ಹೀಗೊಂದು ಅಚ್ಚರಿ ತನಗಾಗಿ ಕಾಯುತ್ತಿರುತ್ತದೆ ಎಂದು ಮನೆಗೆಲಸದ ಸಹಾಯಕಿಗೆ ಗೊತ್ತಿರಲಿಲ್ಲ

Birthday : ಟೀಪಾಯಿ ಮೇಲಿದ್ದ ಬರ್ತಡೇ ಕೇಕ್​ ನೋಡಿದಾಗ ಆಕೆಗೆ ಮಾತೇ ಹೊರಡಿಲ್ಲ. ಕೇಕ್​ ಕಟ್ ಮಾಡುವಾಗ ಉಕ್ಕುತ್ತಿದ್ದ ಸಂತೋಷವನ್ನೂ ಅದುಮಿಟ್ಟುಕೊಳ್ಳಲಾಗಿಲ್ಲ. ಏಕೆಂದರೆ ಮೊದಲ ಸಲ ಇಂಥ ಕ್ಷಣಗಳನ್ನು ಆಕೆ ಅನುಭವಿಸಿದ್ದು.

ಹೀಗೊಂದು ಅಚ್ಚರಿ ತನಗಾಗಿ ಕಾಯುತ್ತಿರುತ್ತದೆ ಎಂದು ಮನೆಗೆಲಸದ ಸಹಾಯಕಿಗೆ ಗೊತ್ತಿರಲಿಲ್ಲ
Family surprises house help with a cake on her birthday
Updated By: ಶ್ರೀದೇವಿ ಕಳಸದ

Updated on: Oct 31, 2022 | 3:12 PM

Viral Video : ನಮ್ಮ, ನಮ್ಮ ಮಕ್ಕಳ, ನಮ್ಮ ತಂದೆ ತಾಯಿಯರ, ನಮ್ಮ ಬಂಧುಬಳಗದವರ, ನಮ್ಮ ಸ್ನೇಹಿತರ, ನಮ್ಮ ಸಾಕುಪ್ರಾಣಿಗಳ ಹುಟ್ಟುಹಬ್ಬವನ್ನು ಆಚರಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡುತ್ತಿರುತ್ತೇವೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ತಮ್ಮ ಮನೆಗೆಲಸದ ಸಹಾಯಕಿಯ ಹುಟ್ಟುಹಬ್ಬವನ್ನು ಆಚರಿಸಿ ಆಕೆಗೆ ಅಚ್ಚರಿ ನೀಡಿದೆ ಈ ಕುಟುಂಬ. ಈ ಖುಷಿಗೆ ಆಕೆಯ ಕಣ್ಣುಗಳು ತುಂಬಿಬಂದಿವೆ.

 

ಇದನ್ನೂ ಓದಿ
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ನಾಲ್ಕು ದಿನಗಳ ಹಿಂದೆ ಅಪ್​ಲೋಡ್ ಆದ ಈ ವಿಡಿಯೋ ಅನ್ನು 10 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. 67,000ಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಫೋಟೋಗ್ರಾಫರ್​ ವೈರಲ್​ ಭಯಾನಿ ಅವರ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ನೋಡಬಹುದಾಗಿದೆ.

ತನ್ನ ಪಾಡಿಗೆ ತಾ ಆಕೆ ಎಂದಿನಂತೆ ಈ ಮನೆಗೆ ಕೆಲಸಕ್ಕೆಂದು ಬಂದಿದ್ದಾಳೆ. ಆದರೆ ಮನೆಯವರೆಲ್ಲ ಸೇರಿ ನೀಡಿದ ಈ ಅಚ್ಚರಿಗೆ ಆಕೆ ಕರಗಿಹೋಗಿದ್ದಾಳೆ. ಟೀಪಾಯಿ ಮೇಲಿದ್ದ ಕೇಕ್​ ನೋಡಿದಾಗ ಆಕೆಗೆ ಮಾತೇ ಹೊರಡಿಲ್ಲ. ಕೇಕ್​ ಕಟ್ ಮಾಡುವಾಗ ಉಕ್ಕುತ್ತಿದ್ದ ಸಂತೋಷವನ್ನೂ ಅದುಮಿಟ್ಟುಕೊಳ್ಳಲಾಗಿಲ್ಲ. ಏಕೆಂದರೆ ಮೊದಲ ಸಲ ಆಕೆಯ ಜೀವನದಲ್ಲಿ ಹೀಗೆ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.

‘ಅವರಿಗೆ ಗಿಫ್ಟ್​ಗಳು ಬೇಕಿಲ್ಲ. ಆದರೆ ಇಂಥ ವಿಶೇಷ ದಿನಗಳಲ್ಲಿ ಅವರಿಗ ಬೇಕಿರುವುದು ಚೂರು ಪ್ರೀತಿ ಮತ್ತು ಸಂತೋಷ. ಈಕೆ ತನ್ನ ಪತಿಯೊಂದಿಗೆ ಈ ನಗರದಲ್ಲಿ ವಾಸಿಸುತ್ತಾಳೆ. ಅವಳ ಹುಟ್ಟುಹಬ್ಬದ ದಿನ ನಾವು ಹೇಗಾದರೂ ಅವಳ ಮುಖದ ಮೇಲೆ ನಗು ತರಬೇಕು ಎಂದುಕೊಂಡಿದ್ದೆವು. ಆ ಪ್ರಕಾರ ನನ್ನ ಮಾವ ಕೇಕ್​ ತಂದರು. ಹೀಗೆ ಅವಳ ಹುಟ್ಟುಹಬ್ಬವನ್ನು ಆಚರಿಸಿದೆವು. ನಮ್ಮ ಮನೆಯನ್ನು ನಿತ್ಯವೂ ಶುಚಿಯಾಗಿ ಇಡುವ ನಿಮಗೆ ಧನ್ಯವಾದ ಮಾಂಶೀ; ದಿನಾ ರಾತ್ರಿ ಮಲಗುವ ಮೊದಲು ಯಾರಿಗಾದರೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸಿ. ಅದು ನಿಮ್ಮನ್ನು ಲವಲವಿಕೆಯಿಂದ ಇರುವಂತೆ ಮಾಡುತ್ತದೆ ಎಂಬ ಸಾಲುಗಳನ್ನು ಈ ಪೋಸ್ಟ್​ನಲ್ಲಿ ಉಲ್ಲೇಖಿಸಲಾಗಿದೆ.

ಈ ಕುಟುಂಬದ ಬಗ್ಗೆ ಹೆಮ್ಮೆ ಉಂಟಾಗುತ್ತಿದೆ ಎಂದು ಕೆಲ ನೆಟ್ಟಿಗರು ಹೇಳಿದ್ದಾರೆ. ಪ್ರತಿಯೊಬ್ಬರೂ ಹೀಗೆ ತಮ್ಮ ಮನೆಗೆಲಸದವರನ್ನು ಆತ್ಮೀಯವಾಗಿ ಕಾಣುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಇನ್ನೂ ಒಬ್ಬರು ಹೇಳಿದ್ದಾರೆ. ಪರಸ್ಪರರ ನೋವನ್ನು ನಲಿವನ್ನು ಅರ್ಥ ಮಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದಿದ್ದಾರೆ ಮತ್ತೊಬ್ಬರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ