
ಆನೆಗಳ ಆಟ ತುಂಟಾಟ ನೋಡುವುದೇ ಚಂದ. ಎಲ್ಲರಿಗೂ ತಿಳಿದಿರುವಂತೆ ಈ ಆನೆಗಳು (elephants) ಭಾವನಾತ್ಮಕ ಜೀವಿಗಳು. ಹೀಗಾಗಿ ಈ ಆನೆಗಳು ಮನುಷ್ಯರೊಂದಿಗೆ ಬಹುಬೇಗನೇ ಆಪ್ತವಾಗುತ್ತವೆ. ಇದೀಗ ಆನೆಯ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಫ್ರೆಶ್ ಫ್ರೂಟ್ಸ್ ಕಾರ್ಟ್ ಮಾಲೀಕನ ಜತೆಗೆ ಹಣ್ಣು ಕೊಡುವಂತೆ ಹಠ ಹಿಡಿದಿದೆ. ಕಲ್ಲಂಗಡಿ ಹಣ್ಣು ಕೊಟ್ಟ ತಕ್ಷಣ ಫ್ರೂಟ್ಸ್ ಶಾಪ್ ಓನರ್ ಗೆ ಮುದ್ದಾಗಿ ರಿಯಾಕ್ಷನ್ ಕೊಟ್ಟಿದೆ. ಈ ಆನೆಯ ಕ್ಯೂಟ್ ನೆಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ನೋಕೆಜನ್ (nokzen) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಆನೆಯೊಂದು ರಸ್ತೆ ಬದಿಯಲ್ಲಿದ್ದ ನಿಂತಿದ್ದ ಫ್ರೆಶ್ ಫ್ರೂಟ್ಸ್ ಕಾರ್ಟ್ ನ್ನು ನೋಡಿದೆ. ಶಾಪ್ ಹತ್ರ ಬಂದ ಗಜರಾಜನು ಹಣ್ಣು ಕೊಡುವಂತೆ ಓನರ್ ಬಳಿ ಹಠ ಹಿಡಿದಿದೆ. ಮಾಲೀಕ ಫ್ರೂಟ್ಸ್ ಕೊಟ್ಟ ತಕ್ಷಣ ಆನೆ ತನ್ನ ಸೊಂಡಿಲನ್ನು ಮೇಲಕ್ಕೆತ್ತಿ ಅಂಗಡಿ ಮಾಲೀಕನಿಗೆ ಥ್ಯಾಂಕ್ಸ್ ಹೇಳುವಂತೆ ಸನ್ನೆ ಮಾಡಿರುವುದನ್ನು ಕಾಣಬಹುದು.
ಇದನ್ನೂ ಓದಿ: ಮಹಿಳೆಯ ಮುಖಕ್ಕೆ ನೀರು ಎರಚಿ ತುಂಟಾಟ ಆಡಿದ ಮರಿಯಾನೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕ್ಯೂಟ್ ಆಗಿದೆ ಎಂದಿದ್ದಾರೆ. ಇನ್ನೊಬ್ಬರು, ಎಷ್ಟು ಬುದ್ಧಿವಂತ ಈ ಆನೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಗಜರಾಜ ತುಂಬಾ ಬುದ್ಧಿವಂತ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ