‘ನನ್ನೊಂದಿಗೆ ವಾಕಿಂಗ್ ಬರುತ್ತೀಯಾ ಮಗಳೇ?’ ಇಲ್ಲವೆಂದು ಹೇಳಿ ನಂತರ ಅಚ್ಚರಿ ಮೂಡಿಸಿದ್ದು ಇಲ್ಲಿದೆ

Father and Daughter : ‘ನಿಮ್ಮ ಪ್ರೀತಿಪಾತ್ರರ ಮಾತನ್ನು ಎಂದಿಗೂ ಕಡೆಗಣಿಸಬೇಡಿ. ಅವರು ನಿಮ್ಮೊಂದಿಗೆ ಸಮಯ ಕಳೆಯಲು ಇಷ್ಟಪಟ್ಟರೆ ತಕ್ಷಣವೇ ಸ್ಪಂದಿಸಿ. ಈ ವಿಷಯವಾಗಿ ನಾಳೆ ಎನ್ನುವುದು ಇರುವುದಿಲ್ಲ’ ಎಂದಿದ್ದಾರೆ ನೆಟ್ಟಿಗರೊಬ್ಬರು.

‘ನನ್ನೊಂದಿಗೆ ವಾಕಿಂಗ್ ಬರುತ್ತೀಯಾ ಮಗಳೇ?’ ಇಲ್ಲವೆಂದು ಹೇಳಿ ನಂತರ ಅಚ್ಚರಿ ಮೂಡಿಸಿದ್ದು ಇಲ್ಲಿದೆ
Daughter regrets refusing dads request to go for a walk joins him later
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 07, 2022 | 3:57 PM

Viral Video : ಹಾಯ್ ಬೆಕ್ಕಾ, ನೀನು ನನ್ನೊಂದಿಗೆ ಮತ್ತು ನಾಯಿಗಳೊಂದಿಗೆ ವಾಕಿಂಗ್​ ಬರುತ್ತೀಯಾ? ಲವ್​ ಯೂ… ಹೀಗೆಂದು ಅಪ್ಪ ಮೆಸೇಜ್ ಮಾಡುತ್ತಾನೆ. ಅದಕ್ಕೆ ಪ್ರತಿಯಾಗಿ ಮಗಳು, ಬರಬೇಕೆಂದುಕೊಂಡೆ ಅಪ್ಪಾ, ಆದರೆ ಈ ಬೆಳಗು ನಾನು ಸ್ವಲ್ಪ ಬಿಝಿ ಇದ್ದೇನೆ. ಮುಂದಿನ ಸಲ ಗ್ಯಾರಂಟಿ ಬರುತ್ತೇನೆ. ಹೀಗೆಂದು ಮೆಸೇಜ್ ಹಾಕುತ್ತಾಳೆ. ಆ ನಂತರ ಆಕೆ ಏನು ಮಾಡುತ್ತಾಳೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ತಂದೆಯೊಂದಿಗೆ ಹೆಣ್ಣುಮಕ್ಕಳ ಬಂಧ ಯಾವತ್ತೂ ವಿಶೇಷ ಮತ್ತು ಅನನ್ಯ. ಅದನ್ನು ಪದಗಳಲ್ಲಿ ಬಿಡಿಸಿಡಲಾಗದು. ಮೊದಲು ವಾಕಿಂಗ್​ ಹೋಗಲು ನಿರಾಕರಿಸಿದ ಮಗಳು ತಂದೆಗೆ ಸರ್​ಪ್ರೈಝ್ ನೀಡುತ್ತಾಳೆ. ಆ ನಾಯಿಗಳು ಓಡಿಬರುವ ದೃಶ್ಯ ಅಪ್ಪನ ಮುಖದಲ್ಲಿ ಮೂಡುವ ಅಚ್ಚರಿ, ಆ ಸುಂದರವಾದ ಬೆಳಗು, ರಸ್ತೆಗಳು ಎಂಥ ಸುಂದರ ಅಲ್ಲವಾ? ನಮ್ಮ ಪ್ರೀತಿಪಾತ್ರರಿಗೆ ಸಮಯ ಕೊಡುವುದು ಮತ್ತು ಅವರ ನಿರೀಕ್ಷೆಗಳನ್ನು ತಣಿಸುವುದು ಈ ಪ್ರಕ್ರಿಯೆಯಲ್ಲಿಯೇ ಬದುಕಿನ ದೊಡ್ಡ ಖುಷಿ ಅಡಗಿರುವುದು.

ಈಗಾಗಲೇ ಈ ವಿಡಿಯೋ ಅನ್ನು 1.5 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. 12,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಈ ವಿಡಿಯೋ ನನ್ನ ತಂದೆಯನ್ನು ಇನ್ನಷ್ಟು ಮಿಸ್​ ಮಾಡಿಕೊಳ್ಳುವಂತೆ ಮಾಡುತ್ತಿದೆ. ನಿಮ್ಮ ಪ್ರೀತಿಪಾತ್ರರ ಮಾತನ್ನು ಎಂದಿಗೂ ಕಡೆಗಣಿಸಬೇಡಿ. ಅವರು ನಿಮ್ಮೊಂದಿಗೆ ಸಮಯ ಕಳೆಯಲು ಇಷ್ಟಪಟ್ಟರೆ ತಕ್ಷಣವೇ ಸ್ಪಂದಿಸಿ. ಈ ವಿಷಯವಾಗಿ ನಾಳೆ ಎನ್ನುವುದು ಇರುವುದಿಲ್ಲ’ ಎಂದಿದ್ದಾರೆ ಒಬ್ಬರು. ‘ನಾನು ನಾಲ್ಕು ವರ್ಷಗಳಾದವು ನನ್ನ ತಂದೆತಾಯಿಯನ್ನು ಭೇಟಿ ಮಾಡಿ. ಖಂಡಿತ ಈ ಕ್ರಿಸ್​ಮಸ್​ಗೆ ಹೋಗುತ್ತೇನೆ’ ಎಂದಿದ್ದಾರೆ ಮತ್ತೊಬ್ಬರು. ‘ನಾನು ಯಾವಾಗಲೂ ನನ್ನ ತಂದೆತಾಯಿಯನ್ನು ಮಿಸ್​ ಮಾಡಿಕೊಳ್ಳುತ್ತೇನೆ. ಈ ವಿಡಿಯೋ ನೋಡಿ ಅದು ಮತ್ತಷ್ಟು ಹೆಚ್ಚುತ್ತಿದೆ’ ಎಂದಿದ್ದಾರೆ ಮಗದೊಬ್ಬರು.

ನಿಮಗೇನು ಅನ್ನಿಸುತ್ತಿದೆ ಇದನ್ನು ನೋಡುತ್ತಿದ್ದಂತೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:56 pm, Mon, 7 November 22