Viral: ಬಾಸ್‌ನಿಂದ ಕಾಲ್ ಬಂದದ್ದೇ ತಡ ಮೆಟ್ರೋದೊಳಗೆ ಲ್ಯಾಪ್ ಟಾಪ್ ತೆರೆದು ಕೆಲಸ ಮಾಡಲು ಕುಳಿತ ಯುವಕ

ಕೆಲಸ ಮಾಡೋದು ಅನಿವಾರ್ಯ. ಆದರೆ ಕೆಲವರು ಈ ವರ್ಕ್ ಲೈಫ್ ಹಾಗೂ ಪರ್ಸನಲ್ ಲೈಫ್ ಬ್ಯಾಲೆನ್ಸ್ ಮಾಡಲು ಒದ್ದಾಡುವುದನ್ನು ನೋಡಿ ಈ ಯುವಕನನ್ನು ನೋಡಿದ್ರೆ ನಿಮಗೂ ಅಯ್ಯೋ ಅನಿಸಬಹುದು. ಹೌದು ಬಾಸ್ ಕಾಲ್ ಮಾಡಿದ ತಕ್ಷಣವೇ ದೆಹಲಿ ಮೆಟ್ರೋ ಪ್ರಯಾಣಿಕನೊಬ್ಬ ಕಿಕ್ಕಿರಿದ ಕೋಚ್‌ನೊಳಗೆ ಕೆಲಸ ಮಾಡಲು ಕುಳಿತ ಪೋಸ್ಟ್ ವೈರಲ್ ಆಗಿದೆ. ಇದು ಭಾರತದಲ್ಲಿನ ಕೆಲಸದ ಸಂಸ್ಕೃತಿಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಬಾಸ್‌ನಿಂದ ಕಾಲ್ ಬಂದದ್ದೇ ತಡ ಮೆಟ್ರೋದೊಳಗೆ ಲ್ಯಾಪ್ ಟಾಪ್ ತೆರೆದು ಕೆಲಸ ಮಾಡಲು ಕುಳಿತ ಯುವಕ
ವೈರಲ್‌ ಪೋಸ್ಟ್‌
Image Credit source: Twitter

Updated on: Mar 16, 2026 | 1:40 PM

ದೆಹಲಿ, ಮಾರ್ಚ್ 16: ಕೆಲಸದ ಸ್ಥಳಗಳಲ್ಲಿ ಕೆಲ ಉದ್ಯೋಗಿಗಳು (employees) ಅನುಭವಿಸುವ ಒತ್ತಡ ಹೇಳಲಾಗದು. ಕೆಲಸ ಮಾಡದೇ ಇದ್ದರೆ ವಿಧಿಯಿಲ್ಲ ಎನ್ನುವ ಕಾರಣಕ್ಕೆ ಎಷ್ಟೇ ಕಷ್ಟವಾದ್ರೂ ಉದ್ಯೋಗ ಬಿಡಲ್ಲ. ಇದಕ್ಕೆ ಉದಾಹರಣೆಯಂತಿದ್ದಾನೆ ಈ ಯುವಕ. ಜನದಟ್ಟಣೆಯಿಂದ ತುಂಬಿದ ದೆಹಲಿ (Delhi) ಮೆಟ್ರೋದ ಬೋಗಿಯೊಳಗೆ ಯುವಕನೊಬ್ಬ ಲ್ಯಾಪ್ ಟಾಪ್ ತೆರೆದು ನೆಲದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದಾನೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ.

@kuxh101 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ದೆಹಲಿ ಮೆಟ್ರೋದ ಬೋಗಿಯೊಳಗೆ ಕಿಕ್ಕಿರಿದ ಕಂಪಾರ್ಟ್‌ಮೆಂಟ್‌ನ್ನು ಕಾಣಬಹುದು. ಆಫೀಸ್ ಕಾಲ್ ಸ್ವೀಕರಿಸಿದ ಬಳಿಕ ಯುವಕ ಕೆಲಸದಲ್ಲಿ ತೊಡಗಿಕೊಂಡಿರುವುದು ಕಂಡುಬಂದಿದೆ. ಯುವಕನೊಬ್ಬ ಲ್ಯಾಪ್‌ಟಾಪ್‌ನ್ನು ತೊಡೆಯ ಮೇಲೆ ಇರಿಸಿಕೊಂಡು ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದು. ಇನ್ನೊಂದು ಕೈಯಲ್ಲಿ ಫೋನ್ ಹಿಡಿದುಕೊಂಡಿದ್ದಾನೆ.

ವೈರಲ್ ಪೋಸ್ಟ್ ಇಲ್ಲಿದೆ

ಈ ಪೋಸ್ಟ್ ಹಂಚಿಕೊಂಡ ಬಳಕೆದಾರ, ಈ ವ್ಯಕ್ತಿಯನ್ನು ಮೆಟ್ರೋದಲ್ಲಿ ನೋಡಿದೆ. ಮ್ಯಾನೇಜರ್‌ನಿಂದ ಕರೆ ಬಂತು, ತಕ್ಷಣವೇ ತನ್ನ ಲ್ಯಾಪ್‌ಟಾಪ್ ತೆರೆದು, ನೆಲದ ಮೇಲೆ ಕುಳಿತು ತನ್ನ ಕೆಲಸವನ್ನು ಮುಗಿಸಲು ಪ್ರಾರಂಭಿಸಿದನು ಎಂದು ಶಿರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ತಿಂಗಳಿಗೆ 1.5 ಲಕ್ಷ ರೂ. ಸಂಬಳ, ಉಳಿಯೋದು 20 ಸಾವಿರ ಮಾತ್ರ! ಟೆಕ್ಕಿ ಸಂಬಂಧಿಯ ಪೋಸ್ಟ್ ವೈರಲ್

ಈ ಪೋಸ್ಟ್ 2 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮೆಟ್ರೋವನ್ನು ಕೆಲಸದ ಸ್ಥಳವಾಗಿ ಮಾಡಿಕೊಂಡರು ಎಂದರೆ, ಮತ್ತೊಬ್ಬರು, ಇದೇ ಕಾರಣಕ್ಕೆ ನಾನು ಓದುವುದನ್ನೇ ಬಿಟ್ಟೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಭಾನುವಾರ ಕೂಡ ಕೆಲಸನಾ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us