Video: ಪ್ರೀತಿ ಅಂದ್ರೆ ಹೀಗಿರಬೇಕು; ಮಡದಿಗಾಗಿ ಬಳೆ ಖರೀದಿಸಿದ ವೃದ್ಧ

ಸಣ್ಣ ಪುಟ್ಟ ವಿಷ್ಯಕ್ಕೆ ದೂರಾಗುವ ದಂಪತಿಗಳ ನಡುವೆ ಈ ವೃದ್ಧ ಜೋಡಿ ಎಲ್ಲರಿಗೂ ಮಾದರಿ. ವಯಸ್ಸು ಏರಿದಾಗಲು ಎಳ್ಳಷ್ಟೂ ಪ್ರೀತಿ ಕಡಿಮೆಯಾಗಿಲ್ಲ. ವೃದ್ಧ ವ್ಯಕ್ತಿ ತನ್ನ ಮುದ್ದಿನ ಮಡದಿಗೆ ಬಳೆ ಖರೀದಿಸುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಹೃದಯ ಸ್ಪರ್ಶಿ ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಪ್ರೀತಿ ಅಂದ್ರೆ ಹೀಗಿರಬೇಕು; ಮಡದಿಗಾಗಿ ಬಳೆ ಖರೀದಿಸಿದ ವೃದ್ಧ
ವೈರಲ್‌ ವಿಡಿಯೋ
Image Credit source: Instagram

Updated on: Nov 01, 2026 | 3:01 PM

ದಾಂಪತ್ಯ ಜೀವನ (marriage life) ನಿಂತಿರುವುದು ಪ್ರೀತಿ, ನಂಬಿಕೆಯ ಮೇಲೆ. ಪ್ರೀತಿ ವ್ಯಕ್ತಪಡಿಸಲು ದುಬಾರಿ ಉಡುಗೊರೆ ಬೇಕಿಲ್ಲ. ಪ್ರೀತಿ ತುಂಬಿದ ನಡವಳಿಕೆಗಳು ದಾಂಪತ್ಯವನ್ನು ಗಟ್ಟಿಯಾಗಿಸುತ್ತದೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಅಂಗಡಿಯಲ್ಲಿ ವೃದ್ಧ ವ್ಯಕ್ತಿ ತನ್ನ ಪತ್ನಿಗಾಗಿ ಬಳೆಗಳನ್ನು ಖರೀದಿಸುತ್ತಿದ್ದಾರೆ. ತನ್ನ ಜೀವನ ಸಂಗಾತಿಗಾಗಿ ಬಳೆ ಆಯ್ಕೆ ಮಾಡುವ ವೃದ್ಧ ವ್ಯಕ್ತಿಯ ಶುದ್ಧ ಪ್ರೀತಿ ನೆಟ್ಟಿಗರ ಹೃದಯ ಮುಟ್ಟಿದೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 ಮುದ್ದಿನ ಮಡದಿಗಾಗಿ ಬಳೆ ಖರೀದಿಸಿದ ವೃದ್ಧ ವ್ಯಕ್ತಿ

ಸುನೀಲ್‌ ಕುಮಾರ್‌ (sunilkumar) ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವೃದ್ಧ ದಂಪತಿಯ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವಯಸ್ಸಾದ ದಂಪತಿ ಅಂಗಡಿಯಲ್ಲಿರುವುದನ್ನು ಕಾಣಬಹುದು. ಇಲ್ಲಿ ಈ ವೃದ್ಧ ವ್ಯಕ್ತಿ ತನ್ನ ಮಡದಿಗಾಗಿ ಬಳೆ ಖರೀದಿಸುತ್ತಿದ್ದಾರೆ. ಕೈಯಲ್ಲಿ ಕೆಂಪು ಬಣ್ಣದ ಬಳೆಗಳನ್ನು ಹಿಡಿದು ನಿಂತಿದ್ದಾರೆ. ಇಬ್ಬರ ನಡುವಿನ ಅನ್ಯೋನ್ಯತೆ ಈ ವಿಡಿಯೋದಲ್ಲಿ ಎದ್ದು ಕಾಣುತ್ತಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಹೆಣ್ಣಿನ ಕಡೆಯವರೇ ಮದುವೆ ವೆಚ್ಚ ಭರಿಸುವುದು ಸರಿಯೇ; ನೆಟ್ಟಿಗರಲ್ಲಿ ಸಲಹೆ ಕೇಳಿದ ಯುವತಿ

ಈ ವಿಡಿಯೋ ಇದುವರೆಗೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮುದ್ದಾದ ಜೋಡಿ ಎಂದರೆ, ಮತ್ತೊಬ್ಬರು, ಹೀಗೆ ಸದಾ ಜತೆಯಾಗಿ ಇರಿ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಇಂತಹ ದಂಪತಿಗಳನ್ನು ನೋಡುವುದೇ ಖುಷಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us