Video: ಭಾರತದ ಟ್ರಿಪ್‌ನಲ್ಲಿ ಜತೆಯಾದ ಆಟೋರಿಕ್ಷಾವನ್ನು ತಾಯ್ನಾಡಿಗೆ ಕೊಂಡೊಯ್ದ ಬ್ರಿಟನ್ ದಂಪತಿ

ಭಾರತದ ಟುಕು ಟುಕು ರಿಕ್ಷಾ ವಿದೇಶಕ್ಕೆ ಹೇಗೆ ಹೋಯ್ತು ಎಂದೆನಿಸಬಹುದು. ಇದರ ಹಿಂದಿದೆ ಬ್ರಿಟನ್ ದಂಪತಿಯ ನಂಟು. ಭಾರತದ ಪ್ರವಾಸದ ಸವಿನೆನಪಿಗಾಗಿ ಆಟೋ ರಿಕ್ಷಾವನ್ನೇ ತಮ್ಮ ದೇಶಕ್ಕೆ ಕೊಂಡೊಯ್ದಿದ್ದಾರೆ. ಪ್ರವಾಸದ ವೇಳೆ ಈ ಆಟೋ ರಿಕ್ಷಾದ ಮೂಲಕ ಸಂಚರಿಸಿದ್ದು, ಇದೀಗ ಯುಕೆ ತಲುಪಿದೆ. ಈ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಭಾರತದ ಟ್ರಿಪ್‌ನಲ್ಲಿ ಜತೆಯಾದ ಆಟೋರಿಕ್ಷಾವನ್ನು ತಾಯ್ನಾಡಿಗೆ ಕೊಂಡೊಯ್ದ ಬ್ರಿಟನ್ ದಂಪತಿ
ವೈರಲ್‌ ವಿಡಿಯೋ
Image Credit source: Instagram

Updated on: Nov 02, 2026 | 6:20 PM

ಭಾರತಕ್ಕೆ ಬರುವ ವಿದೇಶಿಗರು (foreigners) ಇಲ್ಲಿನ ಪ್ರವಾಸಿ ತಾಣಗಳನ್ನು ಎಂಜಾಯ್ ಮಾಡುತ್ತಾರೆ. ಅದರ ಜತೆಗೆ ತಮಗೆ ಇಷ್ಟವಾದ ಯಾವುದಾದರೂ ವಸ್ತುವನ್ನು ತೆಗೆದುಕೊಂಡು ಹೋಗ್ತಾರೆ. ಆದರೆ ಈ ವಿದೇಶಿ ದಂಪತಿ ಮಾಡಿದ ಕೆಲಸ ನೋಡಿದ್ರೆ ನೀವು ಅಚ್ಚರಿ ಪಡ್ತೀರಾ. ಆದರೆ ಬ್ರಿಟನ್ ದಂಪತಿ ಭಾರತದ ಟುಕು ಟುಕು ರಿಕ್ಷಾವನ್ನೇ ಬ್ರಿಟನ್ ದೇಶಕ್ಕೆ ಕೊಂಡೊಯ್ದಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

4,218 ಕಿಲೋಮೀಟರ್ ರಿಕ್ಷಾದಲ್ಲೇ ಪ್ರಯಾಣಿಸಿದ ಬ್ರಿಟನ್ ದಂಪತಿ

ಟಿಮ್ಮಿ_ದಿ_ಟಿನ್_ಕ್ಯಾನ್ (Timmy) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಚೆನ್ನೈನಲ್ಲಿ ಖರೀದಿಸಿ ಟಿಮ್ಮಿ ಎಂದು ಹೆಸರಿಡಲಾದ ಬಜಾಜ್ ಆಟೋರಿಕ್ಷಾ ಭಾರತದಾದ್ಯಂತ 4,218 ಕಿಲೋಮೀಟರ್ ಪ್ರಯಾಣಿಸಿ, ಕೊನೆಗೆ ಲಂಡನ್‌ಗೆ ತಲುಪಿರುವುದನ್ನು ನೀವಿಲ್ಲಿ ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಟಿಮ್ಮಿಯನ್ನು ವಿದೇಶಕ್ಕೆ ಕೊಂಡೊಯ್ದ ದಂಪತಿ

ಬ್ರಿಟನ್ ದಂಪತಿಗಳ 75 ದಿನಗಳ ಪ್ರವಾಸದ ಸಮಯದಲ್ಲಿ ತಾವು ಸುತ್ತಾಡಲು ಆಟೋ ರಿಕ್ಷಾ ಖರೀದಿಸಿದ್ದರು. ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನೋಂದಾವಣೆ ಮಾಡಿಸಿದ್ದರು.
ಈ ವಿದೇಶಿ ದಂಪತಿಗಳ ಪ್ರವಾಸದ ಜತೆಯಾಗಿದ್ದು ಟಿಮ್ಮಿ. ಆಟೋರಿಕ್ಷಾದಲ್ಲಿ ಉತ್ತರ ಭಾರತದಿಂದ ಶ್ರೀಲಂಕಾಕ್ಕೆ ಪ್ರಯಾಣಿಸಿದರು. ರಾಜಸ್ಥಾನ, ಉತ್ತರ ಪ್ರದೇಶ, ಗೋವಾ ಮತ್ತು ದಕ್ಷಿಣ ಭಾರತದ ವಿವಿಧ ಭಾಗಗಳಿಗೆ ತೆರಳಿದಾಗ ಈ ದಂಪತಿಗೆ ಜತೆಯಾದದ್ದು ಈ ಟುಕು ಟುಕು ಆಟೋ. ಭಾರತದ ದರ್ಶನ ಮಾಡಿಸಿದ ಈ ಟಿಮ್ಮಿಯನ್ನು ಬಿಟ್ಟು ಹೋಗಲು ಮನಸ್ಸಾಗದೇ ವಿದೇಶಕ್ಕೆ ಕೊಂಡೊಯ್ಯಲು ನಿರ್ಧಾರ ಮಾಡಿದ್ದರು.

ಯುಕೆ ತಲುಪಿದ ಟಿಮ್ಮಿ ಆಟೋ ರಿಕ್ಷಾ

ವಿದೇಶಕ್ಕೆ ಕೊಂಡೊಯ್ಯಲು ಬೇಕಾದ ತಯಾರಿ ನಡೆಸಿದರು ಆಟೋ ರಿಕ್ಷಾವನ್ನು ಕಾರ್ಗೋಶಿಪ್‌ನಲ್ಲಿ ರವಾನಿಸಲಾಯಿತು. ಇದಾದ ಆರು ತಿಂಗಳ ಬಳಿಕ ಅಂದರೆ 23 ಅಕ್ಟೋಬರ್ 2026 ರಂದು ಲಂಡನ್ ಗೇಟ್‌ ವೇ ಬಂದರಿನಲ್ಲಿ ಈ ದಂಪತಿ ಪ್ರವಾಸದ ಸವಿನೆನಪಿನ ಜತೆಗೆ ಈ ಟಿಮ್ಮಿಯನ್ನು ಖುಷಿಯಿಂದ ಸ್ವಾಗತಿಸಿದ್ದಾರೆ.

ಇದನ್ನೂ ಓದಿ: ಮನೆ ಬಾಗಿಲಿಗೆ ಬಂದು ರಕ್ತ ಪರೀಕ್ಷೆ ಮಾಡುವ ಸೇವೆಗೆ ವಿದೇಶಿ ಮಹಿಳೆ ಫಿದಾ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಟುಕು ಟುಕುವನ್ನು ವಿದೇಶದಲ್ಲಿ ನೋಡುವುದೇ ಖುಷಿ ಎಂದಿದ್ದಾರೆ. ಇನ್ನೊಬ್ಬರು, ಕೊನೆಗೂ ಲಂಡನ್ ತಲುಪಿತು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಭಾರತಕ್ಕೆ ಪ್ರವಾಸಿಗರಾಗಿ ಬಂದ್ರು, ಟುಕು ಟುಕು ಓನರ್ ಆದ್ರು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us