AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: 9 ಟು 5 ಲೈಫ್ ಬೇಡಪ್ಪಾ: ಬೆಂಗಳೂರಲ್ಲಿ 60 ಸಾವಿರ ಸಂಬಳದ ಕೆಲಸಕ್ಕೆ 22ರ ಯುವತಿ ದಿಢೀರ್ ರಿಸೈನ್!

ಬೆಂಗಳೂರಿನ 22 ವರ್ಷದ ಮಾರ್ಕೆಟಿಂಗ್ ಉದ್ಯೋಗಿ ದೀಕ್ಷಾ, ಯಾವುದೇ ಪರ್ಯಾಯ ಯೋಜನೆ (Backup Plan) ಇಲ್ಲದಿದ್ದರೂ ತನಗಿದ್ದ ತಿಂಗಳ 60,000 ರೂಪಾಯಿ ಸಂಬಳದ ಕೆಲಸಕ್ಕೆ ದಿಢೀರ್ ರಾಜೀನಾಮೆ ನೀಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ನಿರಂತರ ಒತ್ತಡದ ದಿನಚರಿಯಿಂದ ಬೇಸತ್ತು, ಜೀವನವನ್ನು ಮುಕ್ತವಾಗಿ ಆನಂದಿಸಲು ತಾವು ಈ ಧೈರ್ಯದ ರಿಸ್ಕ್ ತಗೆದುಕೊಂಡಿರುವುದಾಗಿ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರಿಂದ ಭಾರೀ ಬೆಂಬಲ ವ್ಯಕ್ತವಾಗಿದೆ.

Viral: 9 ಟು 5 ಲೈಫ್ ಬೇಡಪ್ಪಾ: ಬೆಂಗಳೂರಲ್ಲಿ 60 ಸಾವಿರ ಸಂಬಳದ ಕೆಲಸಕ್ಕೆ 22ರ ಯುವತಿ ದಿಢೀರ್ ರಿಸೈನ್!
ಬೆಂಗಳೂರಲ್ಲಿ 60 ಸಾವಿರ ಸಂಬಳದ ಕೆಲಸಕ್ಕೆ 22ರ ಯುವತಿ ದಿಢೀರ್ ರಿಸೈನ್! Image Credit source: dikshaaonly instagram account
ಭಾವನಾ ಹೆಗಡೆ
|

Updated on:Jun 06, 2026 | 12:03 PM

Share

ಬೆಂಗಳೂರು, ಜೂನ್ 06: ಇಂದಿನ ದಿನಗಳಲ್ಲಿ ಕೈತುಂಬಾ ಸಂಬಳ ಕೊಡುವ ಐಟಿ ಅಥವಾ ಕಾರ್ಪೊರೇಟ್ ಕೆಲಸ ಸಿಗುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ (Bengaluru) 22 ವರ್ಷದ ದೀಕ್ಷಾ ಎಂಬ ಯುವತಿ, ತನಗಿದ್ದ ತಿಂಗಳ 60 ಸಾವಿರ ರೂ. ಆದಾಯದ ಮಾರ್ಕೆಟಿಂಗ್ ಕೆಲಸಕ್ಕೆ ಯಾವುದೇ ಪರ್ಯಾಯ ಯೋಜನೆ ಇಲ್ಲದೆ ರಾಜೀನಾಮೆ ನೀಡಿ ಎಲ್ಲರ ಗಮನ ಸೆಳೆದಿದ್ದಾಳೆ.

ಮುಖ್ಯಾಂಶಗಳು

  • ಬೆಂಗಳೂರಿನ 22 ವರ್ಷದ ಯುವತಿಯಿಂದ 60 ಸಾವಿರ ಸಂಬಳದ ಕೆಲಸಕ್ಕೆ ರಾಜೀನಾಮೆ.
  • ಯಾವುದೇ ಬ್ಯಾಕಪ್ ಪ್ಲಾನ್ ಇಲ್ಲದೆ ಕಾರ್ಪೊರೇಟ್ ಕೆಲಸ ಬಿಟ್ಟ ದೀಕ್ಷಾ.
  • ಒತ್ತಡದ ದಿನಚರಿಗೆ ಬೇಸತ್ತು ರಿಸ್ಕ್ ತಗೊಡ ಯುವತಿಗೆ ನೆಟ್ಟಿಗರ ಸಾಥ್.

ಕಾಲೇಜು ಪ್ಲೇಸ್‌ಮೆಂಟ್ ಮೂಲಕ ಮಾರ್ಕೆಟಿಂಗ್ ಕೆಲಸ ಗಿಟ್ಟಿಸಿಕೊಂಡಿದ್ದ ದೀಕ್ಷಾ, ಈ ಉದ್ಯೋಗಕ್ಕಾಗಿಯೇ ಬೆಂಗಳೂರಿಗೆ ಶಿಫ್ಟ್ ಆಗಿದ್ದಳು. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಆಕೆ, ತನ್ನ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾಳೆ.

View this post on Instagram

A post shared by Dikshaaonly (@dikshaaonly)

ಇದು 9 ಟು 5 ಅಲ್ಲ, 9 ಟು 9 ಲೈಫ್

ಅಷ್ಟು ಒಳ್ಳೆಯ ಕೆಲಸಕ್ಕೆ ರಿಸೈನ್ ಕೊಟ್ಟ ದೀಕ್ಷಾ, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಡಿದ್ದಾಳೆ. ನನಗೆ 22 ವರ್ಷಕ್ಕೇ ತಿಂಗಳಿಗೆ 60 ಸಾವಿರ ಸಂಬಳ ಸಿಗುತ್ತಿತ್ತು. ಕೆಲಸವೂ ಸಖತ್ ಮಜವಾಗಿತ್ತು, ಒಳ್ಳೆಯ ಸ್ನೇಹಿತರು ಸಿಕ್ಕಿದ್ದರು. ಆದರೆ ನನಗೆ ಪ್ರತಿದಿನ ಅದೇ ದಿನಚರಿ (Routine) ಸಾಕಾಗಿಹೋಗಿತ್ತು. ಇದು ಕೇವಲ ಬೆಳಗ್ಗೆ 9 ರಿಂದ ಸಂಜೆ 5 ರ ಕೆಲಸವಾಗಿರಲಿಲ್ಲ. ಬದಲಿಗೆ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ದುಡಿಯುವುದು, ಮನೆಗೆ ಬಂದು ಊಟ ಮಾಡಿ ಮಲಗುವುದು. ಮತ್ತೆ ಇದನ್ನೇ ಪುನರಾವರ್ತಿಸುವ ಈ ಜೀವನ ನನಗೆ ಸಾಕೆನ್ನಿಸಿದೆ. ನಮ್ಮದೇ ಸ್ವಂತ ಜೀವನವನ್ನು ಆನಂದಿಸಲು ಕೇವಲ ವೀಕೆಂಡ್‌ಗಾಗಿ ಕಾಯುವ ಪರಿಸ್ಥಿತಿ ನನಗಿಷ್ಟವಿರಲಿಲ್ಲ ಎಂದು ದೀಕ್ಷಾ ಹೇಳಿದ್ದಾಳೆ.

ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳುವುದಕ್ಕಿಂತ ರಿಸೈನ್ ಮಾಡುವುದೇ ಲೇಸು!

ಯಾವುದೇ ಪ್ಲಾನ್ ಇಲ್ಲದೆ ಕೆಲಸ ಬಿಡುವ ರಿಸ್ಕ್ ಬಗ್ಗೆ ಮಾತನಾಡಿದ ಆಕೆ, ದಿನವೂ ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳುವುದಕ್ಕಿಂತ, ಯಾವುದೋ ಒಂದು ದಿನ ದಿಢೀರ್ ಎಂದು ಕಂಪನಿಗೆ ರಿಸೈನ್ ಮಾಡಿಬಿಟ್ಟೆ. ನನ್ನ ಬಳಿ ಯಾವುದೇ ಬ್ಯಾಕಪ್ ಪ್ಲಾನ್ ಇಲ್ಲ. ಮುಂದೆ ಜೀವನದಲ್ಲಿ ಏನು ಮಾಡಬೇಕೆಂದೂ ಗೊತ್ತಿಲ್ಲ. ಆದರೆ ಒಂದೇ ಕಡೆ ಇಡೀ ಜೀವನವನ್ನು ಕಳೆಯಲು ನನಗಿಷ್ಟವಿಲ್ಲ. ರಿಸ್ಕ್ ಇಲ್ಲದಿದ್ದರೆ ಲೈಫಲ್ಲಿ ಸ್ಟೋರಿಗಳೇ ಇರಲ್ಲ. ಸದ್ಯಕ್ಕೆ ನಾನು ಸ್ವತಂತ್ರವಾಗಿ ಬದುಕಲು ಬಯಸುತ್ತೇನೆ. ಒಂದು ವೇಳೆ ನನ್ನ ಈ ನಿರ್ಧಾರ ಕೈಕೊಟ್ಟರೆ, ಮತ್ತೆ ಮೊದಲಿನಿಂದ ಜೀವನ ಆರಂಭಿಸುತ್ತೇನೆ ಎಂದು ಧೈರ್ಯವಾಗಿ ಹೇಳಿಕೊಂಡಿದ್ದಾಳೆ.

ದೀಕ್ಷಾ ಧೈರ್ಯಕ್ಕೆ ನೆಟ್ಟಿಗರು ಫಿದಾ!

ದೀಕ್ಷಾ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಕಾರ್ಪೊರೇಟ್ ಜಗತ್ತಿನ ಒತ್ತಡದ ಜೀವನಕ್ಕೆ ಬೇಸತ್ತಿರುವ ಸಾವಿರಾರು ಯುವಜನರು ಈಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಿಮ್ಮ ವಿಡಿಯೋ ನನಗೂ ಕೆಲಸ ಬಿಡುವ ಧೈರ್ಯ ನೀಡಿದೆ ಎಂದು ಕೆಲವರು ಹೇಳಿದರೆ, ಕೆಲವೊಮ್ಮೆ ಜೀವನದಲ್ಲಿ ಇಂತಹ ಬ್ರೇಕ್ ತಗೊಳ್ಳುವುದು ತುಂಬಾನೇ ಮುಖ್ಯ, ಇದು ನಿಜಕ್ಕೂ ಧೈರ್ಯದ ನಿರ್ಧಾರ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:02 pm, Sat, 6 June 26

Follow Us
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ