ಬಂತೋ ಬಂತೂ ನಾಯಿಗಳ ಬಸ್ಸು​; ಮಿಲಿಯನ್​ ಜನರಿಗೆ ಈ ವಿಡಿಯೋ ಇಷ್ಟವಾಗಿದೆ

| Updated By: ಶ್ರೀದೇವಿ ಕಳಸದ

Updated on: Jan 03, 2023 | 1:27 PM

Pack Walk for Dogs : ಅಮೆರಿಕದ ಅಲಾಸ್ಕ್​ನಲ್ಲಿ ನಾಯಿಗಳಿಗಾಗಿ ಎಂದೇ ಪ್ಯಾಕ್​ ವಾಕ್ ನಡೆಸಿಕೊಂಡು ಬರುತ್ತಿದ್ದಾರೆ ಮೋ ಥಾಂಪ್ಸನ್ ಮತ್ತು ಆಕೆಯ ಗಂಡ ಲೀ ಥಾಂಪ್ಸನ್​. ಪ್ರತೀ ದಿನ ಇವರು ಐದು ಟ್ರಿಪ್​ ನಿಭಾಯಿಸುತ್ತಾರೆ. ನೋಡಿ ವಿಡಿಯೋ.

ಬಂತೋ ಬಂತೂ ನಾಯಿಗಳ ಬಸ್ಸು​; ಮಿಲಿಯನ್​ ಜನರಿಗೆ ಈ ವಿಡಿಯೋ ಇಷ್ಟವಾಗಿದೆ
ನಮಗೊಂದು ಬಸ್​
Follow us on

Viral Video : ಸಾಕುಪ್ರಾಣಿಗಳನ್ನು ಸ್ಕೂಟರ್​ ಮೇಲೆ, ಕಾರಿನೊಳಗೆ ಕರೆದುಕೊಂಡು ಹೋಗುವುದನ್ನು ಈಗಲೂ ನೋಡುತ್ತ ನಿಲ್ಲುತ್ತೇವೆ ತಾನೆ? ಮುಗ್ಧತೆ ಸೂಸುವ ಅವುಗಳ ಕಣ್ಣುಗಳು, ಸ್ಪಂದಿಸುವ ರೀತಿ ನಮ್ಮನ್ನು ಹಾಗೆ ಆಕರ್ಷಿಸುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಹಿಮಪ್ರದೇಶದಲ್ಲಿ ಬಸ್ಸೊಂದು ಚಲಿಸುತ್ತಿದೆ. ಬಸ್ಸಿಗಾಗಿಯೇ ಕಾಯುತ್ತಿರುವ ಪ್ರಯಾಣಿಕರಂತೆ ಈ ನಾಯಿಗಳು ಬಸ್ಸನ್ನು ಏರುತ್ತವೆ. ಸೀಟಿನ ಮೇಲೆ ಕುಳಿತುಕೊಳ್ಳುತ್ತವೆ. ಮುಂದೆ ಪಿಕ್ನಿಕ್​ಗೆ ಹೋಗುತ್ತವೆ!

ಟ್ವೀಟರ್​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದ ಶೀರ್ಷಿಕೆ ದಿ ಡಾಗಿ ಬಸ್​. ಅಲಾಸ್ಕಾದ ಸ್ಕಾಗ್ವೇನಗರದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಹೀಗೆ ಪ್ಯಾಕ್​ವಾಕ್​ಗೆ ಹೊರಟ ಈ ನಾಯಿಗಳ ವಿಡಿಯೋ ಅನ್ನು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ. ಬಸ್ಸು ಹತ್ತುತ್ತಿದ್ದಂತೆ ಇವುಗಳ ಬೆಲ್ಟ್​​ಗಳನ್ನು ಸರಿ ಮಾಡಿ ಸೀಟಿನ ಮೇಲೆ ಕುಳಿತುಕೊಳ್ಳಲು ಅನುವು ಮಾಡಿಕೊಡುತ್ತಾರೆ ಒಬ್ಬ ಮಹಿಳೆ. ನಂತರ ಬಸ್ ಚಲಿಸುತ್ತದೆ. ಈ ವಿಡಿಯೋ ಅನ್ನು ಈತನಕ 1.2 ಮಿಲಿಯನ್ ಜನರು ನೋಡಿದ್ದಾರೆ.

ಇದನ್ನೂ ಓದಿ : ತೋಳದಂತೆ ಕಾಣಲು ಜಪಾನಿನ ವ್ಯಕ್ತಿ ರೂ 18 ಲಕ್ಷ ಖರ್ಚು ಮಾಡಿದ ಕಥೆ ಇದು

ಡೈಲಿಮೋಷನ್​ ವರದಿಯಂತೆ, ಅಮೇರಿಕದ ಅಲಾಸ್ಕ್​ನಲ್ಲಿ ನಾಯಿಗಳಿಗಾಗಿ ಪ್ಯಾಕ್​ ವಾಕ್ ನಡೆಸಿಕೊಂಡು ಬರುತ್ತಿದ್ದಾರೆ ಮೋ ಥಾಂಪ್ಸನ್ ಮತ್ತು ಆಕೆಯ ಗಂಡ ಲೀ ಥಾಂಪ್ಸನ್​. ಪ್ರತೀ ದಿನ ಇವರು ಐದು ಟ್ರಿಪ್​ ನಿಭಾಯಿಸುತ್ತಾರೆ. ಲೀ ಬಸ್​ ಡ್ರೈವರ್ ಆದರೆ ಮೋ ನಾಯಿಗಳನ್ನು ನೋಡಿಕೊಳ್ಳುತ್ತಾಳೆ. ನಮ್ಮಂತೆ ಅವುಗಳಿಗೂ ಬದಲಾವಣೆ ಬೇಕು. ಅದಕ್ಕಾಗಿ ಅವುಗಳೂ ಪ್ರಯಾಣಿಸಬೇಕು, ಅವುಗಳಿಗೂ ಸಾಮಾಜಿಕ ಜೀವನ ಎನ್ನುವುದು ಇದೆ ಎನ್ನುತ್ತಾರೆ ಈ ದಂಪತಿ.

ಇದನ್ನೂ ಓದಿ : ‘ನಾಯಿಯಂತೆ ಕಾಣಲು ನಾನು ರೂ. 12 ಲಕ್ಷ ಖರ್ಚು ಮಾಡಿದ್ದೆ’ ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ವ್ಯಕ್ತಿ

‘ನಾವು ಈ ಕೆಲಸವನ್ನು ಬಹಳ ಆನಂದಿಸುತ್ತೇವೆ. ಇದು ಅತ್ಯಂತ ಒಳ್ಳೆಯ ಕೆಲಸವೆಂದು ಭಾವಿಸುತ್ತೇವೆ. ಹಲವಾರು ಜನರಿಗೆ ಕುತೂಹಲವಿದೆ. ಈ ನಾಯಿಗಳಿಗೆ ಹೇಗೆ ತರಬೇತಿ ಕೊಡುತ್ತೀರಿ, ಅಕಸ್ಮಾತ್​ ಏನಾದರೂ ಹೆಚ್ಚೂ ಕಡಿಮೆಯಾದರೆ ಹೇಗೆ ನಿಭಾಯಿಸುತ್ತೀರಿ ಅಂತೆಲ್ಲ. ಈತನಕ ಇಷ್ಟೆಲ್ಲ ನಾಯಿಗಳು ನಮ್ಮೊಂದಿವೆ ನಿಯಮಿತವಾಗಿ ಪ್ಯಾಕ್​ವಾಕ್​ಗೆ ಬರುತ್ತಲೇ ಇವೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಬೇಕು. ಅವುಗಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ನಾವು ಬಹಳ ಗಮನ ಕೊಡುತ್ತೇವೆ’ ಎನ್ನುತ್ತಾರೆ ಈ ದಂಪತಿ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 1:23 pm, Tue, 3 January 23