AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಬಿದರೆ ನಂಬಿ ಬಿಟ್ಟರೆ ಬಿಡಿ!: 1994ರಲ್ಲಿ ನಾಪತ್ತೆಯಾಗಿದ್ದ ಹುಡುಗಿ ಸಿಕ್ಕಿದ್ದು ಹೇಗೆ? ಈಗ ಆಕೆ ವಯಸ್ಸು ಎಷ್ಟು?

ಅಮೆರಿಕದಲ್ಲಿ 30 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳು ಜೀವಂತ ಪತ್ತೆಯಾಗಿದ್ದಾಳೆ. ಆಧುನಿಕ DNA ತಂತ್ರಜ್ಞಾನ ಮತ್ತು 'ಕೋಲ್ಡ್ ಕೇಸ್' ತನಿಖೆಯಿಂದ ಈ ಪವಾಡ ಸಾಧ್ಯವಾಗಿದೆ. ಅನಿಶ್ಚಿತತೆಯಲ್ಲಿ ಕಾದಿದ್ದ ಕುಟುಂಬಕ್ಕೆ ಇದು ಆಕಾಶದಿಂದ ಬಂದ ಹೂವಾಗಿದೆ. ದಶಕಗಳ ನಂತರ ಕುಟುಂಬದೊಂದಿಗಿನ ಆಕೆಯ ಮರುಮಿಲನವು ಎಲ್ಲರನ್ನೂ ಭಾವುಕರನ್ನಾಗಿಸಿದೆ. ಪೊಲೀಸರು ಆಕೆಯ ನಾಪತ್ತೆಯ ಹಿಂದಿನ ರಹಸ್ಯ ಭೇದಿಸಲು ತನಿಖೆ ಮುಂದುವರಿಸಿದ್ದಾರೆ.

ನಂಬಿದರೆ ನಂಬಿ ಬಿಟ್ಟರೆ ಬಿಡಿ!: 1994ರಲ್ಲಿ ನಾಪತ್ತೆಯಾಗಿದ್ದ ಹುಡುಗಿ ಸಿಕ್ಕಿದ್ದು ಹೇಗೆ? ಈಗ ಆಕೆ ವಯಸ್ಸು ಎಷ್ಟು?
ವೈರಲ್​ ಪೋಸ್ಟ್​
ಅಕ್ಷಯ್​ ಪಲ್ಲಮಜಲು​​
|

Updated on: Apr 04, 2026 | 3:45 PM

Share

ವಾಷಿಂಗ್ಟನ್, ಏ.4: ದಶಕಗಳ ಕಾಲದ ಹುಡುಕಾಟ, ಕಳೆದು ಹೋದ ಹುಡುಗಿ ಮತ್ತೆ ಸಿಗುತ್ತಾಳೆ ಎಂಬ ಭರವಸೆ, ನಿರಂತರ ಅನಿಶ್ಚಿತತೆಯ ನಂತರ ಅಮೆರಿಕದಲ್ಲಿ ಒಂದು ದೊಡ್ಡ ಪವಾಡ ನಡೆದಿದೆ. 13 ವರ್ಷದವಳಿದ್ದಾಗ ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳು ಮೂರು ದಶಕಗಳ (30 ವರ್ಷ) ನಂತರ ಜೀವಂತವಾಗಿ ಪತ್ತೆಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ. ಇದೀಗ ಈ ವಿಚಾರ ಭಾರೀ ವೈರಲ್​ ಆಗುತ್ತಿದೆ.

ಸುಮಾರು 30 ವರ್ಷಗಳ ಹಿಂದೆ ಅಂದರೆ ಮೇ 1994 ರಲ್ಲಿ ಈ ಬಾಲಕಿ ತನ್ನ ಮನೆಯ ಸಮೀಪದಿಂದಲೇ ಕುದುರೆ ಲಾಯಕ್ಕೆ ತನ್ನ ಕುದುರೆ ಸವಾರಿ ಮಾಡಲು ಹೋದವಳು ಅಲ್ಲಿಂದ ನಾಪತ್ತೆಯಾಗಿದ್ದಳು. ಅಂದಿನಿಂದ ಪೊಲೀಸರು ಮತ್ತು ಕುಟುಂಬದವರು ಆಕೆಯನ್ನು ಹುಡುಕಲು ಹರಸಾಹಸ ಪಟ್ಟಿದ್ದರು. ವರ್ಷಗಳು ಕಳೆದಂತೆ ಆಕೆ ಜೀವಂತವಾಗಿರುವ ಸಾಧ್ಯತೆ ಕಡಿಮೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇತ್ತೀಚಿನ ತಾಂತ್ರಿಕ ಪ್ರಯೋಗ ಹಾಗೂ ತನಿಖಾ ಸಂಸ್ಥೆಗಳ ಸತತ ಪ್ರಯತ್ನದಿಂದ ಆಕೆಯ ಸುಳಿವು ದೊರೆತಿದೆ.

ಇಲ್ಲಿದೆ ನೋಡಿ ಪೋಸ್ಟ್​;

ವರದಿಗಳ ಪ್ರಕಾರ, ಆಧುನಿಕ ಡಿಎನ್‌ಎ (DNA) ತಂತ್ರಜ್ಞಾನ ಮತ್ತು ‘ಕೋಲ್ಡ್ ಕೇಸ್’ (Cold Case) ತನಿಖಾ ತಂಡದ ವಿಶೇಷ ಪ್ರಯತ್ನದಿಂದ ಈ ಬಾಲಕಿಯನ್ನು ಗುರುತಿಸಲಾಗಿದೆ. ಆಕೆ ಈಗ ವಯಸ್ಕ ಮಹಿಳೆಯಾಗಿದ್ದು, ದಶಕಗಳ ನಂತರ ತನ್ನ ಮೂಲ ಕುಟುಂಬವನ್ನು ಸೇರುವ ಮೂಲಕ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಆಕೆ ಇಷ್ಟು ವರ್ಷಗಳ ಕಾಲ ಎಲ್ಲಿದ್ದಳು ಮತ್ತು ಆಕೆಯನ್ನು ಯಾರಾದರೂ ಅಪಹರಿಸಿದ್ದರೇ ಎಂಬ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Video: ತನ್ನ ಕಂದಮ್ಮನಿಗೆ ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಯುವಕನಿಗೆ ಧನ್ಯವಾದ ತಿಳಿಸಿದ ಯುವಕ

ತಮ್ಮ ಮಗಳು ಮರಳಿ ಬರುತ್ತಾಳೆ ಎಂಬ ನಂಬಿಕೆಯನ್ನೇ ಕಳೆದುಕೊಂಡಿದ್ದ ಪೋಷಕರಿಗೆ ಈ ಸುದ್ದಿ ಆಕಾಶದಿಂದ ಬಂದ ಹೂವಿನಂತಾಗಿದೆ. “ಇದು ನಮಗೆ ನಂಬಲು ಸಾಧ್ಯವಾಗದ ಕ್ಷಣ, ನಮ್ಮ ಪ್ರಾರ್ಥನೆಗಳಿಗೆ ಫಲ ಸಿಕ್ಕಿದೆ” ಎಂದು ಆಕೆಯ ಕುಟುಂಬದವರು ಭಾವುಕರಾಗಿ ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
SIR ವೇಳೆ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು
SIR ವೇಳೆ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು
ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ
ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ
ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು
ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು
ಬಿಜೆಪಿ ಸಭೆ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್
ಬಿಜೆಪಿ ಸಭೆ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್
ಸಿಪಿ ಯೋಗೇಶ್ವರ್ ಪುತ್ರನಿಗೆ ಶುಭ ಹಾರೈಸಿದ ಸಿಎಂ ಹೇಳಿದ್ದೇನು? ವಿಡಿಯೋ ನೋಡಿ
ಸಿಪಿ ಯೋಗೇಶ್ವರ್ ಪುತ್ರನಿಗೆ ಶುಭ ಹಾರೈಸಿದ ಸಿಎಂ ಹೇಳಿದ್ದೇನು? ವಿಡಿಯೋ ನೋಡಿ
ರಾಮ ಮಂದಿರದ ದೇಣಿಗೆ ಲೂಟಿ: ಕದ್ದ ಹಣದಲ್ಲಿ ಪ್ರೇಮ ಪುರಾಣ, ಲವರ್​ಗೆ ಗಿಫ್ಟ್!
ರಾಮ ಮಂದಿರದ ದೇಣಿಗೆ ಲೂಟಿ: ಕದ್ದ ಹಣದಲ್ಲಿ ಪ್ರೇಮ ಪುರಾಣ, ಲವರ್​ಗೆ ಗಿಫ್ಟ್!
ಕೆ ಸುಧಾಕರ್‌ ಜೊತೆಗಿನ ವೈಮನಸಿನ ಬಗ್ಗೆ ಬಿಜೆಪಿ ಸಭೆಯಲ್ಲಿ ಚರ್ಚೆ ಆಯ್ತಾ?
ಕೆ ಸುಧಾಕರ್‌ ಜೊತೆಗಿನ ವೈಮನಸಿನ ಬಗ್ಗೆ ಬಿಜೆಪಿ ಸಭೆಯಲ್ಲಿ ಚರ್ಚೆ ಆಯ್ತಾ?
ವಿಶ್ವ ವಿಖ್ಯಾತ ಜೋಗ್ ಫಾಲ್ಸ್ ಗೆ ರಾಜಕಳೆ
ವಿಶ್ವ ವಿಖ್ಯಾತ ಜೋಗ್ ಫಾಲ್ಸ್ ಗೆ ರಾಜಕಳೆ
ಸಿಪಿ ಯೋಗೇಶ್ವರ್ ಪುತ್ರನ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದ ಸಿಎಂ ಡಿಕೆಶಿ
ಸಿಪಿ ಯೋಗೇಶ್ವರ್ ಪುತ್ರನ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದ ಸಿಎಂ ಡಿಕೆಶಿ