Proffee: ಡಾಲ್ಗೊನಾ ಕಾಫಿ ಬಳಿಕ ವೈರಲ್ ಆಗುತ್ತಿದೆ ಪ್ರೊಫೀ! ಮಾಡೋದು ಹೇಗೆ?

Proffee: ಪ್ರೊಫೀ ಟ್ರೆಂಡ್ ಶುರುವಾಗಿದ್ದು ಟಿಕ್​ಟಾಕ್​ನಲ್ಲಿ. ಬಳಿಕ ಇನ್ಸ್ಟಾಗ್ರಾಂನಲ್ಲೂ ಪ್ರೊಫೀ ಹವಾ ಹಬ್ಬಿಕೊಂಡಿತು. ಸದ್ಯ ಇನ್ಸ್ಟಾಗ್ರಾಂನಲ್ಲಿ ಸುಮಾರು 66k ಪೋಸ್ಟ್​ಗಳು ಪ್ರೊಫೀ ಹ್ಯಾಷ್​ಟ್ಯಾಗ್ ಮೂಲಕ ಮಿಂಚುತ್ತಿವೆ.

Proffee: ಡಾಲ್ಗೊನಾ ಕಾಫಿ ಬಳಿಕ ವೈರಲ್ ಆಗುತ್ತಿದೆ ಪ್ರೊಫೀ! ಮಾಡೋದು ಹೇಗೆ?
PROFFEE
Follow us
TV9 Web
| Updated By: ganapathi bhat

Updated on:Apr 06, 2022 | 7:24 PM

ಡಾಲ್ಗೊನಾ ಕಾಫಿ ಅಂದ್ರೆ ತಕ್ಷಣ ಲಾಕ್​ಡೌನ್ ನೆನಪಾಗಬಹುದು. ಅಥವಾ ಲಾಕ್​ಡೌನ್ ಅಂದರೆ ಡಾಲ್ಗೊನಾ ಕಾಫಿ ಕಣ್ಣ ಮುಂದೆ ಬರಬಹುದು. ಲಾಕ್​ಡೌನ್ ಅವಧಿಯಲ್ಲಿ ಅಷ್ಟೂ ವೈರಲ್ ಆದ ವಸ್ತು ಅಂದ್ರೆ ಅದು ಡಾಲ್ಗೊನಾ ಕಾಫಿ ಎಂದು ಮರು ಯೋಚಿಸದೆ ಹೇಳಬಹುದು. ಡಾಲ್ಗೊನಾ ಕಾಫಿ ಹುಟ್ಟಿಸಿದ ಕ್ರೇಜ್ ಅಂಥದ್ದು. ಇದೀಗ ಲಾಕ್​ಡೌನ್ ಕಾಲ ಮುಗಿದು, ಕೊರೊನಾ ಪ್ರಮಾಣ ಕೂಡ ಕ್ರಮೇಣವಾಗಿ ಇಳಿಕೆಯಾಗುತ್ತಿರುವ ಹಂತದಲ್ಲಿ ಹೊಸ ಕಾಫಿ ಕ್ರೇಜ್ ಹುಟ್ಟಿಕೊಂಡಿದೆ. ಈ ವಿಶೇಷ ಕಾಫಿ ಹೆಸರು ‘ಪ್ರೊಫೀ’! ಡಾಲ್ಗೊನಾ ಕಾಫಿ ನಂತರ ಮತ್ತೊಂದು ಕಾಫಿ ಟ್ರೈ ಮಾಡಲು ನೀವು ಬಯಸ್ಉತ್ತೀರಾದರೆ ಪ್ರೊಫೀ ಬಗ್ಗೆ ತಿಳಿದುಕೊಳ್ಳಿ.

ಈ ಪ್ರೊಫೀ ಟ್ರೆಂಡ್ ಶುರುವಾಗಿದ್ದು ಟಿಕ್​ಟಾಕ್​ನಲ್ಲಿ. ಬಳಿಕ ಇನ್ಸ್ಟಾಗ್ರಾಂನಲ್ಲೂ ಪ್ರೊಫೀ ಹವಾ ಹಬ್ಬಿಕೊಂಡಿತು. ಸದ್ಯ ಇನ್ಸ್ಟಾಗ್ರಾಂನಲ್ಲಿ ಸುಮಾರು 66k ಪೋಸ್ಟ್​ಗಳು ಪ್ರೊಫೀ ಹ್ಯಾಷ್​ಟ್ಯಾಗ್ ಮೂಲಕ ಮಿಂಚುತ್ತಿವೆ. ಪ್ರೊಟೀನ್ ಕಾಫಿ (#proteincoffee) ಎಂಬ ಹ್ಯಾಷ್​ಟ್ಯಾಗ್ ಕೂಡ ಸದ್ದು ಮಾಡುತ್ತಿದೆ.

ಫಿಟ್​ನೆಸ್ ಪ್ರಿಯರಿಗೆ ಪ್ರೊಫೀ ಪ್ರೊಫೀ ಅಂದ್ರೆ ಪ್ರೊಟೀನ್ ಶೇಕ್ ಮತ್ತು ಕಾಫಿ. ಪ್ರೊಟೀನ್ ಅಂಶಗಳ ಮೂಲಕ ಕಾಫಿಯನ್ನು ಹೆಚ್ಚು ರುಚಿಯೂ, ಆರೋಗ್ಯಯುತವೂ ಆಗುತ್ತದೆ. ಈ ಕಾರಣಗಳಿಂದ ಪ್ರೊಫೀ ಫಿಟ್​ನೆಸ್ ಆಸಕ್ತರಿಗೂ ಹೆಚ್ಚು ಇಷ್ಟವಾಗಿದೆ. ಪ್ರೊಟೀನ್ ಅಂಶಗಳನ್ನು ಹೆಚ್ಚು ಸೇವಿಸಲು ಬಯಸುವ, ಆರೋಗ್ಯದ ಬಗ್ಗೆ ಕಾಳಜಿ ಉಳ್ಳವರಿಗೂ ಪ್ರೊಫೀ ಉತ್ತಮ ಪೇಯವಾಗಿದೆ.

ಡಯೆಟ್ ಪಾಲನೆಯ ವಿಚಾರಕ್ಕೆ ಬಂದರೆ, ಅಲ್ಲೂ ಪ್ರೊಫೀ ಅಗತ್ಯ ಪ್ರೊಟೀನ್ ನೀಡಿ ಡಯೆಟ್​ಗೆ ಸಹಕಾರ ನೀಡುತ್ತದೆ. ಆಹಾರ ಸ್ವೀಕಾರ ಮಾಡುವ ಬಗ್ಗೆ ಹೇಳುವಾಗ, ಪ್ರೊಟೀನ್​ಯುಕ್ತ ಆಹಾರವನ್ನು ದಿನದ ಮೊದಲ ಹಂತದಲ್ಲಿ ಸ್ವೀಕರಿಸಲು ತಜ್ಞರು ಸಲಹೆ ನೀಡುತ್ತಾರೆ. ಇಂಥಾ ಪ್ರೊಟೀನ್ ಮತ್ತು ಕಾಫಿ ಅಂಶ ಹೊಂದಿರುವ ಪ್ರೊಫೀ ದಿನವನ್ನು ಸುಂದರವಾಗಿ ಆರಂಭಿಸಲು ಉತ್ತಮ ಆಯ್ಕೆಯಾಗಿದೆ.

ಪ್ರೊಫೀ ಮಾಡೋದು ಹೇಗೆ? ಪ್ರೊಫೀ ಮಾಡಲು ಹೆಚ್ಚಿನ ಕಸರತ್ತು ಮಾಡಬೇಕಾಗಿಲ್ಲ. ದಿನನಿತ್ಯ ಮಾಡುವಂತೆ ಹಾಲು, ಕಾಫಿ ಪುಡಿ ಬೆರೆಸಿ ಕಾಫಿ ತಯಾರಿಸಬೇಕು. ಬಳಿಕ ಅದಕ್ಕೆ ಪ್ರೊಟೀನ್ ಶೇಕ್ ಬೆರೆಸಿಕೊಂಡರಾಯಿತು. ಪ್ರೊಟೀನ್ ಶೇಕ್ ಅಥವಾ ಪ್ರೊಟೀನ್ ಪೌಡರ್ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ನಾವು ತಯಾರಿಸಿದ ಕಾಫಿಗೆ ಪ್ರೊಟೀನ್ ಶೇಕ್​ನ್ನು ಬೇಕಾದಷ್ಟು ಪ್ರಮಾಣದಲ್ಲಿ ಮಾತ್ರ ಸೇರಿಸಿಕೊಳ್ಳಬೇಕು. ಸಕ್ಕರೆ ಹಾಕದೆಯೂ ಪ್ರೊಫೀ ಮಾಡಬಹುದು. ಈ ಮಿಶ್ರಣವನ್ನು ಚೆನ್ನಾಗಿ ಬೆರೆಸಿಕೊಂಡರೆ ಪ್ರೊಫೀ ಸಿದ್ಧವಾಗುತ್ತದೆ.

ಇದನ್ನೂ ಓದಿ: ಸಿಕ್ಸ್​​ ಪ್ಯಾಕ್​​ನಲ್ಲಿ ಮಿಂಚಿದ ರಾಹುಲ್​ ಗಾಂಧಿ; ಫಿಟ್​ನೆಸ್​ ಟಿಪ್ಸ್​ ಕೇಳಿದ ಸೆಲೆಬ್ರಿಟಿಗಳು

ಫಿಟ್​ನೆಸ್​ಗಾಗಿ MG ರೋಡ್, ವಿಧಾನಸೌಧ ಸುತ್ತಮುತ್ತ ಸೈಕಲ್ ರೌಂಡ್ ಹೊಡೆದ ಅಪ್ಪು!

Published On - 8:20 pm, Sat, 6 March 21