
ಬೆಂಗಳೂರು, ಮಾರ್ಚ್ 16: ಬೆಂಗಳೂರು (Bengaluru) ಅಂದ್ರೆ ದುಬಾರಿ. ಇಲ್ಲಿ ಎಷ್ಟು ದುಡಿದ್ರೂ ಮನೆ ಬಾಡಿಗೆ, ದಿನಸಿ ಹಾಗೂ ಉಳಿದ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಹೋಗೋದ್ರಲ್ಲಿಯೇ ಜೇಬು ಖಾಲಿಯಾಗಿರುತ್ತದೆ. ಇಂತಹದ್ದೇ ಅನುಭವ ಯುವತಿಯೊಬ್ಬಳಿಗೆ ಆಗಿದೆ. ಬೆಂಗಳೂರಿನಲ್ಲಿ ಎರಡು ತಿಂಗಳ ಇಂಟರ್ನ್ಶಿಪ್ ಅವಧಿಯಲ್ಲಿ ಅಂಶಿಕಾ ಅಗರ್ವಾಲ್ (Anshika Aggarwal) ತನ್ನ ಮಾಸಿಕ ಖರ್ಚು ವೆಚ್ಚಗಳ ಬಗ್ಗೆ ಮಾತನಾಡಿದ್ದಾಳೆ. ಈ ಪೋಸ್ಟ್ನಲ್ಲಿ ವಿವರವಾದ ಮಾಹಿತಿ ನೀಡಿದ್ದಾಳೆ.
ಅಂಶಿಕಾ ಅಗರ್ವಾಲ್ (@kipupwidanshika) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಸಿಕ ಖರ್ಚುವೆಚ್ಚಗಳ ಬಗ್ಗೆ ಉಲ್ಲೇಖಿಸಿರುವುದನ್ನು ಕಾಣಬಹುದು. ಪಿಜಿಗೆ ಪಾವತಿಸಲು ಮಾತ್ರ ತಿಂಗಳಿಗೆ ಸುಮಾರು 12,500 ರೂ ಖರ್ಚು ಆಯ್ತು. ಆಹಾರವು ಎರಡನೇ ಅತಿದೊಡ್ಡ ವೆಚ್ಚವಾಗಿದ್ದು, ಪ್ರತಿ ತಿಂಗಳು ಸುಮಾರು 6,000 ರೂ ಊಟಕ್ಕೆ ಎತ್ತಿಡಬೇಕಾಯ್ತು. ಪಿಜಿ ವಸತಿ ಸೌಕರ್ಯವು ಸಾಮಾನ್ಯವಾಗಿ ಆಹಾರವನ್ನು ಒಳಗೊಂಡಿದ್ದರೂ, ಆ ಆಹಾರವನ್ನು ಹೆಚ್ಚು ಅವಲಂಬಿಸಲು ಸಾಧ್ಯವಾಗಲಿಲ್ಲ ಹೊರಗಿನ ಊಟಕ್ಕೆ ಹೆಚ್ಚುವರಿ ಖರ್ಚು ಮಾಡಬೇಕಾಗಿತ್ತು ಎಂದು ಹೇಳಿದ್ದಾಳೆ.
ಮಾಸಿಕ ವೆಚ್ಚಗಳಲ್ಲಿ ಟ್ರಾವೆಲ್ಗಾಗಿ ಸರಿಸುಮಾರು 2,000 ರೂ ಸೇರಿವೆ. ಸುತ್ತಾಟಕ್ಕಾಗಿ 2,000 ರೂ, (ಇಂಟರ್ನ್ಶಿಪ್ ಅವಧಿಯಲ್ಲಿ ತಾನು ಹೆಚ್ಚಾಗಿ ಹೊರಗೆ ಹೋಗುತ್ತಿರಲಿಲ್ಲ) ಹಾಗೂ ದೈನಂದಿನ ಅಗತ್ಯ ವಸ್ತುಗಳಂತಹ ವಿವಿಧ ವೆಚ್ಚಗಳು 1,000 ರೂಯಿಂದ 2,000 ರೂ ತಗಲಿವೆ. ಒಟ್ಟಾರೆಯಾಗಿ ಎರಡು ತಿಂಗಳ ಇಂಟರ್ನ್ಶಿಪ್ ಅವಧಿಯಲ್ಲಿ26,000 ರೂ ಖರ್ಚು ಆಯಿತು ಎಂದು ಬರೆದುಕೊಂಡಿದ್ದಾಳೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ತಿಂಗಳಿಗೆ 1.5 ಲಕ್ಷ ರೂ. ಸಂಬಳ, ಉಳಿಯೋದು 20 ಸಾವಿರ ಮಾತ್ರ! ಟೆಕ್ಕಿ ಸಂಬಂಧಿಯ ಪೋಸ್ಟ್ ವೈರಲ್
ಈ ಪೋಸ್ಟ್ ಹದಿನೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನನ್ನದು ತಿಂಗಳಿಗೆ 40 ರಿಂದ 50 ಸಾವಿರ ರೂ ಖರ್ಚು ಎಂದು ಹೇಳಿದ್ದಾರೆ. ಇನ್ನೊಬ್ಬರು, ತುಂಬಾ ದುಬಾರಿಯಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಬಹುಶಃ ನನಗೆ ಪ್ರವಾಸಕ್ಕೆ ಸುಮಾರು 4-5 ಸಾವಿರ ಬೇಕಾಗಬಹುದು. ನಿಮ್ಮ ಖರ್ಚುಗಳನ್ನು ನಿಯಂತ್ರಿಸಿದರೆ ಬೆಂಗಳೂರಿನಲ್ಲಿ ವಾಸಿಸುವುದು ಅಷ್ಟು ದುಬಾರಿಯಲ್ಲ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ