Video: ಮಗಳ ರೀಲ್ಸ್ ನಡುವೆ ಎಂಟ್ರಿ ಕೊಟ್ಟ ತಂದೆಯ ಚಿಂದಿ ಮೂನ್‌ ವಾಕ್‌ ಸ್ಟೆಪ್‌ 

ಅಪ್ಪ ಅಂದ್ರೆ ಆಕಾಶ. ಹೆಣ್ಣು ಮಕ್ಕಳ ಪಾಲಿಗೆ ಅಪ್ಪನೇ ಮೊದಲ ಹೀರೋ. ಹೀಗಾಗಿ ಮಗಳ ಜತೆಗೆ ತಂದೆಗೆ ಹೆಚ್ಚು ಆತ್ಮೀಯತೆ, ಪ್ರೀತಿ ಎಲ್ಲವೂ ಕೂಡ.. ಆದರೆ ಇಲ್ಲೊಬ್ಬ ತಂದೆ ಮಗಳು ರೀಲ್ಸ್ ಮಾಡುತ್ತಿದ್ದಂತೆ ಮೈಕಲ್ ಜಾಕ್ಸನ್ ಮೂನ್ ವಾಕ್ ಸ್ಟೆಪ್ ಮಾಡಿ ಎಲ್ಲರನ್ನು ಅಚ್ಚರಿ ಪಡಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಕುರಿತಾದ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

Video: ಮಗಳ ರೀಲ್ಸ್ ನಡುವೆ ಎಂಟ್ರಿ ಕೊಟ್ಟ ತಂದೆಯ ಚಿಂದಿ ಮೂನ್‌ ವಾಕ್‌ ಸ್ಟೆಪ್‌ 
ವೈರಲ್‌ ವಿಡಿಯೋ
Image Credit source: Instagram

Updated on: Mar 19, 2026 | 4:12 PM

ಅಪ್ಪ (father) ಅಂದ್ರೆನೇ ಹಾಗೇನೇ, ಪದಗಳಲ್ಲಿ ವಿವರಿಸಲು ಆಗದು. ಮಗಳ ಪಾಲಿಗೆ ಅಪ್ಪ ಮೊದಲ ಹೀರೋ ಅಷ್ಟೇ ಅಲ್ಲ, ಬೆಸ್ಟ್ ಫ್ರೆಂಡ್ ಕೂಡ ಆಗಿರುತ್ತಾನೆ. ಕಷ್ಟಪಟ್ಟು ದುಡಿದು ಮಗಳ ಇಷ್ಟಗಳನ್ನು ಈಡೇರಿಸುವ ಅಪ್ಪನಿಗೆ ಆಕೇಯೇ ಪ್ರಪಂಚ. ಅಪ್ಪ ಮಗಳ ಬಾಂಧವ್ಯ ಸಾರುವ ಕೆಲ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ಇಲ್ಲೊಬ್ಬ ತಂದೆಯೂ ಮಗಳ ರೀಲ್ಸ್‌ನಲ್ಲಿ ಚಿಂದಿ ಸ್ಟೆಪ್ ಹಾಕಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಚಪ್ಪಲಿ ಧರಿಸದೇ ಮೈಕೆಲ್ ಜಾಕ್ಸನ್ (Michael Jackson) ಮೂನ್ ವಾಕ್ ಸ್ಟೆಪ್ ಮಾಡಿ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ.

@magic_shop ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಗಳು, ಮೈಕೆಲ್ ಜಾಕ್ಸನ್ ಅವರ ಬಿಲ್ಲಿ ಜೀನ್ ಹಾಡಿಗೆ ಡ್ಯಾನ್ಸ್ ಮಾಡಲು ಮುಂದಾಗಿದ್ದಾಳೆ. ಇದೇ ವೇಳೆ ಎಂಟ್ರಿ ಕೊಟ್ಟ ಆಕೆಯ ತಂದೆ ಚಪ್ಪಲಿ ಧರಿಸಿ ಮೈಕಲ್ ಜಾಕ್ಸನ್ ಮೂನ್ ವಾಕ್ ಸ್ಟೆಪ್ ಸಖತ್ ಆಗಿ ಮಾಡಿರುವುದನ್ನು ಕಾಣಬಹುದು. ಕೊನೆಗೆ ಮಗಳು ತಂದೆ ಜತೆಗೆ ಸ್ಟೆಪ್ ಹಾಕುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ವೈದ್ಯರು ಪುಟ್ಟ ಕಂದಮ್ಮನನ್ನು ಕೈಗಿಡುತ್ತಿದ್ದಂತೆ ಎತ್ತಿಕೊಳ್ಳಲು ಹೆದರಿದ ತಂದೆ

ಈ ವಿಡಿಯೋ 20 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ವ್ಯಕ್ತಿಯ ಡ್ಯಾನ್ಸ್ ಡ್ಯಾನ್ಸರ್ ಗಳನ್ನು ಮೀರಿಸುವಂತಿದೆ ಎಂದಿದ್ದಾರೆ. ಇನ್ನೊಬ್ಬರು, ಅಂಕಲ್ ಜಾಕ್ಸನ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅಂಕಲ್ ಎಂದು ಕರೆಯಬೇಡಿ, ಯುವಕನಂತೆ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us