Viral: ಗೂಗಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಭಾವನಾತ್ಮಕ ಜರ್ನಿ ಹಂಚಿಕೊಂಡ ಯುವತಿ

ಕೆಲಸ ಗಿಟ್ಟಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಹೀಗಿರುವಾಗ ಪ್ರಸಿದ್ಧ ಟೆಕ್ ದೈತ್ಯ ಗೂಗಲ್ ಸಂಸ್ಥೆಯಲ್ಲಿ ದೆಹಲಿ ಮೂಲದ ಯುವತಿಯೊಬ್ಬಳು ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಈ ಯುವತಿ ತನ್ನ ವೃತ್ತಿಜೀವನ ಭಾವನಾತ್ಮಕ ಪ್ರಯಾಣದ ಬಗ್ಗೆ ಹೇಳಿಕೊಂಡಿದ್ದಾಳೆ. ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Viral: ಗೂಗಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಭಾವನಾತ್ಮಕ ಜರ್ನಿ ಹಂಚಿಕೊಂಡ ಯುವತಿ
ವೈರಲ್‌ ಪೋಸ್ಟ್‌
Image Credit source: Twitter

Updated on: Jun 25, 2026 | 11:19 AM

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಲಸ ಸಿಗೋದು ಕಷ್ಟ. ಹೀಗಿರುವಾಗ ಓದು ಮುಗಿಯುತ್ತಿದ್ದಂತೆ ಯುವಕ ಯುವತಿಯರು ಬೆಂಗಳೂರು, ಮುಂಬೈನಂತಹ ದೊಡ್ಡ ದೊಡ್ಡ ನಗರಕ್ಕೆ ತೆರಳುತ್ತಾರೆ. ಆದರೆ ಈ ದೆಹಲಿ (Delhi )ಮೂಲದ ಯುವತಿಯ ಸ್ಫೂರ್ತಿದಾಯಕ ಕಥೆ ವೈರಲ್ ಆಗಿದೆ. ಹೌದು, ಯುವತಿ ಕಠಿಣ ಪರಿಶ್ರಮದಿಂದ ಗೂಗಲ್ (Google) ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ತನ್ನ ವೃತ್ತಿಜೀವನದ ಜರ್ನಿ ಬಗ್ಗೆ ಹಂಚಿಕೊಂಡಿದ್ದು, ಈ ಪೋಸ್ಟ್ ನೆಟ್ಟಿಗರಿಗೆ ಸ್ಫೂರ್ತಿದಾಯಕವಾಗಿದೆ.

ಶಾಲಿನಿ (Shalini) ಹೆಸರಿನ ಎಕ್ಸ್ ಖಾತೆಯಲ್ಲಿ ವೃತ್ತಿಜೀವನದ ಏಳು ಬೀಳಿನ ನಡುವೆ ಉದ್ಯೋಗ ಸಿಕ್ಕಿದ್ದನ್ನು ಬರೆದುಕೊಂಡಿದ್ದಾಳೆ. ಈ ಪೋಸ್ಟ್ ನಲ್ಲಿ ಬಹಳಷ್ಟು ಏರಿಳಿತಗಳ ಬಳಿಕ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಗೂಗಲ್ ಸೇರಿಕೊಂಡಿದ್ದೇನೆ. ಕಳೆದ ವರ್ಷ 2025ರಲ್ಲಿ ಗೂಗಲ್ ಕ್ಲೌಡ್ ವಿಭಾಗದಲ್ಲಿ ಇಂಟರ್ನ್‌ಶಿಪ್ ಆರಂಭಿಸಿದ್ದೆ. ಕೆಲವು ದಿನಗಳಂತೂ ಬೆಳಿಗ್ಗೆ 9:30ರಿಂದ ರಾತ್ರಿ 9:30ರವರೆಗೆ ಕೆಲಸ ಮಾಡುತ್ತಿದ್ದೆ. ಹೀಗಾಗಿ ರೆಸ್ಟ್‌ ಅನ್ನೋದೇ ಇಲ್ಲ ಆಗಿತ್ತು. ಇನ್ನು,  ವಾರಾಂತ್ಯದ ರಜೆಯಲ್ಲಿ ನಾನು ಕೆಲಸ ಮಾಡಿದ್ದೇನೆ ಎಂದು  ಹೇಳಿಕೊಂಡಿದ್ದಾಳೆ.

ವೈರಲ್ ಪೋಸ್ಟ್ ಇಲ್ಲಿದೆ

ಹೈದರಾಬಾದ್‌ನಲ್ಲಿದ್ದ ನನ್ನ ಸ್ನೇಹಿತರು ಕೆಫೆಗಳಿಗೆ ತೆರಳುತ್ತಾ, ಊರು ಸುತ್ತುತ್ತಾ ಮೋಜು ಮಾಡುತ್ತಿದ್ದರೆ, ನಾನು ಮಾತ್ರ ಆಫೀಸ್ ಕೆಲಸ ಎಂದು ಬ್ಯುಸಿಯಾಗಿದ್ದೆ. ಪೂರ್ಣಾವಧಿ ಉದ್ಯೋಗ ನೇಮಕಾತಿಯ ಬಗ್ಗೆ ಯಾವುದೇ ಖಚಿತ ಮಾಹಿತಿ ಇರಲಿಲ್ಲ. ಹೀಗಾಗಿ ಪರ್ಯಾಯ ಉದ್ಯೋಗಗಳನ್ನು ಹುಡುಕುವಂತೆ ಇಂಟರ್ನ್‌ಗಳಿಗೆ ಕಂಪನಿ ಸೂಚನೆ ನೀಡಿತ್ತು. ಈ ವೇಳೆ ನಾನು ಶೇಕಡಾ ನೂರರಷ್ಟು ಶ್ರಮವನ್ನು ಹಾಕಿದೆ ಎಂದು ಬರೆದುಕೊಂಡಿದ್ದಾಳೆ.

ಆ ಸಮಯದಲ್ಲಿ ರಾತ್ರಿಗಳು ಬಹಳ ಕಷ್ಟಕರವಾಗಿದ್ದವು. ನಾನು ಯಾವಾಗಲೂ ಆತಂಕದಲ್ಲಿರುತ್ತಿದ್ದೆ. ಕೆಲಸ ಸಿಗುತ್ತದೆ ಎಂಬ ನೀರಿಕ್ಷೆ ಜತೆಗೆ ಕಾಯುವಿಕೆಯ ಅವಧಿಯಲ್ಲಿ ನನಗೆ ಡಾಯ್ಚ ಬ್ಯಾಂಕ್‌ನಿಂದ ಉದ್ಯೋಗದ ಆಫರ್ ಬಂದಿತ್ತು. ಸ್ಟಾರ್ಟ್‌ಅಪ್ ನಲ್ಲಿ ವಿಂಟರ್ ಇಂಟರ್ನ್‌ಶಿಪ್ ಅವಕಾಶವೂ ಸಿಕ್ಕಿತ್ತು. ಆದರೆ ಗೂಗಲ್ ಉದ್ಯೋಗ ಸಿಗಬಹುದೆಂಬ ಸಣ್ಣ ಭರವಸೆ ನನ್ನಲ್ಲಿ ತುಂಬಾನೇ ಇತ್ತು.  ಬಹಳ  ಚಿಂತೆ, ಆತಂಕದಲ್ಲಿದ್ದಾಗ ಮೊಬೈಲ್‌ನಿಂದ ದೂರ ಉಳಿಯುತ್ತಿದ್ದೆ. ಅಷ್ಟೇ ಅಲ್ಲದೇ, ತನ್ನ ಹೆಚ್ಚಿನ ಸಮಯವನ್ನು ಹೊರಗಡೆ ಕಳೆಯುತ್ತಿದ್ದೆ ಎಂದು ಬರೆದಿರುವುದನ್ನು ನೋಡಬಹುದು.

ಹೀಗಿರುವಾಗ ಸರೋಜಿನ್ ನಗರದಲ್ಲಿ ಶಾಪಿಂಗ್ ಮಾಡುತ್ತಿದ್ದ ವೇಳೆ ಫೋನ್‌ಪೇ ಮೂಲಕ ಹಣ ಪಾವತಿಸಲು ಫೋನ್ ತೆಗೆದೆ. ಆದಾಗಲೇ ಗೂಗಲ್ ನಿಂದ ಆಫರ್ ಲೆಟರ್ ಬಂದಿತ್ತು. ಸರಿಯಾಗಿ ಪರಿಶೀಲಿಸಿ ನೋಡಿದಾಗ @google.com ನಿಂದಲೇ ಬಂದಿದ್ದು ಖಾತರಿಯಾಯಿತು. ಈಗ ನನ್ನ ವೃತ್ತಿಜೀವನವನ್ನು ಹಿಂತಿರುಗಿ ನೋಡಿದಾಗ ನಿದ್ದೆ ಇಲ್ಲದೆ, ಕೆಲಸ ಮಾಡಿದ ರಾತ್ರಿಗಳು ಎಲ್ಲವು ಸಾರ್ಥಕವಾಯಿತು. ದೇವರಿಗೆ ಧನ್ಯವಾದ ಹೇಳುತ್ತೇನೆ ಎಂದು ಬರೆದುಕೊಂಡಿದ್ದಾಳೆ.

ಇದನ್ನೂ ಓದಿ: ಕೆಲಸದಲ್ಲಿನ ಪರಿಪೂರ್ಣತೆ ಬದಿಗಿರಿಸಿ ಮಾನಸಿಕ ಶಾಂತಿ ಕಂಡುಕೊಂಡ ಅಮೆಜಾನ್ ಉದ್ಯೋಗಿ

ಈ ಪೋಸ್ಟ್ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕಂಗ್ರಾಜುಲೇಷನ್ ಲೇಡಿ, ಹೀಗೆ ಸದಾ ಬೆಳೆಯುತ್ತ ಇರಿ ಎಂದಿದ್ದಾರೆ. ಮತ್ತೊಬ್ಬರು, ದೇವರ ಸರಿಯಾದ ಸಮಯದಲ್ಲಿ ಎಲ್ಲವನ್ನು ನೀಡುತ್ತಾನೆ. ನೀವು ಶ್ರಮ ವಹಿಸಿ ಸಾಧಿಸಿದ್ದಕ್ಕಾಗಿ ಅಭಿನಂದನೆಗಳು. ನೀವು ನಿಮ್ಮ ಜೀವನದಲ್ಲಿ ಯಶಸ್ಸು ಮತ್ತು ಸಂತೋಷವನ್ನು ಪಡೆಯಲಿ ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ಹಗಲು ರಾತ್ರಿ ಎನ್ನದೇ ತುಂಬಾ ಕೆಲಸ ಮಾಡಿದ್ದೀರಿ, ನಿಮಗೆ ಶುಭಾಶಯಗಳು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us