
ಎಷ್ಟೇ ಓದಿರಲಿ, ಉದ್ಯೋಗ ಸಿಗೋದು ಕಷ್ಟ. ಹೀಗಿರುವಾಗ ಯುವಕಯೊಬ್ಬನಿಗೆ ಕೆಲಸ ಹುಡುಕಿ ಸುಸ್ತಾಗಿ ಹೋಗಿದೆ. ಈ ಐಟಿ ಪದವೀಧರನೊಬ್ಬ (IT graduate) ಎಲ್ಲಾ ಕಂಪನಿಗಳಿಗೆ ಅರ್ಜಿ ಸಲ್ಲಿಕೆ ಮಾಡಿದ್ರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ತನಗೆ ಕೆಲಸ ಹುಡುಕಿ ಕೊಟ್ಟವರಿಗೆ 30,000 ರೂ ಬಹುಮಾನ ನೀಡುವುದಾಗಿ ಘೋಷಿಸಿದ್ದಾನೆ. ಈ ರೆಡ್ಡಿಟ್ ಪೋಸ್ಟ್ ಸದ್ಯ ವೈರಲ್ ಆಗಿದೆ.
ಫ್ರೆಶರ್ ಜಾಬ್ ಟೆಕ್ ಇಂಡಿಯಾ (r/FresherJobTechIndia) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದ್ದು, ನನಗೆ ಉದ್ಯೋಗ ಪಡೆಯಲು ಸಹಾಯ ಮಾಡುವವರಿಗೆ ನಾನು 30,000 ರೂ ನಗದು ಬಹುಮಾನ ನೀಡುತ್ತೇನೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
I Will pay ₹30,000 cash to anyone who helps me land a job (ECE/IT Fresher, India)
by
u/Automatic_Library119 in
FresherTechJobsIndia
ನಾನು ಐಟಿ ಕ್ಷೇತ್ರದಲ್ಲಿ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ಒಬ್ಬ ‘ಫ್ರೆಶರ್’. ಪ್ರಸ್ತುತ ಉದ್ಯೋಗ ಪಡೆಯುವಲ್ಲಿ ‘ಇಂಟರ್ನಲ್ ರೆಫರಲ್’ ಎಷ್ಟು ಮಹತ್ವದ್ದಾಗಿದೆ ಎಂಬುದು ನನಗೆ ತಿಳಿದಿದೆ; ಹಾಗಾಗಿ, ನನಗೆ ಉದ್ಯೋಗ ಸಿಗುವಂತೆ ಸಹಾಯ ಮಾಡುವವರಿಗೆ ನಾನು 30,000 ರೂ ಬಹುಮಾನವನ್ನು ನೀಡುತ್ತಿದ್ದೇನೆ. ನಾನು 2025ರಲ್ಲಿ ಪದವಿ ಪೂರೈಸಿದ್ದೇನೆ. ಪದೇ ಪದೇ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗದಿರುವುದರಿಂದ ನಾನು ಹತಾಶನಾಗಿದ್ದೇನೆ ಎಂದು ಬೇಸರ ಹೊರಹಾಕಿದ್ದಾನೆ.
ಇದನ್ನೂ ಓದಿ: ತಡರಾತ್ರಿವರೆಗೂ ಕೆಲ್ಸ ಮಾಡ್ಬೇಡಿ, ಕುಟುಂಬವು ಮುಖ್ಯ; ಯುವಕರಿಗೆ ಸಲಹೆ ನೀಡಿದ ಕೆಲಸ ಕಳೆದುಕೊಂಡ ಉದ್ಯೋಗಿ
ಈ ರೆಡ್ಡಿಟ್ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಸಿಗೋದು ಕಷ್ಟ ಎಂದಿದ್ದಾರೆ. ಇನ್ನೊಬ್ಬರು, ಎಷ್ಟು ಅಪ್ಡೇಟ್ ಆಗಿದ್ದೇವೆ ಅಂದ್ರೆ ಕೆಲಸ ಇಲ್ಲದಿದ್ದರೆ ಬಹುಮಾನ ಘೋಷಿಸುವುದು ಅಂದ್ರೆ ಸುಲಭದ ಮಾತಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕೆಲಸ ಹುಡುಕುವಾಗ ಇರುವ ಟೆನ್ಶನ್ ಓದುವಾಗ ಇರಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ