Fact Check: ಯುವತಿಯರೊಂದಿಗೆ ಆನೆ ಡ್ಯಾನ್ಸ್ ಮಾಡಿದ್ದು ನಿಜವೇ? ವೈರಲ್ ವಿಡಿಯೋದ ಹಿಂದಿನ ಸತ್ಯಾಂಶ ತೆರೆದಿಟ್ಟ ಐಎಫ್‌ಎಸ್ ಅಧಿಕಾರಿ
ಎರಡು ಮೂರು ದಿನಗಳ ಹಿಂದೆ ಯುವತಿಯರಿಬ್ಬರು ಭರತನಾಟ್ಯ ಪ್ರದರ್ಶಿಸುತ್ತಿದ್ದ ಸಂದರ್ಭದಲ್ಲಿ ಹಿಂದೆ ನಿಂತಿದ್ದ ಆನೆಯು ಅವರೊಂದಿಗೆ ನೃತ್ಯ ಮಾಡಿದ್ದಂತಹ ವಿಡಿಯೋ ಸಖತ್ ವೈರಲ್ ಆಗಿತ್ತು. ಆದರೆ ವಿಡಿಯೋದಲ್ಲಿ ತೋರಿಸಿರುವಂತೆ ಅದು ಆನೆ ಯಾವುದೇ ಕಾರಣಕ್ಕೂ ಡಾನ್ಸ್ ಮಾಡಿದ್ದಲ್ಲ ಎಂದು ಭಾರತೀಯ ಅರಣ್ಯಾಧಿಕಾರಿಯೊಬ್ಬರು ಹೇಳಿದ್ದಾರೆ. ಹಾಗಾದ್ರೆ ಆನೆಯ ನೃತ್ಯದ ಹಿಂದಿನ ವಾಸ್ತವ ಸಂಗತಿ ಏನೆಂಬುದನ್ನು ನೋಡೋಣ.
ಆನೆಗಳು ಕೂಡಾ ಮನುಷ್ಯರೊಂದಿಗೆ ಸೇರಿ ಡ್ಯಾನ್ಸ್ ಮಾಡುವಂತಹ ವಿಡಿಯೋಗಳು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಎರಡು ಮೂರು ದಿನಗಳ ಹಿಂದೆಯೂ ಯುವತಿಯರಿಬ್ಬರು ಭರತನಾಟ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಹಿಂದೆ ನಿಂತಿದ್ದ ಆನೆಯೊಂದು ಕೂಡಾ ಅವರೊಂದಿಗೆ ನೃತ್ಯ ಮಾಡಿದ್ದಂತಹ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಆನೆ ಯಾವುದೇ ಕಾರಣಕ್ಕೂ ಡಾನ್ಸ್ ಮಾಡಿದ್ದಲ್ಲ, ಅದರ ಹಿಂದಿನ ವಾಸ್ತವ ಸಂಗತಿ ಬೇರೆಯೇ ಇದೆ ಎಂದು ಭಾರತೀಯ ಅರಣ್ಯಾಧಿಕಾರಿಯೊಬ್ಬರು ವೈರಲ್ ವಿಡಿಯೋದ ಹಿಂದಿನ ಸತ್ಯಾಸತ್ಯತೆಯನ್ನು ತೆರೆದಿಟ್ಟಿದ್ದಾರೆ. ಹಾಗಾದ್ರೆ ಆನೆಯ ನೃತ್ಯದ ಹಿಂದಿನ ವಾಸ್ತವ ಸಂಗತಿ ಏನೆಂಬುದನ್ನು ನೋಡೋಣ.
ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ವೈರಲ್ ವಿಡಿಯೋದಲ್ಲಿ ಆನೆ ನೃತ್ಯ ಮಾಡಿಲ್ಲ, ಬದಲಿಗೆ ಅದು ಒತ್ತಡಕ್ಕೆ ಒಳಗಾಗಿ ಅಥವಾ ಆತಂಕಕ್ಕೊಳಗಾಗಿ ಆ ರೀತಿ ವರ್ತಿಸಿದೆ ಎಂದು ಹೇಳಿದ್ದಾರೆ. ಹೌದು ಆನೆಗಳು ಒತ್ತಡಕ್ಕೊಳಗಾದಾಗ ಅವುಗಳು ಹೀಗೆ ಲಯಬದ್ಧವಾಗಿ ತೂಗಾಡುತ್ತವೆ. ಅದು ನೃತ್ಯ ಮಾಡಿದಂತೆ ನಮಗೆ ಕಾಣುತ್ತದೆ ಎಂಬ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ (ParveenKaswan) ಈ ಕುರಿತ ಮಾಹಿತಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ವಿಡಿಯೋವನ್ನು ಶೇರ್ ಮಾಡಿ “ಆನೆ ನೃತ್ಯ ಮಾಡಿದ್ದು ನಿಜವಲ್ಲ ಅದು ಒತ್ತಡಕ್ಕೊಳಗಾದ ಸಂಕೇತವಾಗಿದೆ” ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಾಯಾನೆ ಮಗುವಿಗೆ ಜನ್ಮ ನೀಡಿದ ಬಳಿಕ ಒತ್ತಡಕ್ಕೊಳಗಾಗಿ ಅತ್ತಿಂದಿತ್ತ ಹೇಗೆ ತೂಗಾಡುತ್ತಿದೆ ನೋಡಿ ಎಂದು ಇನ್ನೊಂದು ವಿಡಿಯೋವನ್ನು ಕೂಡಾ ಶೇರ್ ಮಾಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
That elephant is stressed. It is not sign of dancing but stress. https://t.co/XdviJYkZ2q
— Parveen Kaswan, IFS (@ParveenKaswan) November 27, 2024
ಇದನ್ನೂ ಓದಿ: ಮಂಡ್ಯದಲ್ಲೊಂದು ಅಚ್ಚರಿಯ ಘಟನೆ; ಒಂದಲ್ಲ ಎಡರಲ್ಲ… ಏಕಕಾಲಕ್ಕೆ ಮೂರು ಕರುಗಳಿಗೆ ಜನ್ಮ ನೀಡಿದ ಹಸು
ನವೆಂಬರ್ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8.5 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆನೆಗಳು ಯಾವ ಕಾರಣಕ್ಕಾಗಿ ಒತ್ತಡಕ್ಕೆ ಒಳಗಾಗುತ್ತವೆʼ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ