Viral: ಮನೆ ಖಾಲಿ ಮಾಡ್ತೇನೆ ಎಂದ ಯುವತಿಗೆ ಮನ ಮುಟ್ಟುವಂತೆ ರಿಪ್ಲೈ ಕೊಟ್ಟ ಓನರ್

ಬಾಡಿಗೆ ಮನೆಯಲ್ಲಿದ್ದರೆ ಈ ಮನೆ ಮಾಲೀಕರು ಒಂದಲ್ಲ ಒಂದು ವಿಷ್ಯಕ್ಕೆ ಕಿರಿಕಿರಿ ಮಾಡೋದನ್ನು ನೀವು ನೋಡಿರುತ್ತೀರಿ. ಹೀಗಿರುವಾಗ ಮನೆ ಖಾಲಿ ಮಾಡ್ತೇನೆ ಎಂದ ಯುವತಿ ಮನೆ ಓನರ್ ಕೊಟ್ಟ ಉತ್ತರ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಓನರ್ ಮಾಡಿದ ಮೆಸೇಜ್ ಸ್ಕ್ರೀನ್ ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಮನೆ ಖಾಲಿ ಮಾಡ್ತೇನೆ ಎಂದ ಯುವತಿಗೆ ಮನ ಮುಟ್ಟುವಂತೆ ರಿಪ್ಲೈ ಕೊಟ್ಟ ಓನರ್
ವೈರಲ್ ಪೋಸ್ಟ್
Image Credit source: Twitter

Updated on: Jun 24, 2026 | 12:29 PM

ಬೆಂಗಳೂರು, ಜೂನ್ 24: ಬೆಂಗಳೂರಿಗೆ (Bengaluru) ಶಿಕ್ಷಣ, ಉದ್ಯೋಗ ಎಂದು ಬಂದು ಬಾಡಿಗೆ ಮನೆ, ಪಿಜಿ ಮಾಡಿಕೊಂಡು ಇರುವವರೇ ಹೆಚ್ಚು. ಬಾಡಿಗೆ ಮನೆ ಮಾಡಿಕೊಂಡರೆ ಮನೆಮಾಲೀಕರ ಆಸೆಬುರುಕುತನದಿಂದ ತಿಂಗಳ ಸಂಬಳವೇ ಉಳಿಯಲ್ಲ. ಒಳ್ಳೆಯ ಮನೆ ಓನರ್ ಸಿಕ್ಕಿದ್ರೆ ಅದಕ್ಕಿಂತ ಅದೃಷ್ಟ ಮತ್ತೊಂದಿಲ್ಲ. ಇದೀಗ ಮನೆ ಖಾಲಿ ಮಾಡುತ್ತೇನೆ ಎಂದ ಯುವತಿಗೆ ಓನರ್ ಕೊಟ್ಟ ಉತ್ತರ ಹೃದಯ ಸ್ಪರ್ಶಿಯಾಗಿದೆ. ದಯವಿಟ್ಟು ಹೋಗಬೇಡಿ ಇಲ್ಲೇ ಉಳಿಯಿರಿ ಎನ್ನುವ ಓನರ್ ಮಾತು ನೆಟ್ಟಿಗರ ಹೃದಯ ಗೆದ್ದಿದೆ.

ಕೃತಿಕಾ ಕುಮಾರಿ (Kritika kumari)  ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನಲ್ಲಿ ನಾನು ಜುಲೈ ಅಂತ್ಯಕ್ಕೆ ಮನೆ ಖಾಲಿ ಮಾಡುವುದಾಗಿ ನಾನು ನಮ್ಮ ಓನರ್‌ಗೆ ತಿಳಿಸಿದ್ದೆ. ಆದರೆ ನನಗೆ ಬೇರೆ ಫ್ಲ್ಯಾಟ್ ಸಿಗಲಿಲ್ಲ. ಸೆಪ್ಟೆಂಬರ್‌ವರೆಗೆ ಇಲ್ಲೇ ಇರಬಹುದಾ ಎಂದು ಮೆಸೇಜ್ ಮಾಡಿದೆ. ಅದಕ್ಕೆ ಓನರ್ ಉತ್ತರ ಕೊಟ್ಟಿದ್ದು, ದಯವಿಟ್ಟು ಹೋಗಬೇಡಿ. ನೀವು ಇನ್ನೂ ಹೆಚ್ಚು ಕಾಲ ನಮ್ಮ ಮನೆಯಲ್ಲೇ ಬಾಡಿಗೆಗೆ ಇರಬೇಕು ಅನ್ನೋದು ನನ್ನ ಆಸೆ ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ಅಂದು ದ್ವೇಷಿಸುತ್ತಿದ್ದ ಈ ನಗರ ಇಂದು ನಂಗೆ ತುಂಬಾ ಆಪ್ತ; ಬೆಂಗಳೂರನ್ನು ಮೆಚ್ಚಿಕೊಂಡ ಮಹಿಳೆ

ಈ ಪೋಸ್ಟ್ ನಾಲ್ಕುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಂತಹ ಓನರ್ ಸಿಕ್ಕರೆ ಯಾರು ಮನೆ ಖಾಲಿ ಮಾಡ್ತೇನೆ ಎಂದಿದ್ದಾರೆ. ಮತ್ತೊಬ್ಬರು, ಇಂಥಾ ಒಳ್ಳೆ ಓನರ್ ಸಿಗೋಕೆ ಪುಣ್ಯ ಮಾಡಿರಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬರು, ನನ್ನ ಪ್ರಕಾರ ಇದು ಪ್ರಪೋಸಲ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:26 am, Wed, 24 June 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us