Video: ನೀರಿಗೆ ಬಿದ್ದ ಮರಿಯಾನೆಯನ್ನು ಮೇಲಕ್ಕೆತ್ತಿದ ತಾಯಾನೆ, ವೈರಲ್ ಆಯ್ತು ದೃಶ್ಯ
ತಾಯಿ ಪ್ರೀತಿ ಕಾಳಜಿಯೇ ಹಾಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ನೀರಿನಲ್ಲಿ ಬಿದ್ದು ಮೇಲೆ ಬರಲು ಒದ್ದಾಡುತ್ತಿದ್ದ ಮರಿಯಾನೆಯನ್ನು ತಾಯಾನೆ ರಕ್ಷಿಸಿರುವ ದೃಶ್ಯ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ತಾಯಿ ಪ್ರೀತಿಗೆ ಕಳೆದೇ ಹೋಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ತಾಯಿಯದ್ದು (mother) ನಿಷ್ಕಲ್ಮಶ ಪ್ರೀತಿ ಹಾಗೂ ಕಾಳಜಿ. ಮನುಷ್ಯರಂತೆ ಈ ಪ್ರಾಣಿಗಳು ತಮ್ಮ ಕಂದಮ್ಮಗಳ ಮೇಲೆ ಪ್ರೀತಿ, ಕಾಳಜಿ ತೋರಿಸುತ್ತವೆ. ತಮ್ಮ ಜೀವದ ಹಂಗನ್ನು ತೊರೆದು ಕಂದಮ್ಮಗಳ ರಕ್ಷಣೆಗೆ ನಿಲ್ಲುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ನೀರಿಗೆ ಬಿದ್ದ ತನ್ನ ಕಂದನನ್ನು ಜೋಪಾನವಾಗಿ ಮೇಲೆತ್ತುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನೀರಿಗೆ ಬಿದ್ದ ಮರಿಯಾನೆಯನ್ನು ಮೇಲಕ್ಕೆತ್ತಿದ ತಾಯಾನೆ
ಐಬಸ್ಜ್ ಹು (ibusz.hu) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮರಿಯಾನೆಯೊಂದು ನೀರು ತುಂಬಿದ ಸಣ್ಣ ಕೊಳದಂತಿರುವುದಕ್ಕೆ ಬಿದ್ದಿದೆ. ಇದನ್ನೂ ನೋಡಿದ ತಾಯಾನೆ ತನ್ನ ಕಂದಮ್ಮನನ್ನು ಸೊಂಡಿಲಿನಿಂದ ಮೇಲೇತ್ತಲು ಪ್ರಯತ್ನಿಸುತ್ತಿದೆ. ಶತಾಯಗತ ಪ್ರಯತ್ನ ಮಾಡಿ ಕೊನೆಗೂ ಮರಿಯಾನೆಯನ್ನು ರಕ್ಷಿಸಿರುವ ದೃಶ್ಯ ನೀವಿಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ಕೇರ್ ಟೇಕರ್ ಮೈ ಮೇಲೆ ಎರಗಿ ತುಂಟಾಟ ಆಡಿದ ಮರಿಯಾನೆ
ಈ ವಿಡಿಯೋ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಗುಡ್ ಜಾಬ್ ಅಮ್ಮ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ಅದ್ಭುತ ಎಂದಿದ್ದಾರೆ. ಇನ್ನೊಬ್ಬರು, ಅಮ್ಮಂದಿರು ಎಂದಿಗೂ ಹೀಗೆಯೇ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




