Video: ತಂದೆಯ 81 ನೇ ಹುಟ್ಟುಹಬ್ಬಕ್ಕೆ ವಿಮಾನದಲ್ಲಿ ವಿಶೇಷ ಅನೌನ್ಸ್ ಮೆಂಟ್ ಮಾಡಿದ ಪೈಲೆಟ್
ಪ್ರತಿಯೊಬ್ಬ ಮಕ್ಕಳಿಗೂ ತಮ್ಮ ಹೆತ್ತವರನ್ನು ಖುಷಿಯಾಗಿ ಇರಿಸಬೇಕೆಂಬ ಆಸೆ ಇರುತ್ತದೆ. ಅಂತಹ ಕ್ಷಣಗಳು ಬಂದರೆ ಅದಕ್ಕಿಂತ ಖುಷಿ ಇನ್ನೇನಿದೆ. ಹೌದು, ಇಂಡಿಗೋ ವಿಮಾನದ ಪೈಲೆಟ್ ಒಬ್ಬರು ತಮ್ಮ ತಂದೆಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ್ದಾರೆ. ತಂದೆಯ 81ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಈ ಹೃದಯ ಸ್ಪರ್ಶಿ ಕ್ಷಣದ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ದೃಶ್ಯಗಳು ಹೃದಯಕ್ಕೆ ಹತ್ತಿರವಾಗುತ್ತವೆ. ಇದೀಗ ಇಂತಹದ್ದೇ ಕ್ಷಣ ವೈರಲ್ ಆಗಿದೆ. ಇಂಡಿಗೋ ವಿಮಾನದ ಪೈಲಟ್ ತಮ್ಮ ತಂದೆಯ 81ನೇ ಹುಟ್ಟುಹಬ್ಬವನ್ನು (Birthday) ವಿಭಿನ್ನವಾಗಿ ಆಚರಿಸಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ತಮ್ಮ ತಂದೆಯ ಬಗ್ಗೆ ವಿಶೇಷ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಹುಟ್ಟುಹಬ್ಬದ ಶುಭಾಶಯ ಕೋರಿರುವ ಹೃದಯ ಸ್ಪರ್ಶಿ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹುಟ್ಟುಹಬ್ಬಕ್ಕೆ ತಂದೆಗೆ ಮಗನ ವಿಶೇಷ ಗಿಫ್ಟ್
ಮಣಿಕ್ ಮೆಹ್ತಾ (Maniakmehta) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಪೈಲೆಟ್ ಒಬ್ಬರು ತಮ್ಮ ತಂದೆಯ ಹುಟ್ಟುಹಬ್ಬಕ್ಕೆ ವಿಮಾನದಲ್ಲಿ ವಿಶೇಷ ಘೋಷಣೆ ಮಾಡುತ್ತಿರುವುದನ್ನು ಕಾಣಬಹುದು. ವಿಮಾನದಲ್ಲಿ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ, ಇದೇ ವೇಳೆ, ನನ್ನ ತಂದೆ-ತಾಯಿ ಮೂರನೇ ಸಾಲಿನ ಬಿ ಮತ್ತು ಸಿ ಸೀಟ್‌ಗಳಲ್ಲಿ ಕುಳಿತಿದ್ದಾರೆ. ಇಂದು ಅವರ 81ನೇ ಹುಟ್ಟುಹಬ್ಬ. ಹುಟ್ಟುಹಬ್ಬದ ಶುಭಾಶಯ ಎಂದು ತಂದೆಗೆ ವಿಶ್ ಮಾಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಪ್ರಯಾಣಿಕ ಮುಂದೆ ತಂದೆಯ ಬಗ್ಗೆ ಮಗನ ವಿಶೇಷ ಘೋಷಣೆ
ನನ್ನ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧರಾಗಿ ಕಾರ್ಯನಿರ್ವಹಿಸಿದ್ದರು. ಅವರು ನನ್ನ ಜೀವನದ ಸೂಪರ್ ಹೀರೋ ಮಾದರಿ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ತಮ್ಮ ಪೋಷಕರನ್ನು ಆಗ್ರಾದಿಂದ ಬೆಂಗಳೂರಿಗೆ ಕರೆದೊಯ್ದಿದ್ದೆ. ಆಗ್ರಾಕ್ಕೆ ಹಿಂದಿರುಗುವ ಪ್ರಯಾಣದಲ್ಲಿ ನಮ್ಮ ಜತೆಯಾಗಿದ್ದಾರೆ. ತಮ್ಮ ತಂದೆ ತಾಯಿಯನ್ನು ಈ ಪ್ರಯಾಣಕ್ಕೆ ನೀವು ಸಿದ್ಧರಿದ್ದೀರಾ ಎಂದು ಕೇಳಿದ್ದಾರೆ. ಈ ಪೈಲೆಟ್ ಹೆತ್ತವರು ಬಹಳ ಉತ್ಸಾಹದಿಂದ ಪ್ರತಿಕ್ರಿಯೆ ನೀಡಿರುವುದನ್ನು ಕಾಣಬಹುದು.
ಇದನ್ನೂ ಓದಿ: ಸಹೋದರಿಯ ಹುಟ್ಟುಹಬ್ಬಕ್ಕೆ ವಿದೇಶದಿಂದ ಬಂದು ಸರ್ಪ್ರೈಸ್ ನೀಡಿದ ಯುವತಿ
ಈ ಹೃದಯ ಸ್ಪರ್ಶಿ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಹೆತ್ತವರಿಗೆ ನೀವು ಕೊಡುವ ಬಹುದೊಡ್ಡ ಉಡುಗೊರೆ ಇದು ಎಂದು ಹೇಳಿದ್ದಾರೆ. ಮತ್ತೊಬ್ಬರು, ಅದ್ಭುತ, ಹ್ಯಾಪಿ ಬರ್ತ್ಡೇ ಸರ್ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, ಎಷ್ಟು ಅದ್ಭುತ ಸರ್ಪ್ರೈಸ್ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




