
ಈಗೇನಿದ್ದರೂ ಕೈಯಲ್ಲಿ ದುಡ್ಡಿ (money) ದರೆ ಮಾತ್ರ ಜೀವನ ನಡೆಸಲು ಸಾಧ್ಯ. ದುಬಾರಿ ದುನಿಯಾದಲ್ಲಿ ಬರುವ ಅಲ್ಪ ಸ್ವಲ್ಪ ಸಂಬಳದಲ್ಲಿ ದಿನನಿತ್ಯ ವೆಚ್ಚಗಳನ್ನು ತೂಗಿಸಿಕೊಂಡು ಹೋಗುವಷ್ಟರಲ್ಲಿ ಸಾಕಾಗಿರುತ್ತದೆ. ಅದರಲ್ಲಿ ದಿನಸಿ ವಸ್ತುಗಳಿಂದ ಹಿಡಿದು ಇಂಧನ ಬೆಲೆ, ಮನೆ ಬಾಡಿಗೆಯಲ್ಲಿ ಹೆಚ್ಚಳವಾಗಿರುವ ಕಾರಣ ಜೀವನ ನಡೆಸುವುದು ಕಷ್ಟಕರವಾಗಿದೆ. ಬೆಂಗಳೂರಿ (Bengaluru) ನಲ್ಲಿ ವಾಸಿಸುತ್ತಿರುವ ಐಐಟಿ ಪದವೀಧರ (IIT graduate) ರೊಬ್ಬರು ಭಾರತದಲ್ಲಿ ಹೆಚ್ಚುತ್ತಿರುವ ವೆಚ್ಚದ ಕುರಿತು ಪೋಸ್ಟ್ ಮಾಡಿದ್ದು, ಹೀಗಾಗಿ ಇಲ್ಲಿ ಜೀವನ ನಡೆಸುವುದು ಅಷ್ಟು ಸುಲಭವಲ್ಲ ಎನ್ನುವುದನ್ನು ಉಲ್ಲೇಖಿಸಿದ್ದಾರೆ.
@monali dambre ಹೆಸರಿನ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಮೊನಾಲಿ ಡಾಂಬ್ರೆ ವಿವರವಾಗಿ ತಮ್ಮ ಮನಸ್ಸಿನ ಮಾತನ್ನು ಬರೆದುಕೊಂಡಿದ್ದಾರೆ, ಈ ಪೋಸ್ಟ್ ನಲ್ಲಿ, ʼಭಾರತದಲ್ಲಿ ನಿಜಕ್ಕೂ ಜೀವನ ವೆಚ್ಚವು ದುಬಾರಿಯಾಗುತ್ತಿದೆ ಎಂಬುದನ್ನ ನಾನೂ ನಿಧಾನವಾಗಿ ಒಪ್ಪಿಕೊಳ್ಳುತ್ತಿದ್ದೇನೆ. ಇಲ್ಲಿನ ಸಣ್ಣ ಮತ್ತು ಟೈಯರ್ 3 ನಗರಗಳಲ್ಲಿಯೂ ಜೀವನ ಸಾಗಿಸೋದು ಕಷ್ಟವಾಗುತ್ತಿದೆ. ಮಧ್ಯಮವರ್ಗ ಹಾಗೂ ಕೆಳವರ್ಗದವರಿಗೆ ತಮ್ಮ ಆದಾಯದಲ್ಲಿ ಬದುಕು ಸಾಗಿಸುವುದೇ ಕಷ್ಟವಾಗುತ್ತಿದೆ. ಭವಿಷ್ಯ ಏನು ಎಂದು ಯೋಚಿಸಿದರೇ ನಿಜಕ್ಕೂ ಆತಂಕವಾಗುತ್ತಿದೆ. ಹೌದು ನಾವು ಪ್ರತಿದಿನ ಬಳಸುವ ವಸ್ತುಗಳ ಬೆಲೆಯೇ ದುಬಾರಿಯಾಗುತ್ತಿದೆ. ಈ ಬೆಂಗಳೂರಲ್ಲಿ ವಾಸಿಸುತ್ತಿರುವ ನನಗೆ ನನ್ನ ದಿನಸಿ ಬೆಲೆಯೇ ಜಾಸ್ತಿಯಾಗುತ್ತಿದೆ. ಕೇವಲ ಅಗತ್ಯವಿರುವಷ್ಟೇ ಸಾಮಗ್ರಿಗಳನ್ನು ಖರೀದಿ ಮಾಡಿದರೂ ಕೂಡ ಬೆಲೆ ಮಾತ್ರ ಹೆಚ್ಚೇ ಆಗುತ್ತಿದೆ. ಹಣ್ಣು, ತರಕಾರಿ ಮತ್ತು ದಿನನಿತ್ಯ ಬೇಕಾಗುವ ಒಂದಷ್ಟು ಸಾಮಗ್ರಿಗಳು ತುಂಬಾನೇ ದುಬಾರಿಯಾಗಿವೆ. ವಸ್ತುಗಳಿರುವ ನಿಗದಿತ ಬೆಲೆಕ್ಕಿಂತ ಹೆಚ್ಚು ಹಣವನ್ನು ನೀಡಿ ಖರೀದಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : Operation Sindoor: ಮೋದಿಗೆ ಹೋಗಿ ಹೇಳು ಎಂದಿದ್ದವರಿಗೆ ದಿಟ್ಟ ಉತ್ತರ, #Itoldmodi ವೈರಲ್!
ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈಗಾಗಲೇ ಐದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರು ಮಾಡಿರುವ ಕಾಮೆಂಟ್ ಗಳು ಹೀಗಿವೆ. ಒಬ್ಬ ಬಳಕೆದಾರರು, ಆಹಾರ ಹಾಗೂ ದಿನಸಿ ವಸ್ತುಗಳ ಮೇಲಿನ ಹಣದುಬ್ಬರ ತುಂಬಾನೇ ಹೆಚ್ಚಾಗಿದೆ. ಸಾಮಾನ್ಯವಾಗಿ ಜೀವನ ವೆಚ್ಚವು ವಾರ್ಷಿಕವಾಗಿ 5-6% ಮಿತಿಗಿಂತ ಹೆಚ್ಚಾಗಿದೆ ಎಂದು ಬರೆದಿದ್ದಾರೆ. ಮತ್ತೊಬ್ಬರು, ವರ್ಷಗಳು ಉರುಳಿದಂತೆ ಮಧ್ಯಮ ಹಾಗೂ ಕೆಳವರ್ಗದ ಜನರು ಜೀವನ ನಡೆಸಲು ಅಸಾಧ್ಯ ಎಂದಿದ್ದಾರೆ. ಮತ್ತೊಬ್ಬರು, ಹೀಗೆ ಆದರೆ ಎಷ್ಟೇ ದುಡಿದರೂ ಕೂಡ ಜೀವನ ನಡೆಸಲು ಹಣವೇ ಸಾಕಾಗುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ