Viral: ಗೆಳತಿ ನನ್ನ ಜೊತೆಗಿರಬೇಕೆಂದು ತನ್ನ ಗಂಡನೊಂದಿಗೆ ಮದುವೆ ಮಾಡಿಸಿದ ಮಹಿಳೆ
"ತನ್ನ ಪತ್ನಿ ಆಕೆಯ ಗೆಳತಿಯೊಂದಿಗೆ ಹೆಚ್ಚಿನ ಆತ್ಮೀಯತೆಯನ್ನು ಹೊಂದಿದ್ದಳು. ಜೊತೆಗೆ ಆಕೆ ಯಾವಾಗಲೂ ಜೊತೆಗಿರಬೇಕೆಂದು ತನ್ನೊಂದಿಗೆ ಮದುವೆ ಮಾಡಿಸಿದ್ದಳು. ಈಗ ನಾವು ಒಂದೇ ಮನೆಯಲ್ಲಿ ಸಂತೋಷವಾಗಿದ್ದೇವೆ" ಎಂದು ಮೈಕಲ್ ಹೇಳಿಕೊಂಡಿದ್ದಾನೆ.

ಸೋಶಿಯಲ್ ಮೀಡಿಯಾ ಪ್ರಭಾವಿ ವರ್ಜೀನಿಯಾ ಮೈಕಲ್ ಎಂಬ ವ್ಯಕ್ತಿ ಇತ್ತೀಚೆಗಷ್ಟೇ ತನ್ನ ಇಬ್ಬರ ಹೆಂಡಿರ ಜೊತೆಗಿನ ಸುಂದರ ಸಂಸಾರದ ಬಗ್ಗೆ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. “ತನ್ನ ಪತ್ನಿ ಆಕೆಯ ಗೆಳತಿಯೊಂದಿಗೆ ಹೆಚ್ಚಿನ ಆತ್ಮೀಯತೆಯನ್ನು ಹೊಂದಿದ್ದಳು. ಜೊತೆಗೆ ಆಕೆ ಯಾವಾಗಲೂ ಜೊತೆಗಿರಬೇಕೆಂದು ತನ್ನೊಂದಿಗೆ ಮದುವೆ ಮಾಡಿಸಿದ್ದಳು. ಈಗ ನಾವು ಮೂರು ಜನ ಹಾಗೂ ನಮ್ಮ ಒಟ್ಟು ಇಪ್ಪತ್ತೆಂಟು ಮಕ್ಕಳು ಒಂದೇ ಮನೆಯಲ್ಲಿ ಸಂತೋಷವಾಗಿದ್ದೇವೆ” ಎಂದು ಪತಿ ಮೈಕಲ್ ವಿಡಿಯೋದಲ್ಲಿ ಹೇಳಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈತನ ಮೊದಲ ಪತ್ನಿಯ ಹೆಸರು ಅಲಿಸಿಯಾ ಕೋಲ್ಸ್ ಮತ್ತು ಎರಡನೇ ಪತ್ನಿ ಜಾಸ್ಮಿನ್ ಜೋನ್ಸ್. 1999ರಲ್ಲಿ ಮೊದಲ ಪತ್ನಿ ಅಲಿಸಿಯಾ ಕೋಲ್ಸ್ ಜೊತೆ ಮದುವೆಯಾಗಿತ್ತು. ಈ ದಂಪತಿಗೆ ಒಟ್ಟು ಎಂಟು ಮಕ್ಕಳಿದ್ದಾರೆ. ಇದಲ್ಲದೇ ಅಲಿಸಿಯಾನನ್ನು ಮದುವೆಯಾಗುವ ಮೊದಲೇ ಮೈಕಲ್ಗೆ ಹತ್ತು ಮಕ್ಕಳಿದ್ದರು. ಮೈಕಲ್ ಮತ್ತು ಅಲಿಸಿಯಾ, ವರ್ಜೀನಿಯಾದಲ್ಲಿ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಗನಿಗಾಗಿ ಉರುಳು ಸೇವೆ ಮೂಲಕ ಚಾಮುಂಡಿ ಬೆಟ್ಟ ಹತ್ತಿದ ವೃದ್ಧ ತಂದೆ
2010 ರಲ್ಲಿ ಅಲಿಸಿಯಾಗೆ ಜಾಸ್ಮಿನ್ನ ಪರಿಚಯವಾಗಿದೆ. ಇವರಿಬ್ಬರ ಪರಿಚಯ ಆಳವಾಗಿ ಬೆಳೆದಿದ್ದು, ತನ್ನ ಪತಿಯನ್ನೇ ಮದುವೆಯಾಗುವಂತೆ ಅಲಿಸಿಯಾ ಜಾಸ್ಮಿನ್ ಬಳಿ ಕೇಳಿಕೊಂಡಿದ್ದಾಳೆ. ಬಳಿಕ ಮದುವೆಯಾಗಿದ್ದು ಮೈಕಲ್ ಮತ್ತು ಜಾಸ್ಮೀನ್ ಎಂಟು ಮಕ್ಕಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




