
ಸಹೋದರ ಸಹೋದರಿಯರ ನಡುವೆ ಬಾಲ್ಯದಲ್ಲಿ ಇದ್ದ ಒಡನಾಟ, ಪ್ರೀತಿ ವಿಶ್ವಾಸವು ಬೆಳೆಯುತ್ತಾ ಹೋದಂತೆ ಕಡಿಮೆಯಾಗುತ್ತದೆ. ಎಲ್ಲರೂ ಅವರವರ ಬದುಕಿನ ದಾರಿ ನೋಡುತ್ತಾರೆ. ಆದರೆ ಆ ಪ್ರೀತಿ, ಕಾಳಜಿ ಇನ್ನು ಜೀವಂತವಾಗಿದ್ದರೆ ಅದಕ್ಕಿಂತ ಇನ್ನೇನು ಬೇಕು. ಇದೀಗ ಅಕ್ಕನ ಹುಟ್ಟುಹಬ್ಬಕ್ಕೆ (birthday) ತಮ್ಮನು ಸರ್ಪ್ರೈಸ್ ನೀಡಿದ್ದಾನೆ. ಅಕ್ಕನಿದ್ದ ಮನೆಗೆ ವಿಸಿಟ್ ಕೊಟ್ಟು ಆಕೆಯ ಮೊಗದಲ್ಲಿ ನಗು ಮೂಡಿಸಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
ಆರತಿ ನಿರ್ಮಲ್ (Arti Nirmal) ಹೆಸರಿನ ಎಕ್ಸ್ ಖಾತೆಯಲ್ಲಿ ಅಕ್ಕ ತಮ್ಮ ಸುಮಧುರ ಬಾಂಧವ್ಯವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಅಕ್ಕನ ಹುಟ್ಟುಹಬ್ಬದ ದಿನ ಆಕೆಯ ಮನೆಗೆ ಸರ್ಪ್ರೈಸ್ ವಿಸಿಟ್ ನೀಡಿದ್ದಾನೆ. ವಯಸ್ಸಾದ ಮಹಿಳೆ ಬಾಗಿಲು ತೆರೆಯುತ್ತಿದ್ದಂತೆ ತಮ್ಮನ ಆಗಮನ ಕಂಡು ಮುಖವು ಅರಳಿದೆ. ಪರಸ್ಪರ ಇಬ್ಬರೂ ಪ್ರೀತಿಯಿಂದ ತಬ್ಬಿಕೊಂಡಿದ್ದು, ಸಹೋದರಿಯೂ ಭಾವುಕಳಾಗಿದ್ದಾಳೆ. ಆ ಬಳಿಕ ತಮ್ಮನು ತನ್ನ ಅಕ್ಕನಿಗೆ ಉಡುಗೊರೆ ನೀಡಿರುವುದನ್ನು ಕಾಣಬಹುದು.
ಇದನ್ನೂ ಓದಿ: ತಂದೆಯ 81 ನೇ ಹುಟ್ಟುಹಬ್ಬಕ್ಕೆ ವಿಮಾನದಲ್ಲಿ ವಿಶೇಷ ಅನೌನ್ಸ್ ಮೆಂಟ್ ಮಾಡಿದ ಪೈಲೆಟ್
ಈ ವಿಡಿಯೋ ಇದುವೆರೆಗೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸಹೋದರನ ಪ್ರೀತಿ ಸಹೋದರಿಗೆ ಯಾವತ್ತೂ ವಿಶೇಷ ಎಂದಿದ್ದಾರೆ. ಮತ್ತೊಬ್ಬರು, ಬ್ಯೂಟಿಫುಲ್ ಎಂದು ಹೇಳಿದರೆ, ಇನ್ನೊಬ್ಬರು, ಆ ನಗುವು ಎಲ್ಲವನ್ನೂ ಹೇಳುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ