೋಷಕರನ್ನು ಬೆಂಬಲಿಸುವ ಆರು ಅಂಕಿಗಳ ಸಂಬಳದಲ್ಲೂ ಉಳಿತಾಯ ಮಾಡಲಾಗದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹೆಗಲ ಮೇಲಿರುವ ಜವಾಬ್ದಾರಿಗಳು ಎಲ್ಲವನ್ನೂ ಮಾಡಿಸುತ್ತದೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ