ಮಗನಿಗೆ ಅದೃಷ್ಟ ತಂದ ತಾಯಿ ಜನ್ಮ ದಿನಾಂಕ: ಲಾಟರಿಯಲ್ಲಿ 240 ಕೋಟಿ ರೂ ಗೆದ್ದ ಯುವಕ

ತೆಲಂಗಾಣದ ಯುವಕ ಅನಿಲ್ ಕುಮಾರ್ ಅಬುಧಾಬಿಯಲ್ಲಿ 240 ಕೋಟಿ ರೂ. ಲಾಟರಿ ಗೆದ್ದಿದ್ದಾನೆ. ತನ್ನ ತಾಯಿಯ ಜನ್ಮದಿನಾಂಕ 11 ಸಂಖ್ಯೆಯಿಂದ ಲಾಟರಿ ಖರೀದಿಸಿರುವುದರಿಂದ ಇಷ್ಟು ದೊಡ್ಡ ಮಟ್ಟದ ಮೊತ್ತ ಲಭಿಸಿದೆ. ಸರ್ಕಾರಿ ಶಾಲೆಯಲ್ಲಿ ಕಲಿತು, ಸಾಫ್ಟ್‌ವೇರ್ ಇಂಜಿನಿಯರ್ ಆದ ಅನಿಲ್, ಗೆದ್ದ ಹಣದಿಂದ ಬಡವರಿಗೆ ಸಹಾಯ ಮಾಡುವ ಹಾಗೂ ಉತ್ತಮವಾಗಿ ಹೂಡಿಕೆ ಮಾಡುವ ಯೋಜನೆ ಹೊಂದಿದ್ದಾರೆ. ಈ ಸುದ್ದಿ ಇದೀಗ ಭಾರೀ ವೈರಲ್ ಆಗಿದೆ.

ಮಗನಿಗೆ ಅದೃಷ್ಟ ತಂದ ತಾಯಿ ಜನ್ಮ ದಿನಾಂಕ: ಲಾಟರಿಯಲ್ಲಿ 240 ಕೋಟಿ ರೂ ಗೆದ್ದ ಯುವಕ
ವೈರಲ್​​​ ಫೋಸ್ಟ್

Updated on: Nov 10, 2025 | 4:15 PM

ಅದೃಷ್ಟ ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಅದು ಬಂದಾಗ ತಿರಸ್ಕರಿಸಬಾರದು. ಇಲ್ಲೊಬ್ಬ ಯುವಕನಿಗೆ ತನ್ನ ಅಮ್ಮನ ಜನ್ಮ ಸಂಖ್ಯೆಯಿಂದ ಅದೃಷ್ಟ ಒಲಿದು ಬಂದಿದೆ. ಬಾಲ್ಯದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ, ಉನ್ನತ ಶಿಕ್ಷಣ ಮುಗಿಸಿ, ಇದೀಗ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋದ ಯುವಕನಿಗೆ ಲಾಟರಿ ರೂಪದಲ್ಲಿ ಅದೃಷ್ಟ ಒಲಿದು ಬಂದಿದೆ. ಈ ಅದೃಷ್ಟ ಆತನ ತಾಯಿಯ ಜನ್ಮ ದಿನಾಂಕದಿಂದ ಬಂದಿದೆ.  ತಾಯಿಯ ಜನ್ಮ ದಿನಾಂಕ 11, ಆ ಸಂಖ್ಯೆಯಲ್ಲೇ ಲಾಟರಿ ಖರೀದಿಸಿದ್ದಾನೆ. ಈ 11 ಸಂಖ್ಯೆ ಆತನ ಜೀವನನ್ನೇ ಬದಲಾಯಿಸಿದೆ. ಅಬುಧಾಬಿಯ ಲಾಟರಿಯಿಂದ ಬರೋಬ್ಬರಿ 240 ಕೋಟಿ ರೂಪಾಯಿ ಹಣವನ್ನು ಗೆದ್ದಿದ್ದಾನೆ.  ಈ ವಿಚಾರ ತಿಳಿದ ಆತನ ಹಳ್ಳಿಯ ಜನ ಸಂತೋಷ ವ್ಯಕ್ತಪಡಿಸಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಈ ಯುವಕ, ತೆಲಂಗಾಣದ ಖಮ್ಮಂ ಜಿಲ್ಲೆಯ ವೆಮಸೂರ್ ಮಂಡಲದಲ್ಲಿರುವ ಭೀಮವರಂ ಗ್ರಾಮ ಅನಿಲ್ ಕುಮಾರ್ ಎಂದು ಹೇಳಲಾಗಿದೆ.  ಒಂದೂವರೆ ವರ್ಷದಿಂದ ಅಬುಧಾಬಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ, ಅನಿಲ್ ತನ್ನ ಸ್ನೇಹಿತರ ಒತ್ತಾಯಕ್ಕೆ ಲಾಟರಿ ಟಿಕೆಟ್ ಖರೀದಿಸಿದ್ದಾನೆ. ತನ್ನ ತಾಯಿಯ ಜನ್ಮ ದಿನಾಂಕ 11ರ ಸಂಖ್ಯೆಯಲ್ಲಿ ಲಾಟರಿ ಖರೀದಿ ಮಾಡಿರುವುದು ಇನ್ನು ವಿಶೇಷವಾಗಿತ್ತು. ತಮ್ಮ ಮಗನಿಗೆ ಲಾಟರಿಯಲ್ಲಿ 240 ಕೋಟಿ ಹಣ ಬಂದಿದೆ ಎಂಬುದನ್ನು ನಂಬಲು ಸಾಧ್ಯವಾಗಿಲ್ಲ, ನಮ್ಮ ಕಷ್ಟಕ್ಕೆ ದೇವರು ಒಳ್ಳೆಯ ದಾರಿ ತೋರಿಸಿದ್ದಾರೆ ಎಂದು ಯುವಕನ ಪೋಷಕರು ಹೇಳಿದ್ದಾರೆ.

ಇದನ್ನೂ ಓದಿ:  ಒಂದು ಕೋಟಿ ಲಾಟರಿ ಗೆದ್ದವನನ್ನ ಡೋಲು ಬಾರಿಸಿ ಹುಡುಕುತ್ತಿದ್ದಾರೆ ಇಲ್ಲಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇನ್ನು ಲಾಟರಿ ಗೆದ್ದ ಅನಿಲ್ ಕುಮಾರ್ ಎಕ್ಸ್​​ನಲ್ಲಿ ತನ್ನ ಅಭಿಪ್ರಾಯವನ್ನು ಹೀಗೆ ಹಂಚಿಕೊಂಡಿದ್ದಾನೆ. “ನಾನು ಈ ಹಣವನ್ನು ಹೇಗೆ ಹೊಡಿಕೆ ಮಾಡಬೇಕು ಹಾಗೂ ಸರಿಯಾದ ರೀತಿಯಲ್ಲಿ ಖರ್ಚು ಮಾಡಬೇಕು ಎಂಬ ಯೋಚನೆ ಇದೆ. ಲಾಟರಿ ಗೆದ್ದ ನಂತರ ನನ್ನ ಬಳಿ ಹಣವಿದೆ ಎಂಬ ನಂಬಿಕೆ ಬಂದಿದೆ. ಸರಿಯಾದ ರೀತಿಯಲ್ಲಿ ಖರ್ಚು ಮಾಡಬೇಕು. ಹಾಗೂ ಈ ಹಣದಿಂದ ದೊಡ್ಡದನ್ನು ಮಾಡಬೇಕು ಎಂಬು ಕನಸಿದೆ” ಎಂದು ಹೇಳಿದ್ದಾನೆ. ಇದರ ಜತೆಗೆ ಈ ಹಣದಲ್ಲಿ ಬಡವರಿಗೆ ಸಹಾಯ ಮಾಡುವ ಕೆಲಸ ಕೂಡ ಮಾಡುತ್ತೇನೆ ಎಂದು ಹೇಳಿದ್ದಾನೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ