20 ವರ್ಷಗಳ ಪರಿಶ್ರಮ; ಯಂತ್ರ-ತಂತ್ರಜ್ಞಾನಗಳ ಸಹಾಯವಿಲ್ಲದೆ ಬರಿಗೈಯಲ್ಲಿ ವಿಶಿಷ್ಟವಾದ ಕಟ್ಟಡ ನಿರ್ಮಿಸಿದ ಜಪಾನ್‌ ವಾಸ್ತುಶಿಲ್ಪಿ

ಯಾವುದೇ ಒಂದು ಸಣ್ಣ ಕಟ್ಟಡವನ್ನು ಸಹ ನಿರ್ಮಿಸಬೇಕೆಂದರೆ ಮಣ್ಣನ್ನು ಅಗೆಯುವುದರಿಂದ ಹಿಡಿದು ಕಾಂಕ್ರೀಟ್‌ ಹಾಕುವವರೆಗೆ ಕೆಲವೊಂದು ಯಂತ್ರಗಳು, ಅತ್ಯಾಧುನಿಕ ತಂತ್ರಜ್ಞಾನಗಳ ಸಹಾಯ ಬೇಕೇ ಬೇಕಾಗುತ್ತದೆ. ಆದ್ರೆ ಇಲ್ಲೊಬ್ಬರು ಜಪಾನಿನ ವಾಸ್ತುಶಿಲ್ಪಿ ಯಾವುದೇ ಯಂತ್ರಗಳ ಸಹಾಯವಿಲ್ಲದೆ ಬರಿಗೈಯಲ್ಲೇ ನಾಲ್ಕು ಅಂತಸ್ತಿನ ವಿಶಿಷ್ಟ ಕಟ್ಟಡವೊಂದನ್ನು ನಿರ್ಮಾಣ ಮಾಡಿದ್ದಾರೆ. ಈ ಫ್ಯಾಂಟಸಿ ಟವರ್‌ ಅನ್ನು ನಿರ್ಮಿಸಲು ಬರೋಬ್ಬರಿ 20 ವರ್ಷಗಳು ತಗುಲಿದ್ದು, ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

20 ವರ್ಷಗಳ ಪರಿಶ್ರಮ; ಯಂತ್ರ-ತಂತ್ರಜ್ಞಾನಗಳ ಸಹಾಯವಿಲ್ಲದೆ ಬರಿಗೈಯಲ್ಲಿ ವಿಶಿಷ್ಟವಾದ ಕಟ್ಟಡ ನಿರ್ಮಿಸಿದ ಜಪಾನ್‌ ವಾಸ್ತುಶಿಲ್ಪಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Nov 29, 2024 | 2:49 PM

ಜಪಾನ್‌ ಅಲ್ಲಿನ ಜನರ ಸಮರ್ಪಣಾ ಮನೋಭಾವ, ಚಲನಶೀಲತೆ, ಕಾರ್ಯ ವೈಖರಿ, ಆಧುನಿಕ ತಂತ್ರಜ್ಞಾನದಿಂದಲೇ ಜಗತ್ತಿನ ಮುಂದುವರೆದ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಆಧುನಿಕ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿರುವ ಜಪಾನಿನಲ್ಲಿ ಬುಲೆಟ್‌ ಟ್ರೈನ್‌ನಿಂದ ಹಿಡಿದು ರೋಬೋಟ್‌ ರೆಸ್ಟೋರೆಂಟ್‌ ವರೆಗೆ ಎಲ್ಲಾ ಅತ್ಯಾಧುನಿಕ ವ್ಯವಸ್ಥೆಗಳಿವೆ. ಹೀಗಿರುವಾಗ ಇಲ್ಲೊಬ್ರು ಜಪಾನಿನ ವಾಸ್ತುಶಿಲ್ಪಿ ಆಧುನಿಕ ತಂತ್ರಜ್ಞಾನ ಮತ್ತು ಯಂತ್ರಗಳನ್ನು ಬಳಸದೆ ಬರಿಗೈಯಿಂದ ನಾಲ್ಕು ಅಂತಸ್ತಿನ ವಿಶೇಷ ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ. ಈ ಮನೆ ಈಗಲೋ, ಆಗಲೋ ಬೀಳುತ್ತೆ ಅಂತ ನೋಡಿದವರು ಅಂದುಕೊಳ್ಳಬಹುದು. ಆದರೆ ಈ ಫ್ಯಾಂಟಸಿ ಟವರ್‌ ಅನ್ನು ನಿರ್ಮಿಸಲು ಬರೋಬ್ಬರಿ 20 ವರ್ಷಗಳು ತಗುಲಿದ್ದು, 200 ವರ್ಷಗಳಿಗೂ ಹೆಚ್ಚು ಕಾಲ ಉಳಿಯುವಷ್ಟು ಗುಣಮಟ್ಟದ್ದು ಎಂದು ಇದನ್ನು ನಿರ್ಮಿಸಿದ ವಾಸ್ತುಶಿಲ್ಪಿ ಹೇಳಿದ್ದಾನೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಪ್ರತಿಯೊಂದಕ್ಕೂ ಆಧುನಿಕ ತಂತ್ರಜ್ಞಾನವನ್ನೇ ಅವಲಂಬಿತವಾಗಿರುವ ಜಪಾನಿನಲ್ಲಿ ವಾಸ್ತುಶಿಲ್ಪಿಯೊಬ್ಬರು ಯಾವುದೇ ತಂತ್ರಜ್ಞಾನಗಳ ಸಹಾಯವಿಲ್ಲದೆ ಬರಿಗೈಯಿಂದ ಕಾಂಕ್ರೀಟ್‌ ಕಟ್ಟಡವೊಂದನ್ನು ನಿರ್ಮಾಣ ಮಾಡಿದ್ದಾರೆ. ಆನಿಮೇಷನ್‌ನಿಂದ ಪ್ರೇರಣೆ ಪಡೆದ 59 ವರ್ಷ ವಯಸ್ಸಿನ ಕೇಸುಕೆ ಓಕಾ ಎಂಬವರು ಟೋಕಿಯೋದ ಬೀದಿ ಬದಿಯಲ್ಲಿ ರ್‍ಯಾಮ್‌ಶಾಕಲ್‌ ಹೆಸರಿನ ಈ ಫ್ಯಾಂಟಸಿ ಕಟ್ಟಡವನ್ನು ನಿರ್ಮಿಸಿದ್ದಾರೆ. ಈ ಕಟ್ಟಡ ಈಗ ಫುಲ್‌ ಫೇಮಸ್‌ ಆಗಿದ್ದು, ಅಂಕುಡೊಂಕಾಗಿ ಫ್ಯಾಂಟಸಿ ರೀತಿಯಲ್ಲಿರುವ ಈ ಕಟ್ಟಡವನ್ನು ಅಲ್ಲಿನ ಜನ ಅನಿಮೇಟೆಡ್‌ ಚಲನಚಿತ್ರವಾದ “ಹೌಲ್ಸ್‌ ಮೂವಿಂಗ್‌ ಕ್ಯಾಸಲ್‌” ಗೆ ಹೋಲಿಸಿದ್ದಾರೆ.

ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಜಪಾನಿನಲ್ಲಿ ಬಹುತೇಕ ಎಲ್ಲಾ ಕಟ್ಟಡಗಳನ್ನು ಅತ್ಯಾಧುನಿಕ ತಂತ್ರಜ್ಞಾನಗಳ ಸಹಾಯದಿಂದಲೇ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ತಾನು ಏನಾದರೂ ವಿಭಿನ್ನವಾಗಿ ಮಾಡಬೇಕೆಂದು ವಾಸ್ತುಶಿಲ್ಪಿ ಓಕಾ ʼರ್‍ಯಾಮ್‌ಶಾಕಲ್‌ʼ ಕಟ್ಟಡವನ್ನು ನಿರ್ಮಾಣ ಮಾಡಬೇಕೆಂದು ನಿರ್ಧಾರ ಮಾಡುತ್ತಾರೆ. ವಿಶಿಷ್ಟವಾದ ನಾಲ್ಕು ಅಂತಸ್ತಿನ ಈ ಕಟ್ಟಡವನ್ನು ನಿರ್ಮಿಸಲು ಓಕಾ ಅವರಿಗೆ ಸುಮಾರು 20 ವರ್ಷಗಳು ಬೇಕಾದವು. 2005 ರಲ್ಲಿ ಓಕಾ ಅವರು ಈ ಕಟ್ಟಡ ನಿರ್ಮಾಣವನ್ನು ಪ್ರಾರಂಭಿಸಿದ್ದು, ಕೇವಲ ಸ್ನೇಹಿತರ ಸಹಾಯವನ್ನು ಹೊರತುಪಡಿಸಿ, ಈ ಕಟ್ಟಡ ನಿರ್ಮಾಣಕ್ಕೆ ಯಾವುದೇ ಯಂತ್ರ ಅಥವಾ ತಂತ್ರಜ್ಞಾನದ ಸಹಾಯವನ್ನು ಪಡೆದಿಲ್ಲ ಎಂದು ಅವರು ಹೇಳಿದ್ದಾರೆ. ಅವರು ಸ್ವತಃ ಕೈಯಿಂದಲೇ ಕಟ್ಟಡಕ್ಕೆ ಬೇಕಾದ ಕಾಂಟ್ರೀಟ್ ಮಿಶ್ರಣಗಳನ್ನು ತಯಾರು ಮಾಡಿದ್ದು, ಇದು 200 ವರ್ಷಗಳಿಗೂ ಹೆಚ್ಚು ಕಾಲ ಬಾಳಿಕೆ ಬರುವಷ್ಟು ಉತ್ತಮ ಗುಣಮಟ್ಟದ್ದಾಗಿದೆ ಎಂದು ಅವರು ಹೇಳಿದ್ದಾರೆ.

ಇದೀಗ ಕಟ್ಟಡದ ಹೆಚ್ಚಿನ ಕೆಲಸ ಮುಗಿದಿದ್ದು, ಮೇಲಿನ ಮೂರು ಮಹಡಿಯಲ್ಲಿ ವಾಸಿಸಲು ಮತ್ತು ನೆಲ ಮಹಡಿಯಲ್ಲಿ ಸ್ಟುಡಿಯೋ ಮತ್ತು ಪ್ರದರ್ಶನ ಸ್ಥಳವಾಗಿ ರೂಪಿಸಲು ಓಕಾ ಯೋಜಿಸಿದ್ದಾರೆ. ಈ ಬಿಲ್ಡಿಂಗ್‌ ನಿರ್ಮಾಣ ಕಾರ್ಯವನ್ನು ಆರಂಭಿಸಿದಾಗ, ಬರೀ ಮೂರು ವರ್ಷಗಳಲ್ಲಿ ಯೋಜನೆಯನ್ನು ಸಂಪೂರ್ಣಗೊಳಿಸಬಹುದು ಎಂದು ಭಾವಿಸಿದ್ದೆ, ಆದರೆ ಇದು 2 ದಶಕಗಳನ್ನು ತೆಗೆದುಕೊಳ್ಳುತ್ತದೆ ಎಂಬುದು ನನಗೆ ಗೊತ್ತಿರಲಿಲ್ಲ ಎಂಬ ವಿಚಾರವನ್ನು ಸಹ ಓಕಾ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಇದೇನಿದು ಆಶ್ಚರ್ಯ… ಹುಲ್ಲು ಬಿಟ್ಟು ಜೀವಂತ ಕೋಳಿಯನ್ನು ತಿಂದ ಹಸು; ವಿಡಿಯೋ ವೈರಲ್‌

Macau Business TV ಹೆಸರಿನ ಯುಟ್ಯೂಬ್‌ ಚಾನೆಲ್‌ ಒಂದರಲ್ಲಿ ಈ ಕುರಿತ ಸಂಕ್ಷಿಪ್ತ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಓಕಾ ಅವರು ತಾನು ಯಾವ ರೀತಿ ಬರಿಗೈಯಿಂದಲೇ ರ್‍ಯಾಮ್‌ಶಾಕಲ್‌ ಕಟ್ಟಡವನ್ನು ನಿರ್ಮಾಣ ಮಾಡಿದೆ ಎಂಬ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಪರಾಧ ಕೃತ್ಯಗಳು ಕಡಿಮೆ ಆಗಲಿ ಎಂದು ಪೊಲೀಸರಿಂದ ಹೋಮ ಹವನ
ಅಪರಾಧ ಕೃತ್ಯಗಳು ಕಡಿಮೆ ಆಗಲಿ ಎಂದು ಪೊಲೀಸರಿಂದ ಹೋಮ ಹವನ
ಚನ್ನಪಟ್ಟಣದಲ್ಲಿ ನೂತನ ಶಾಸಕರ ಕಚೇರಿಯನ್ನು ಉದ್ಘಾಟಿಸಿಕೊಂಡ ಸಿಪಿ ಯೋಗೇಶ್ವರ್
ಚನ್ನಪಟ್ಟಣದಲ್ಲಿ ನೂತನ ಶಾಸಕರ ಕಚೇರಿಯನ್ನು ಉದ್ಘಾಟಿಸಿಕೊಂಡ ಸಿಪಿ ಯೋಗೇಶ್ವರ್
ಮುಲಾಜಿಲ್ಲದೆ ಯತ್ನಾಳ್​ರನ್ನು ಪಕ್ಷದಿಂದ ಉಚ್ಛಾಟಿಸಬೇಕು: ರೇಣುಕಾಚಾರ್ಯ
ಮುಲಾಜಿಲ್ಲದೆ ಯತ್ನಾಳ್​ರನ್ನು ಪಕ್ಷದಿಂದ ಉಚ್ಛಾಟಿಸಬೇಕು: ರೇಣುಕಾಚಾರ್ಯ
ರಾಜಕಾರಣವನ್ನು ಮಾಧ್ಯಮಗಳ ಮುಂದೆ ಚರ್ಚಿಸಲಾಗಲ್ಲ: ಡಿಕೆ ಶಿವಕುಮಾರ್
ರಾಜಕಾರಣವನ್ನು ಮಾಧ್ಯಮಗಳ ಮುಂದೆ ಚರ್ಚಿಸಲಾಗಲ್ಲ: ಡಿಕೆ ಶಿವಕುಮಾರ್
ಪ್ರಧಾನಿ ಮೋದಿಯೊಂದಿಗೆ ಶಿವಕುಮಾರ್ ನೀರಾವರಿ ಸೇರಿದಂತೆ ಹಲವು ವಿಷಯಗಳ ಚರ್ಚೆ
ಪ್ರಧಾನಿ ಮೋದಿಯೊಂದಿಗೆ ಶಿವಕುಮಾರ್ ನೀರಾವರಿ ಸೇರಿದಂತೆ ಹಲವು ವಿಷಯಗಳ ಚರ್ಚೆ
ಕಲಬುರಗಿ: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
ಕಲಬುರಗಿ: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
ಬಿಗ್ ಬಾಸ್ ಮನೆಯಲ್ಲಿ ರಾಜ-ಯುವರಾಣಿ ಬಂಧನ; ಮಾಡಿದ ತಪ್ಪೇನು?
ಬಿಗ್ ಬಾಸ್ ಮನೆಯಲ್ಲಿ ರಾಜ-ಯುವರಾಣಿ ಬಂಧನ; ಮಾಡಿದ ತಪ್ಪೇನು?
Daily Devotional: ಅಯ್ಯಪ್ಪ ಮಾಲೆ ಧಾರಣೆಯ ಹಿಂದಿನ ಮಹತ್ವ ತಿಳಿಯಿರಿ
Daily Devotional: ಅಯ್ಯಪ್ಪ ಮಾಲೆ ಧಾರಣೆಯ ಹಿಂದಿನ ಮಹತ್ವ ತಿಳಿಯಿರಿ
ಈ ರಾಶಿಯವರಿಗೆ ಆರು ಗ್ರಹಗಳ ಶುಭ ಫಲವಿದೆ
ಈ ರಾಶಿಯವರಿಗೆ ಆರು ಗ್ರಹಗಳ ಶುಭ ಫಲವಿದೆ
ಸೆಟ್ಟೇರಿತು ‘ಎಕ್ಕ’ ಸಿನಿಮಾ; ಖುಷಿ ಖುಷಿಯಲ್ಲಿ ಮಾತನಾಡಿದ ಯುವ ರಾಜ್​ಕುಮಾರ್
ಸೆಟ್ಟೇರಿತು ‘ಎಕ್ಕ’ ಸಿನಿಮಾ; ಖುಷಿ ಖುಷಿಯಲ್ಲಿ ಮಾತನಾಡಿದ ಯುವ ರಾಜ್​ಕುಮಾರ್