Viral Photo: 200 ಕಿ.ಮೀ ಕ್ರಮಿಸಿ ಮಾಲೀಕನ ಮನೆ ಸೇರಿಸಿದ ಕಾಣೆಯಾಗಿದ್ದ ಶ್ವಾನ

ಮಹಾರಾಷ್ಟ್ರದ ಪಂಢರಪುರದಲ್ಲಿ ಮಾಲೀಕರಿಂದ ಮಿಸ್​​ ಆಗಿದ್ದ ಶ್ವಾನ 4 ದಿನಗಳ ಬಳಿಕ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರ್ಣಿಯ ತನ್ನ ಮನೆಗೆ ಬಂದು ತಲುಪಿದೆ. ಆಲ್ ಅಬೌಟ್ ಬೆಳಗಾವಿ ಎಂಬ ಹೆಸರಿನ ಫೇಸ್​​ಬುಕ್​​ ಖಾತೆಯಲ್ಲಿ ಈ ಕುರಿತು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗಿದೆ.

Viral Photo: 200 ಕಿ.ಮೀ ಕ್ರಮಿಸಿ ಮಾಲೀಕನ ಮನೆ ಸೇರಿಸಿದ ಕಾಣೆಯಾಗಿದ್ದ ಶ್ವಾನ
Follow us
ಅಕ್ಷತಾ ವರ್ಕಾಡಿ
|

Updated on: Jul 31, 2024 | 6:07 PM

ನಾಯಿಯೊಂದು ಕಿಲೋಮೀಟರ್‌ಗಳಷ್ಟು ದೂರ ನಡೆದು ರಾಜ್ಯದ ಗಡಿಗಳನ್ನು ದಾಟಿ ತನ್ನ ಮಾಲೀಕರೊಂದಿಗೆ ಮತ್ತೆ ಸೇರಿದ ಹೃದಯಸ್ಪರ್ಶಿ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. 200 ಕಿಲೋ ಮೀಟರ್ ದೂರ ಅಂದರೆ ಮಹಾರಾಷ್ಟ್ರದಲ್ಲಿ ನಾಪತ್ತೆಯಾಗಿದ್ದ ಶ್ವಾನ ಮನೆಯ ಮುಂದೆ ಪ್ರತ್ಯಕ್ಷವಾಗಿದೆ ​​. ಮಹಾರಾಷ್ಟ್ರದ ಪಂಢರಪುರದಲ್ಲಿ ಮಾಲೀಕರಿಂದ ಮಿಸ್​​ ಆಗಿದ್ದ ಶ್ವಾನ 4 ದಿನಗಳ ಬಳಿಕ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರ್ಣಿಯ ತನ್ನ ಮನೆಗೆ ಬಂದು ತಲುಪಿದೆ.

ಬೆಳಗಾವಿ ಮೂಲದ ಫೇಸ್‌ಬುಕ್ ಪುಟವೊಂದು ಈ ಘಟನೆಯನ್ನು ಹೊರತಂದಿದ್ದು, ಆಷಾಢ ಏಕಾದಶಿಯಂದು ಸುಮಾರು 200 ಕಿಲೋ ಮೀಟರ್​​ ಪಂಢರಪುರಕ್ಕೆ ಕಾಲ್ನಡಿಗೆಯಲ್ಲಿ ತನ್ನ ಕುಟುಂಬದೊಂದಿಗೆ ಬಂದಿದ್ದ ನಾಯಿ ಜನಸಂದಣಿಯ ನಡುವೆ ಕಳೆದು ಹೋಗಿತ್ತು. ತಮ್ಮ ಮುದ್ದಿನ ಶ್ವಾನ ಎಷ್ಟೇ ಹುಡುಕಿದರೂ ಸಿಗದೇ ಇರುವುದರಿಂದ ಈ ಕುಟುಂಬ ಬೇಸರದಿಂದ ಮನೆಗೆ ಮರಳಿದ್ದಾರೆ. ಆದರೆ ಪವಾಡ ಎಂಬಂತೆ ಕಾಣಿಯಾಗಿದ್ದ ನಾಯಿ ಎರಡು ದಿನಗಳ ನಂತರ ಸುಮಾರು ಇನ್ನೂರು ಕಿಲೋಮೀಟರ್ ದೂರದಿಂದ ಮನೆಗೆ ಬಂದು ತಲುಪುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ, ಕಾರಿನೊಳಗೆ ಇಬ್ಬರು ಪುರುಷರೊಂದಿಗೆ ಮಹಿಳೆ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆ

ಆಲ್ ಅಬೌಟ್ ಬೆಳಗಾವಿ ಎಂಬ ಹೆಸರಿನ ಫೇಸ್​​ಬುಕ್​​ ಖಾತೆಯಲ್ಲಿ ಈ ಕುರಿತು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಸದ್ಯ ಫೋಸ್ಟ್​​ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ. ಇದಲ್ಲದೇ ಬೆಳಗಾವಿ ಜಿಲ್ಲೆಯ ಪ್ರಾಣಿ ಕಲ್ಯಾಣ ಸಂಘವು ಈ ಶ್ವಾನ ಚಿತ್ರವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ