AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪ್ರಧಾನಿ ಮೋದಿ ಮುಂದೆ ಕಣ್ಣೀರು, ಗರ್ವದಿಂದ ಸೆಲ್ಯೂಟ್‌ ಹೊಡೆದ ಯುವತಿ

ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡು ದಿನಗಳ ಜಪಾನ್‌ ಪ್ರವಾಸದಲ್ಲಿದ್ದಾರೆ. ಜಪಾನ್‌ಗೆ ಕಾಲಿಡುತ್ತಿದ್ದಂತೆ, ಪ್ರಧಾನಿ ಮೋದಿಯವರನ್ನು ಭಾರತೀಯ ಸಂಪ್ರದಾಯದಂತೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ಕುರಿತ ವಿಡಿಯೋಗಳು ಸಾಕಷ್ಟು ವೈರಲ್‌ ಆಗುತ್ತಿವೆ. ಈ ನಡುವೆ ಇಲ್ಲೊಂದು ವಿಡಿಯೋ ಹರಿದಾಡುತ್ತಿದ್ದು, ಜಪಾನಿನಲ್ಲಿ ಪ್ರಧಾನಿ ಮೋದಿಯನ್ನು ಕಂಡು ಭಾರತೀಯ ಮೂಲದ ಯುವತಿಯೊಬ್ಬಳು ಭಾವುಕಳಾಗಿದ್ದಾಳೆ. ಮೋದಿ ಬರುತ್ತಿದ್ದಂತೆ ಆಕೆ ಸೇನಾ ಕಮಾಂಡರ್‌ನಂತೆ ಸೆಲ್ಯೂಟ್‌ ಹೊಡೆದಿದ್ದು, ಈ ದೃಶ್ಯ ಇದೀಗ ಭಾರೀ ವೈರಲ್‌ ಆಗುತ್ತಿದೆ.

Video: ಪ್ರಧಾನಿ ಮೋದಿ ಮುಂದೆ ಕಣ್ಣೀರು, ಗರ್ವದಿಂದ ಸೆಲ್ಯೂಟ್‌ ಹೊಡೆದ ಯುವತಿ
ಪ್ರಧಾನಿ ಮೋದಿಗೆ ಸೆಲ್ಯೂಟ್‌ ಹೊಡೆದ ಯುವತಿImage Credit source: Social Media
ಮಾಲಾಶ್ರೀ ಅಂಚನ್​
|

Updated on: Aug 30, 2025 | 2:53 PM

Share

ಪ್ರಧಾನಿ ನರೇಂದ್ರ ಮೋದಿ (PM Narendra Modi)  ಅವರು ಎರಡು ದಿನಗಳ ಜಪಾನ್ (Japan) ಭೇಟಿಯಲ್ಲಿದ್ದಾರೆ. ಅವರು ಆಗಸ್ಟ್ 29,  ಶುಕ್ರವಾರದಂದು ಟೋಕಿಯೊಗೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಜಪಾನಿನ ಕಲಾವಿದರು  ಭಾರತೀಯ ಉಡುಪುಗಳನ್ನು ತೊಟ್ಟು ಸಾಂಪ್ರದಾಯಿಕವಾಗಿ ಸ್ವಾಗತವನ್ನು ಕೋರಿದ್ದಾರೆ. ಅದೇ ರೀತಿ ಜಪಾನಿನಲ್ಲಿ ಅನಿವಾಸಿ ಭಾರತೀಯರು ಭಾರತದ ಬಾವುಟವನ್ನು ಹಿಡಿದು ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ್ದು, ಆ ಗುಂಪಿನಲ್ಲಿದ್ದ ಭಾರತೀಯ ಮೂಲದ ಯುವತಿಯೊಬ್ಬಳು ಮೋದಿಯನ್ನು ಕಂಡು ಭಾವುಕಳಾಗಿದ್ದಾಳೆ. ಮೋದಿ ಬರುತ್ತಿದ್ದಂತೆ ಆಕೆ ಸೇನಾ ಕಮಾಂಡರ್‌ನಂತೆ ಸೆಲ್ಯೂಟ್‌ ಹೊಡೆದಿದ್ದು, ಈ ಭಾವನಾತ್ಮಕ ದೃಶ್ಯ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಪ್ರಧಾನಿ ಮೋದಿಯನ್ನು ಕಂಡು ಭಾವುಕಳಾದ ಯುವತಿ:

ಶುಕ್ರವಾರ ಜಪಾನ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರನ್ನು ಅನಿವಾಸಿ ಭಾರತೀಯರು ತ್ರಿವರ್ಣ ಧ್ವಜವನ್ನು ಹಿಡಿದು ಭವ್ಯವಾಗಿ ಸ್ವಾಗತಿಸಿದ್ದು, ಈ ವೇಳೆಯಲ್ಲಿ ಭಾರತೀಯ ಮೂಲಕ ಯುವತಿ ಸೇನಾ ಕಮಾಂಡರ್‌ನಂತೆ ಹೆಮ್ಮೆಯಿಂದ ಮೋದಿಯವರಿಗೆ ಸೆಲ್ಯೂಟ್‌ ಹೊಡೆದಿದ್ದಾಳೆ. ಆಕೆ ಪ್ರಧಾನಿ ಮೋದಿಯವರನ್ನು ನೋಡಿ ಭಾವುಕಳಾಗಿದ್ದು, ಈ ದೃಶ್ಯ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಇದನ್ನೂ ಓದಿ
Image
ಭಾರತ ಬಿಟ್ಟು ಹೊರಡುವಾಗ ಅಮೆರಿಕನ್ ಮಹಿಳೆ ಭಾವುಕ
Image
ಮೊಬೈಲ್ ಬಳಸೋರಿಗೆ ಲಂಡನ್‌ಗಿಂತ ಮುಂಬೈ ಸೇಫ್
Image
ಭಾರತಕ್ಕೆ ಹೋಲಿಸಿದ್ರೆ ಲಂಡನ್‌ ದುಬಾರಿ, ವೈರಲ್‌ ಆಯ್ತು ಪೋಸ್ಟ್‌
Image
ಭಾರತ ಎಷ್ಟು ಸುಂದರವಾಗಿದೆ ಎಂದು ತೋರಿಸಿಕೊಟ್ಟ ವಿದೇಶಿ ವ್ಲಾಗರ್

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಆ ಯುವತಿ, “ ನಾನು ಜಪಾನ್‌ನಲ್ಲಿ 8 ವರ್ಷಗಳಿಂದ ವಾಸಿಸುತ್ತಿದ್ದೇನೆ, ನಾವು ಜಪಾನಿನಲ್ಲಿ ಸುರಕ್ಷಿತವಾಗಿ ವಾಸಿಸುತ್ತಿದ್ದೇವೆ. ಪ್ರಧಾನಿ ಮೋದಿ ಅವರ ಸಂಪರ್ಕದಿಂದಾಗಿ ನಾನು ಇಲ್ಲಿ ಸುರಕ್ಷಿತವಾಗಿದ್ದೇವೆ” ಎಂದು ಹೇಳಿದ್ದಾಳೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು Azy ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಅನಿವಾಸಿ ಭಾರತೀಯರು ಭಾರತದ ಬಾವುಟವನ್ನಿಡು ನಿಂತಿರುವ ದೃಶ್ಯವನ್ನು ಕಾಣಬಹುದು. ಅದರಲ್ಲೊಬ್ಬಳು ಯುವತಿ ಪ್ರಧಾನಿ ಮೋದಿ ಹತ್ತಿರ ಬರುತ್ತಿದ್ದಂತೆ ಬಹಳ ಹೆಮ್ಮೆಯಿಂದ ಸೆಲ್ಯೂಟ್‌ ಹೊಡೆದಿದ್ದಾಳೆ. ಆಕೆಯ ತಲೆಗೆ ಕೈಯಿಟ್ಟು ಮೋದಿ ಆಶಿರ್ವಾದ ಮಾಡಿದ್ದು, ಆಕೆ ಭಾವುಕಳಾಗಿದ್ದಾಳೆ.

ಇದನ್ನೂ ಓದಿ: ತನ್ನ ಕುಟುಂಬದೊಂದಿಗೆ ಅಮೆರಿಕಕ್ಕೆ ಮರಳುವ ಸಮಯ ಬಂತು, ಭಾರತ ಬಿಟ್ಟು ಹೊರಡುವಾಗ ಅಮೆರಿಕನ್ ಮಹಿಳೆ ಭಾವುಕ

ಆಗಸ್ಟ್‌ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಕೆಲವರು ಇದೆಲ್ಲಾ ನಾಟಕ ಎಂದು ಟೀಕಿಸಿದರೆ, ಇನ್ನೂ ಹಲವರು ನಮ್ಮ ಹೆಮ್ಮೆಯ ಪ್ರಧಾನಿ ಎಂದು ಮೋದಿಯವರನ್ನು ಹೊಗಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ