AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಸೈಕಲ್ ಮೇಲೆ ಫುಡ್ ಡೆಲಿವರಿ ಮಾಡುತ್ತಿದ್ದ ಯುವಕ, ಒಂದೇ ನಿಮಿಷದಲ್ಲಿ ಖುಲಾಯಿಸಿತು ಅದೃಷ್ಟ, ಈ ವಿಡಿಯೋ ನೋಡಿ

ದಿನ ಬೆಳಗಾಗದರೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋವೊಂದು ಯುವಕನ ಬದುಕಿನ ನೈಜ ಚಿತ್ರಣವನ್ನು ತೆರೆದಿಟ್ಟಿದೆ. ಈ ವಿಡಿಯೋದಲ್ಲಿ ಸೈಕಲ್ ಮೇಲೆ ಫುಡ್ ಡೆಲಿವರಿ ಮಾಡುತ್ತಿದ್ದ ಯುವಕನಿಗೆ ಏಕಾಏಕಿ ಅದೃಷ್ಟ ಖುಲಾಯಿಸುವುದನ್ನು ನೋಡಬಹುದು. ಹೌದು, ಡೆಲಿವರಿ ಬಾಯ್ ಗೆ ಗೊತ್ತಾಗದಂತೆ ಸಹಾಯ ಮಾಡಿದ ಆ ವ್ಯಕ್ತಿಯ ದೊಡ್ಡ ಮನಸ್ಸಿಗೆ ನೆಟ್ಟಿಗರು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Nov 30, 2024 | 12:15 PM

Share

ಬದುಕು ಎಷ್ಟು ಕ್ರೂರ ಅಲ್ವಾ, ಕೆಲವರಿಗೆ ಐಷಾರಾಮಿ ಬದುಕು, ಇನ್ನು ಕೆಲವರಿಗೆ ಸೂರಿಲ್ಲದ ಬದುಕು. ಒಬ್ಬರಿಗೆ ಕೂತು ತಿನ್ನುವಷ್ಟು ಶ್ರೀಮಂತಿಕೆ, ಇನ್ನೊಬ್ಬರಿಗೆ ದುಡಿದರೆ ಮಾತ್ರ ಇವತ್ತಿನ ಜೀವನ ಸಾಗುವಂತಹ ಬದುಕು. ಕೆಲವರಿಗೆ ನಾಳೆಯ ಭವಿಷ್ಯದ ಚಿಂತೆಯಾದರೆ, ಇನ್ನು ಕೆಲವರಿಗೆ ಇವತ್ತು ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ ಎನ್ನುವ ಆಲೋಚನೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬನು ಜೀವನ ಸಾಗಿಸಲು ಜೊಮ್ಯಾಟೋ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ. ಆದರೆ ಈತನ ಬಳಿ ಬೈಕ್ ಖರೀದಿಸಲು ಹಣವಿಲ್ಲದ ಕಾರಣ ಸೈಕಲ್ ನಲ್ಲೇ ಪುಡಿ ಡೆಲಿವರಿ ಮಾಡುತ್ತಿದ್ದು ಏಕಾಏಕಿ ಈತನ ಅದೃಷ್ಟವು ಖುಲಾಯಿಸಿರುವ ವಿಡಿಯೋ ಇದಾಗಿದೆ.

ಈ ವಿಡಿಯೋವನ್ನು ರವಿ ಕುಮಾರ್ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಜೊಮ್ಯಾಟೋ ಫುಡ್ ಡೆಲಿವರಿ ಬಾಯ್ ಸೈಕಲ್ ಮೇಲೆ ಆಹಾರ ಪೂರೈಸುತ್ತಿರುವ ಕೆಲಸ ಮಾಡುತ್ತಿರುವುದನ್ನು ನೋಡಬಹುದು. ಗ್ರಾಹಕರ ಅಡ್ರೆಸ್ ಬರುತ್ತಿದ್ದಂತೆ ಸೈಕಲ್ ನಿಲ್ಲಿಸಿ ಫುಡ್ ಕೊಡಲು ಗ್ರಾಹಕರ ಮನೆಯ ಬಳಿ ಹೋಗುತ್ತಾನೆ. ಈ ವೇಳೆಯಲ್ಲಿ ಕಾರ್‌ನಿಂದ ಇಳಿದು ಬಂದ ವ್ಯಕ್ತಿಯೂ ಸೈಕಲ್ ಮೇಲಿರುವ ಫುಡ್ ಬಾಕ್ಸ್‌ನಲ್ಲಿ ಹಣವಿರುವ ಲಕೋಟೆಯನ್ನು ಇಟ್ಟು ಹೋಗುವುದನ್ನು ನೋಡಬಹುದು. ಇದರ ಮೇಲೆ “ನಿಮ್ಮ ಹೊಸ ಬೈಕ್‌” ಗಾಗಿ ಎಂದು ಬರೆಯಲಾಗಿದ್ದು, ಆದರೆ ಈ ಬಗ್ಗೆ ತಿಳಿಯದ ಡೆಲಿವರಿ ಬಾಯ್ ತನ್ನ ಕೆಲಸದಲ್ಲಿ ಮಗ್ನನಾಗುತ್ತಾನೆ.

ಆ ಬಳಿಕ ಆರ್ಡರ್ ಸ್ವೀಕರಿಸಲು ಯುವಕ ಹೋಟೆಲ್ ನತ್ತ ಹೋಗುತ್ತಾನೆ. ಆರ್ಡರ್ ಸ್ವೀಕರಿಸಿ ಫುಡ್ ಬಾಕ್ಸ್‌ನಲ್ಲಿಡುವಾಗ ಅಲ್ಲಿರುವ ಪಾಕೆಟ್ ತೆಗೆದು ನೋಡುತ್ತಾನೆ. ಅದರಲ್ಲಿದ್ದ ನೋಟಿನ ಕಂತೆಗಳನ್ನು ನೋಡಿ ಖುಷಿಯಿಂದ ದೇವರಿಗೆ ನಮಸ್ಕರಿಸುತ್ತಾನೆ. ಈ ವಿಡಿಯೋದ ಕೊನೆಗೆ ಸ್ಕೂಟಿ ಖರೀದಿಸಿ ವ್ಯಕ್ತಿಯೊಬ್ಬರ ಜೊತೆ ಮಾತನಾಡುವುದನ್ನು ನೋಡಬಹುದು. ಈ ವಿಡಿಯೋ 7 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದ್ದು, ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿದೆ.

ಇದನ್ನೂ ಓದಿ: ದೇವರ ವಿಗ್ರಹದ ಬಾಯಿಗೆ ಸಿಗರೇಟ್ ಇಟ್ಟು ವಿಡಿಯೋ ಮಾಡಿದ ಯುವಕ; ವಿಡಿಯೋ ವೈರಲ್​​

ಬಳಕೆದಾರರೊಬ್ಬರು, ಇವರೇ ರಿಯಲ್ ಹೀರೋ, ತಮ್ಮಲ್ಲಿಯ ಹಣವನ್ನು ಮತ್ತೊಬ್ಬರಿಗೆ ಯಾವುದೇ ಪ್ರತಿಫಲವಿಲ್ಲದೇ ನೀಡಲು ಸಹ ದೊಡ್ಡ ಮನಸ್ಸು ಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಒಳ್ಳೆಯ ಕೆಲಸ ಬ್ರದರ್, ದೇವರು ನಿಮಗೆ ಒಳ್ಳೇದು ಮಾಡಲಿ’ ಎಂದಿದ್ದಾರೆ. ಇನ್ನೊಬ್ಬರು, ‘ದೇವರು ನಮ್ಮ ಸುತ್ತಮುತ್ತಲೇ ಇದ್ದಾನೆ’ ಎಂದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ