Father Son: ಸ್ನೇಹವೇ ಆಗಿರಲಿ ಯಾವುದೇ ಸಂಬಂಧವೇ ಆಗಿರಲಿ ಅದೊಂದು ಅನುಭಾವ. ಪದಗಳಲ್ಲಿ ವಿವರಿಸಲಾಗದಂಥ ಅನುಬಂಧ. ಇದೀಗ ಅಪ್ಪ ಮಗನ ವಿಡಿಯೋ ವೈರಲ್ ಆಗಿದೆ. ಏರ್ಪೋರ್ಟಿನಲ್ಲಿ (Airport) ದೂರದಿಂದ ಅಪ್ಪನನ್ನು ನೋಡಿದ ಮಗ, ಜಿಂಕೆಯ ಮರಿಯಂತೆ ಜಿಗಿಜಿಗಿದು ಓಡಿ ಬರುತ್ತಾನೆ. ಬಂದವನೇ ಅಪ್ಪನನ್ನು ಅಪ್ಪಿ, ಏರಿ ಕುಳಿತುಕೊಳ್ಳುತ್ತಾನೆ. ಹಾಗೆಂದು ಮಗನೇನು ಶಾಲಾಬಾಲಕನಲ್ಲ! ಈ ಆಪ್ತವಾದ ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗುತ್ತಿದ್ದಾರೆ. ತಮ್ಮ ತಂದೆಯನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : Viral Video: ಗೆಳೆಯನೊಂದಿಗೆ ಆನೆಗಳ ಪುನರ್ಮಿಲನ; ಹೃದಯಸ್ಪರ್ಶಿ ದೃಶ್ಯ ನೋಡಿ ಭಾವುಕರಾದ ನೆಟ್ಟಿಗರು
18 ಗಂಟೆಗಳ ಹಿಂದೆ ಇನ್ಸ್ಟಾಗ್ರಾಂನ ಗುಡ್ ಮೂವ್ಮೆಂಟ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 10 ಲಕ್ಷ ಜನರು ನೋಡಿದ್ದು 54,000 ಲಕ್ಷ ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.
ನಿಜಕ್ಕೂ ಈ ವಿಡಿಯೋ ನೋಡಿ ನನ್ನ ಕಣ್ಣಲ್ಲಿ ನೀರು ಜಿನುಗುತ್ತಿದೆ ಎಂದಿದ್ದಾರೆ ಒಬ್ಬರು. ನನಗೆ ತೀರಿಹೋದ ನನ್ನ ಅಪ್ಪ ನೆನಪಾಗುತ್ತಿದ್ದಾರೆ ಎಂದಿದ್ದಾರೆ ಇನ್ನೊಬ್ಬರು. ನನ್ನ ಹಾಸ್ಟೆಲ್ ದಿನಗಳಲ್ಲಿ ನಾನು ಅಪ್ಪನನ್ನು ಹೀಗೆಯೇ ಓಡಿಬಂದು ತಬ್ಬಿಕೊಳ್ಳುತ್ತಿದ್ದೆ ಎಂದಿದ್ದಾರೆ ಮತ್ತೊಬ್ಬರು. ಅಮ್ಮ ನನ್ನನ್ನು ಹಾಸ್ಟೆಲ್ಗೆ ನೋಡಲು ಬಂದಾಗ ಹೀಗೆಯೇ ಕೂಸುಮರಿಯಂತೆ ಆಗುತ್ತಿದ್ದೆ ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral: ಟಿಂಡರ್; ಹುಡುಗರು ಯಾಕಿಷ್ಟು ಹತಾಶೆಗೊಳಗಾಗುತ್ತಿದ್ದಾರೆ? ಯುವತಿಯ ಪ್ರಶ್ನೆ
ಮಕ್ಕಳು ಎಷ್ಟೇ ದೊಡ್ಡವರಾದರೂ ಅಪ್ಪಂದಿರಿಗೆ ಅವರಿನ್ನೂ ಮಕ್ಕಳೇ ಅಲ್ವಾ? ಎಂದಿದ್ದಾರೆ ಒಬ್ಬರು. ಅಬ್ಬಾ! ಅಪ್ಪ ಎಂದರೆ ಸೂಪರ್ಮ್ಯಾನ್, ದೊಡ್ಡಮಗುವನ್ನು ಎತ್ತಿಕೊಂಡಿರುವುದನ್ನು ನೋಡಿ ಎಂದಿದ್ದಾರೆ ಇನ್ನೊಬ್ಬರು. ಈಗಲೂ ನಾನು ಅಪ್ಪನನ್ನು ಹೀಗೆಯೇ ತಬ್ಬಿಕೊಳ್ಳುತ್ತೇನೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Brain Teaser: ಮೆದುಳಿಗೆ ಗುದ್ದು; ಶಾಲಾದಿನಗಳ ಇಂಥ ಲೆಕ್ಕಗಳು ನೆನಪಿವೆಯೇ? ಹಾಗಿದ್ದರೆ ಪ್ರಯತ್ನಿಸಿ
ವರ್ಷಗಳ ನಂತರ ಅಪ್ಪನನ್ನು ನೋಡಿದಾಗ ಹೀಗೆಯೇ ಆಗುತ್ತದೆ, ಈ ದೃಶ್ಯ ನೋಡಿ ನನಗಂತೂ ಕಣ್ಣು ಉಕ್ಕುತ್ತಿವೆ ಎಂದಿದ್ದಾರೆ ಮಗದೊಬ್ಬರು. ಹೀಗೆ ನಾನು ನನ್ನ ಗೆಳೆಯರನ್ನು ನೋಡಿದಾಗ ಮಾಡುತ್ತೇನೆ, ಆದರೆ ಈ ಅಪ್ಪ ಮಗ ಗ್ರೇಟ್ ಎಂದಿದ್ದಾರೆ ಇನ್ನೊಬ್ಬರು.
ಈ ವಿಡಿಯೋ ನೋಡಿದ ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ