Video: ಬೆಂಗ್ಳೂರಿಗೆ ಬಂದ್ರೆ ನಿದ್ದೆ ಮಾಡೋಕೆ ಮನಸ್ಸಾಗುತ್ತೆ; ವೈರಲ್‌ ಆಯ್ತು ಕಾಮಿಡಿಯನ್‌ ಕೊಟ್ಟ ಪಂಚ್‌ ಡೈಲಾಗ್‌

ಬೆಂಗಳೂರು ಅಂದ್ರೆ ಅದೇನೋ ಸೆಳೆತ. ಹೀಗಾಗಿ ಬೆಂಗಳೂರು ನಗರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದನ್ನು ನೀವು ನೋಡಿರುತ್ತೀರಿ. ಆದರೆ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಶುಭಂ ಪೂಜಾರಿ ಬೆಂಗಳೂರಿನ ಹವಾಮಾನದ ಬಗ್ಗೆ ಮಾತನಾಡಿದ್ದಾರೆ. ತಾವು ಈ ನಗರಕ್ಕೆ ಬಂದರೆ ಇಲ್ಲಿನ ಹವಾಮಾನ ತನಗೆ ಹೇಗೆ ಪ್ರಭಾವ ಬೀರಿತು ಎಂದು ಹೇಳಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಬೆಂಗ್ಳೂರಿಗೆ ಬಂದ್ರೆ ನಿದ್ದೆ ಮಾಡೋಕೆ ಮನಸ್ಸಾಗುತ್ತೆ; ವೈರಲ್‌ ಆಯ್ತು ಕಾಮಿಡಿಯನ್‌ ಕೊಟ್ಟ ಪಂಚ್‌ ಡೈಲಾಗ್‌
ಸ್ಟ್ಯಾಂಡ್ ಅಪ್ ಕಾಮಿಡಿಯನ್ ಶುಭಂ ಪೂಜಾರಿ
Image Credit source: Instagram

Updated on: Jul 20, 2026 | 4:13 PM

ಬೆಂಗಳೂರು, ಜುಲೈ 20: ಬೆಂಗಳೂರಿಗೆ (Bengaluru) ಬರುವ ಅನೇಕರು ಇಲ್ಲಿನ ಹವಾಮಾನ, ಟ್ರಾಫಿಕ್ ಸಮಸ್ಯೆ, ರಸ್ತೆ ಗುಂಡಿಗಳ ಸಮಸ್ಯೆ ಹೀಗೆ ಒಂದಲ್ಲ ಒಂದು ವಿಷ್ಯದ ಬಗ್ಗೆ ಪೋಸ್ಟ್ ಹಂಚಿಕೊಳ್ಳುವುದಿದೆ. ಆದರೆ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಶುಭಂ ಪೂಜಾರಿಯವರಿಗೆ ಬೆಂಗಳೂರಿಗೆ ಬಂದ್ರೆ ಕೆಲಸ ಮಾಡೋಕೆ ಮನಸ್ಸೇ ಆಗಲ್ಲವಂತೆ. ಮತ್ತೆ ಅಲಸ್ಯ ಭಾವನೆ ಮೂಡುತ್ತದೆ ಎಂದು ಹೇಳಿದ್ದಾರೆ. ಈ ಪೋಸ್ಟ್ ಸದ್ಯ ಆನ್ಲೈನ್‌ನಲ್ಲಿ ವೈರಲ್ ಆಗಿದ್ದು ಚರ್ಚೆಗೆ ಕಾರಣವಾಗಿದೆ.

ಶುಭಂ ಪೂಜಾರಿ (Shubham pujari) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಬೆಂಗಳೂರಿಗೆ ಬಂದ ತಕ್ಷಣ ಕಂಬಳಿ ಹೊದ್ದು, ಫ್ಯಾನ್ ವೇಗವನ್ನು ಮಧ್ಯಮದಲ್ಲಿಟ್ಟುಕೊಂಡು, ಮೊಬೈಲ್ ಸ್ಕ್ರಾಲ್ ಮಾಡುತ್ತಾ ಮಲಗ್ಬೇಕು ಎಂದೆನಿಸುತ್ತದೆ. ಹೀಗಾಗಿ ನನಗೆ ಐಟಿ ಹಬ್ ಹಾಗೆ ಕಾಣಿಸಲ್ಲ, ನಿವೃತ್ತಿ ನಂತರದಲ್ಲಿ ವಿಶ್ರಾಂತಿ ಪಡೆಯುವ ತಾಣದಂತೆ ಕಾಣುತ್ತದೆ ಎಂದು ವಾಸ್ತವ ಸ್ಥಿತಿ ಬಗ್ಗೆ ವಿವರಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ದೆಹಲಿಯಲ್ಲಿ ಒಂದು ಕಪ್ ಚಹಾ ಕುಡಿದ್ರೆ ಕ್ಷಣಾರ್ಧದಲ್ಲಿ ಕೆಲಸ ಮಾಡಬೇಕೆಂದು ಅನಿಸುತ್ತದೆ. ಆದ್ರೆ ಬೆಂಗಳೂರಿನಲ್ಲಿ ಹಾಗೆ ಅಲ್ಲ, ಮೂರು ನಾಲ್ಕು ಕಪ್ ಚಹಾ ಕುಡಿದರೂ ಉದಾಸೀನ ಮಾತ್ರ ನಮ್ಮ ಬಿಟ್ಟು ದೂರ ಹೋಗಲ್ಲ. ಈ ಹವಾಮಾನವಿದ್ರೂ ಬೆಂಗಳೂರಿಗರು ಪ್ರತಿದಿನ ಬೆಳಿಗ್ಗೆ ಎದ್ದು ಆಫೀಸ್‌ಗೆ ಹೇಗೆ ಹೋಗ್ತಾರೆ. ಈ ಜನರಿಗೆ ದೊಡ್ಡ ಮೊತ್ತದ ಸಾಲ ಹಾಗೂ ಇಎಂಐಗಳು ಇರಬೇಕು. ಇಲ್ಲದಿದ್ರೆ ಈ ಹವಾಮಾನದಲ್ಲೂ ಅತಂತ್ಯ ಉತ್ಸಾಹದಿಂದ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಆಟೋ ಚಾಲಕನ ಆತ್ಮೀಯತೆಗೆ ಫಿದಾ ಆದ ವಿದೇಶಿಗ

ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ಮಾತನ್ನು ನಾವು ಒಪ್ಪುತ್ತೇವೆ ಎಂದಿದ್ದಾರೆ. ಇನ್ನೊಬ್ಬರು, ಇಎಂಐ ಪ್ರಭಾವ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇಲ್ಲಿನ ದಿನಚರಿ ಮಲಗುವುದು, ಬೆಳಗ್ಗೆ ಏಳುವುದು ಹಾಗೂ ಸ್ವಲ್ಪ ಕೆಲಸ ಮಾಡಿ ಮತ್ತೆ ಮಲಗುವುದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us