Couple Dance: ಇತ್ತೀಚೆಗೆ ಮೇಲ್ಮಧ್ಯಮ ವರ್ಗದ ಮನೆತನದ ಮದುವೆಗಳು ಬಾಲಿವುಡ್ ಸಿನೆಮಾ ಮತ್ತು ಹಿಂದೀ ಧಾರಾವಾಹಿಗಳ ಪ್ರಭಾವದಿಂದ ಪ್ರೇರೇಪಣೆಗೊಂಡಿರುವುದು ಸರ್ವೇ ಸಾಮಾನ್ಯ. ಅಲ್ಲದೆ ಮದುವೆ ಸಮಾರಂಭದ ಎಲ್ಲಾ ಹಂತಗಳೂ ಸಾಮಾಜಿಕ ಜಾಲತಾಣಗಳಲ್ಲಿ ಅನಾವಣಗೊಳ್ಳುವುದರಿಂದ ಉಳಿದವರೂ ಸಹಜವಾಗಿ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ತಕ್ಕಮಟ್ಟಿಗೆ ಸಿನೀಮೀಯ ಶೈಲಿಯಲ್ಲಿ ತಮ್ಮ ತಮ್ಮ ಮದುವೆಗಳನ್ನು ನೆರವೇರಿಸಿಕೊಂಡು ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋದಲ್ಲಿ ವಧುವರರು ‘ಬೋಲೆ ಚೂಡಿಯಾ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ಬೋಲ ಚೂಡಿಯಾ ಹಾಡು 2001ರಲ್ಲಿ ಬಿಡುಗಡೆಯಾದ ‘ ಕಭಿ ಖುಷಿ ಕಭಿ ಘಮ್ಮ್ಭೀ’ (KG3) ಚಿತ್ರದಿಂದ ಆಯ್ದುಕೊಳ್ಳಲಾಗಿದೆ. ಕರೀನಾ ಕಪೂರ್ ಮತ್ತು ಹೃತಿಕ್ ರೋಷನ್, ಶಾರುಖ್ ಖಾನ್, ಕಾಜೋಲ್ ಮತ್ತು ಅಮಿತಾಬ್ ಬಚ್ಚನ್, ಜಯಾ ಬಚ್ಚನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಆಕರ್ಷಕವಾಗಿ ಹೆಜ್ಜೆ ಹಾಕಿದ ವಧುವರರನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ : Viral Video: ರಷ್ಯಾ; ನಾಲ್ಕು ವರ್ಷದ ನನ್ನ ಮಗಳಷ್ಟೇ ಎತ್ತರ ಈ ನನ್ನ ಬೆಕ್ಕು
ಐದು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು 1.7 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಸುಮಾರು 10,000 ಜನರು ಲೈಕ್ ಮಾಡಿದ್ದಾರೆ. ತುಂಬಾ ಆಕರ್ಷಕವಾಗಿ ಇಬ್ಬರೂ ನರ್ತಿಸಿದ್ದೀರಿ, ನಿಮ್ಮ ದಾಂಪತ್ಯ ಸುಖಮಯವಾಗಿರಲಿ ಎಂದು ಅನೇಕರು ಹಾರೈಸಿದ್ದಾರೆ. ವರನು ವಧುವಿನೆಡೆ ನೋಡುತ್ತಲೇ ಇಲ್ಲ, ತನ್ನ ಗುಂಗಿನಲ್ಲಿ ಡ್ಯಾನ್ಸ್ ಮಾಡುತ್ತಿದ್ದಾನೆ ಎನ್ನಿಸುತ್ತಿಲ್ಲವೆ? ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ಫಿಟ್ನೆಸ್; 68ನೇ ವಯಸ್ಸಿಗೆ ಜಿಮ್ ವರ್ಕೌಟ್ ಶುರು ಮಾಡಿದ ಮಹಿಳೆ
ಹಾಗೇನಿಲ್ಲ ಇಬ್ಬರ ನೃತ್ಯವೂ ಸಿಂಕ್ ಆಗಿದೆ ಎಂದಿದ್ದಾರೆ ಇನ್ನೊಬ್ಬರು. ವೃತ್ತಿಪರ ನೃತ್ಯಕಲಾವಿದರಂತೆಯೇ ಇಬ್ಬರೂ ಹೆಜ್ಜೆ ಹಾಕಿದ್ದಾರೆ, ಸಾಕಲ್ಲವೆ? ಎಂದು ಕೇಳಿದ್ದಾರೆ ಮತ್ತೊಬ್ಬರು. ಒಟ್ಟಾರೆಯಾಗಿ ತಮ್ಮ ಮದುವೆಯ ದಿನದ ಕನಸನ್ನು ಹೀಗೆ ನನಸಾಗಿಸಿಕೊಂಡು ಸಂಭ್ರಮಿಸಿದೆ ಈ ಜೋಡಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:59 am, Thu, 3 August 23