
ಭಾರತದಲ್ಲಿ ಮನೆ ಬಾಗಿಲಿನಲ್ಲಿಯೇ ರಕ್ತ ಪರೀಕ್ಷೆ ಸೌಲಭ್ಯವು ಲಭ್ಯವಿದೆ. ಹೌದು, ತರಬೇತಿ ಪಡೆದ ಲ್ಯಾಬ್ ತಂತ್ರಜ್ಞರು ಮನೆಗೆ ಸುರಕ್ಷಿತವಾಗಿ ರಕ್ತದ ಮಾದರಿಯನ್ನು ಸಂಗ್ರಹಿಸುವುದು ಹೊಸದೇನಲ್ಲ. ಆದರೆ ವಿದೇಶಿ ಮಹಿಳೆ (foreign woman) ಈ ಆರೋಗ್ಯ ಸೇವೆ ಕಂಡು ಅಚ್ಚರಿಗೊಂಡಿದ್ದಾರೆ. ಫ್ರಾನ್ಸ್ ನಲ್ಲಿ ಈ ರೀತಿ ಸೇವೆ ಲಭ್ಯವಿಲ್ಲ, ತಪಾಸಣೆ ಬಳಿಕ ಸಿಗುವ ವರದಿಗಾಗಿ ಕಾಯಬೇಕಾಗುತ್ತದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೋನಿ ಲಡ್ಡು (Sonnyladdu) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿದೇಶಿ ಮಹಿಳೆ ಭಾರತದ ಆರೋಗ್ಯ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮನೆ ಬಾಗಿಲಿಗೆ ಬಂದು ಲ್ಯಾಬ್ ತಂತ್ರಜ್ಞೆ ರಕ್ತ ಪರೀಕ್ಷೆ ಮಾಡಿರುವುದನ್ನು ನೀವಿಲ್ಲಿ ಕಾಣಬಹುದು.
ಈ ವಿದೇಶಿ ಮಹಿಳೆ ಭಾರತದಲ್ಲಿ ಮನೆ ಬಾಗಿಲಿಗೆ ಬಂದು ರಕ್ತ ಪರೀಕ್ಷೆ ಮಾಡಿ ಸ್ಯಾಂಪಲ್ ತೆಗೆದುಕೊಂಡು ಹೋಗುತ್ತಾರೆ. ಒಂದು ದಿನದ ಬಳಿಕ ರಿಪೋರ್ಟ್ ಕೈಗೆ ಸಿಗುತ್ತದೆ. ಭಾರತಕ್ಕೆ ಹೋಲಿಸಿದ್ರೆ ಫ್ರಾನ್ಸ್ ನಲ್ಲಿ ರಿಪೋರ್ಟ್ ಗಾಗಿ ಸ್ವಲ್ಪ ಕಾಯಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೀವು ಭಾರತಕ್ಕೆ ಒಮ್ಮೆ ಬಂದ್ರೆ ಹುಟ್ಟೂರಿಗೆ ಹೋಗಲ್ಲ; ಅಸಲಿ ಕಾರಣ ತಿಳಿಸಿದ ಜಪಾನೀಸ್ ಮಹಿಳೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಭಾರತದಲ್ಲಿ ಈ ಸೇವೆ ಸರ್ವೇ ಸಾಮಾನ್ಯ ಎಂದಿದ್ದಾರೆ. ಇನ್ನೊಬ್ಬರು, ಇದರಲ್ಲಿ ನಮ್ಗೆ ಹೊಸದೇನು ಅನಿಸಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, ನಿಮ್ಮಿಬ್ಬರಿಗೂ ಉತ್ತಮ ಆರೋಗ್ಯ ಸಿಗಲಿ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ