Video: ಗಜರಾಜ ಕೆನ್ನೆಗೆ ಮುತ್ತಿಡುತ್ತಿದ್ದಂತೆ ನಾಚಿ ನೀರಾದ ಯುವಕ

ಸೋಶಿಯಲ್ ಮೀಡಿಯಾದಲ್ಲಿ ಕೆಲ ದೃಶ್ಯಗಳು ವೈರಲ್ ಆಗುತ್ತಿರುತ್ತವೆ. ಕೆಲ ವಿಡಿಯೋಗಳು ಮೊಗದಲ್ಲಿ ನಗು ತರಿಸುತ್ತವೆ. ಇದೀಗ ಯುವಕನಿಗೆ ಆನೆಯೊಂದು ಮುತ್ತನ್ನಿಟ್ಟಿದೆ. ಯುವಕನು ನಾಚಿ ನೀರಾಗಿದ್ದಾನೆ. ಈ ಮುದ್ದಾದ ದೃಶ್ಯವು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಫಿದಾ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಗಜರಾಜ ಕೆನ್ನೆಗೆ ಮುತ್ತಿಡುತ್ತಿದ್ದಂತೆ ನಾಚಿ ನೀರಾದ ಯುವಕ
ವೈರಲ್‌ ವಿಡಿಯೋ
Image Credit source: Instagram

Updated on: Oct 29, 2026 | 12:05 PM

ಆನೆಗಳು (Elephants) ಭಾವನಾತ್ಮಕ ಜೀವಿಗಳು. ಹೀಗಾಗಿ ಈ ಪ್ರಾಣಿಗಳು ಮನುಷ್ಯರೊಂದಿಗೆ ಬಹುಬೇಗನೇ ಆಪ್ತವಾಗುತ್ತವೆ. ಈ ಆನೆಗಳು ತನ್ನ ಮಾಲೀಕನ ಜತೆಗೆ ತುಂಟಾಟ ಮಾಡುತ್ತವೆ. ಆದರೆ ಇದೀಗ ಕಿನಾರೆ ಎಲಿಫೆಂಟ್ ಕ್ಯಾಂಪ್‌ನಲ್ಲಿ ಆನೆಗಳನ್ನು ನೋಡುತ್ತಾ ನಿಂತಿದ್ದ ಯುವಕನಿಗೆ ಗಜರಾಜನು ಮುತ್ತನ್ನಿಟ್ಟು ಪ್ರೀತಿ ತೋರಿದೆ. ಈ ವಿಡಿಯೋ ಸದ್ಯ ನೆಟ್ಟಿಗರ ಗಮನ ಸೆಳೆದಿದೆ.

ಯುವಕನ ಕೆನ್ನೆಗೆ ಮುತ್ತನ್ನಿಟ್ಟ ಗಜರಾಜ

ಕಿನ್ನಾರೆ ಎಲಿಫೆಂಟ್ ಫುಕೆಟ್ (Kinnaree Elephant Phuket)  ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಯುವಕನೊಬ್ಬ ಎಲಿಫೆಂಟ್ ಕ್ಯಾಂಪ್ ಗೆ ಭೇಟಿ ನೀಡಿದ ವೇಳೆ ಆನೆಯೊಂದು ಮುತ್ತನ್ನಿಟ್ಟಿರುವುದನ್ನು ಕಾಣಬಹುದು. ಯುವಕನೊಬ್ಬ ಜಿಮ್ಮಿ ಅವನಿಗೆ ಕಿಸ್ ಕೊಡು ಎನ್ನುತ್ತಿದ್ದಂತೆ ಮೆಲ್ಲನೆ ಸೊಂಡಿಲೆತ್ತಿ ಮುತ್ತನ್ನಿಟ್ಟಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನೀರಿಗೆ ಬಿದ್ದ ಮರಿಯಾನೆಯನ್ನು ಮೇಲಕ್ಕೆತ್ತಿದ ತಾಯಾನೆ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಯುವಕ ನಾಚಿ ನೀರಾಗಿದ್ದಾನೆ ಎಂದಿದ್ದಾರೆ. ಇನ್ನೊಬ್ಬರು, ಕ್ಯೂಟ್ ವಿಡಿಯೋ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಮುತ್ತು ಕೊಟ್ಟು ಪ್ರೀತಿ ತೋರಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us