ಉತ್ತರ ಪ್ರದೇಶ: ಗೋಧಿ ಕಟಾವು ಮಷಿನ್ ಒಳಗೆ ಸಿಲುಕಿ 14 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಈ ಭೀಕರ ಘಟನೆಯಲ್ಲಿ ಬಾಲಕನ ದೇಹ ಛಿದ್ರಗೊಂಡಿದ್ದು, ದೃಶ್ಯ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಹಿತಿಗಳ ಪ್ರಕಾರ 14 ವರ್ಷದ ಬಾಲಕ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದು, ಗೋಧಿ ಕಟಾವು ಯಂತ್ರವನ್ನು ನಿರ್ವಹಿಸುತ್ತಿದ್ದ. ಆದರೆ, ಏಕಾಏಕಿ ಜೋರಾಗಿ ಬೀಸಿದ ಗಾಳಿಯ ರಭಸಕ್ಕೆ ಯಂತ್ರದ ಮೇಲೆ ಇಟ್ಟಿದ್ದ ಟಾರ್ಪಾಲಿನ್ ಹಾರಿ ಹೋಗಿದೆ. ಪರಿಣಾಮ ಟಾರ್ಪಾಲ್ ಸಮೇತ ಬಾಲಕ ಕಟಾವು ಯಂತ್ರದೊಳಗೆ ಬಾಲಕ ಬಿದ್ದಿದ್ದಾನೆ. ಬಾಲಕ ಕಿರುಚುವ ಧ್ವನಿ ಕೇಳುತ್ತಿದ್ದಂತೆ ಅಕ್ಕಪಕ್ಕದ ಜಮೀನಿನಲ್ಲಿದ್ದ ಗ್ರಾಮಸ್ಥರು ಓಡೋಡಿ ಬಂದಿದ್ದರು ಕೂಡ ಅಷ್ಟೋತ್ತಿಗಾಗಲೇ ಬಾಲಕನ ದೇಹ ಛಿದ್ರಗೊಂಡಿದೆ.
UP के आगरा मे गेहूं थ्रेशिंग के दौरान 14 साल की उम्र का किशोर काल का ग्रास बन गया। थ्रेसिंग मशीन मे लान के साथ किशोर भी मशीन मे खिंचा चला गया और शरीर कई अनगिनत टुकड़ो मे बदल गया।
भयानक वीडियो 🔺#Agra #UttarPradesh pic.twitter.com/kRXyMNyZm6
— TRUE STORY (@TrueStoryUP) April 23, 2024
ಇದನ್ನೂ ಓದಿ: ಬಿರಿಯಾನಿ ಬಡಿಸಲು ಶ್ರೀರಾಮನ ಚಿತ್ರವಿರುವ ಪ್ಲೇಟ್ ಬಳಕೆ; ಹೋಟೆಲ್ ಮಾಲೀಕನ ಬಂಧನ
ಯಂತ್ರದ ಬಳಿ ತಲುಪಿದಾಗ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ ದುರದೃಷ್ಟಕರ ಬಾಲಕ ಯಂತ್ರದೊಳಗೆ ಸಿಕ್ಕಿಹಾಕಿಕೊಂಡಿರುವುದನ್ನು ಕಾಣಬಹುದು. ನಂತರ ಬಾಲಕನನ್ನು ಬಹಳ ಕಷ್ಟಪಟ್ಟು ಯಂತ್ರದಿಂದ ಹೊರತೆಗೆಯಲಾಗಿದ್ದು, ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:50 pm, Wed, 24 April 24